ಕರ್ನಾಟಕದ 19 ಅಧಿಕಾರಿಗಳಿಗೆ ಪೊಲೀಸ್ ಮೆಡಲ್ ಗೌರವ

Published : Jan 25, 2021, 04:05 PM ISTUpdated : Jan 25, 2021, 04:11 PM IST
ಕರ್ನಾಟಕದ 19 ಅಧಿಕಾರಿಗಳಿಗೆ ಪೊಲೀಸ್ ಮೆಡಲ್ ಗೌರವ

ಸಾರಾಂಶ

ಕರ್ನಾಟಕದ ಅಧಿಕಾರಿಗಳಿಗೆ ಪೊಲೀಸ್ ಮೆಡಲ್/ ಗಣರಾಜ್ಯೋತ್ಸವದ ದಿನ ರಾಷ್ಟ್ರಪತಿಗಳಿಂದ ಪ್ರದಾನ/ ಕರ್ನಾಟಕದ  19 ಪೊಲೀಸ್ ಅಧಿಕಾರಿಗಳಿಗೆ  ಗೌರವ

ನವದೆಹಲಿ(ಜ. 25) ಕರ್ನಾಟಕದ 19 ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ಮೆಡಲ್ ಪುರಸ್ಕಾರ ದೊರೆತಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪುರಸ್ಕಾರವನ್ನು ಗಣರಾಜ್ಯೋತ್ಸವದ ದಿನ ಪ್ರದಾನ ಮಾಡಲಿದ್ದಾರೆ.

ಒಟ್ಟು 650 ಅಧಿಕಾರಿಗಳಿಗೆ ಪ್ರಧಾನಮಂತ್ರಿ ಪೊಲೀಸ್ ಮೆಡಲ್ ಪುರಸ್ಕಾರ ದೊರೆತಿದೆ.  ಉತ್ತರ ಪ್ರದೇಶದ  72 ಅಧಿಕಾರಿಗಳು ಗೌರವಕ್ಕೆ ಪಾತ್ರವಾಗಿದ್ದಾರೆ.

ಕ್ರೀಡಾ ಸಾಧಕರಿಗೆ ಪೊಲೀಸ್ ಇಲಾಖೆಯಲ್ಲಿ  ನೇರ ನೇಮಕ

ಪೊಲೀಸ್ ಮೆಡಲ್ ಪುರಸ್ಕಾರ ಪಡೆದ ಕರ್ನಾಟಕದ ಅಧಿಕಾರಿಗಳ ಪಟ್ಟಿ
* ಡಾ. ಸುಬ್ರಮಣ್ಯ ರಾವ್ ಅಯ್ಯಂಕಿ( ಗುಪ್ತಚರದಳದ ಐಜಿಪಿ)
* ಬಾಬ್ ಸಾಬ್ ಶಿವನಗೌಡ ನೇಮಗೌಡ(ಎಸಿಬಿ, ಬೆಳಗಾವಿ, ಎಸ್‌ಪಿ)
*ಬಸವಣ್ಣಪ್ಪ ರಾಮಚಂದ್ರ( ಹಣಕಾಸು ಸಿಐಡಿ ಗುಪ್ತರ ವಿಭಾಗ ಡಿವೈಎಸ್‌ಪಿ) 
* ಅಶೋಕ ಡಿ. (ಬೆಂಗಳೂರು ರೈಲ್ವೆ ವಿಭಾಗ ಡಿವೈಎಸ್‌ಪಿ)
* ಸಿ ಬಾಲಕೃಷ್ಣ(ಬಿಡಿಎ ಸ್ಪೆಶಲ್ ಟಾಸ್ಕ್ ಪೋರ್ಸ್, ಡಿವೈಎಸ್‌ಪಿ) 
* ವಾಸುದೇವ್ ವಿಕೆ(  ಕರ್ನಾಟಕ ರಾಜ್ಯ ಪೊಲೀಸ್ ಅಪರಾಧ ವಿಭಾಗ, ಡಿವೈಎಸ್‌ಪಿ) 
* ಬಾಲಚಂದ್ರ ನಾಯ್ಕ್( ಚಿತ್ರದುರ್ಗ ಗ್ರಾಮೀಣ ಇನ್ಸ್ ಪೆಕ್ಟರ್) 
* ಹೊನ್ನಗಂಗಯ್ಯ ಈಶ್ವರಯ್ಯ( ಗುಪ್ತಚರದಳ ಅಸಿಸ್ಟಂಟ್ ಸಬ್ ಇನ್ಸ್ ಪೆಕ್ಟರ್)
* ಪ್ರಕಾಶ್( ಉಡುಪಿ ಡಿಸಿಆರ್‌ಬಿ  ಅಸಿಸ್ಟಂಟ್ ಸಬ್ ಇನ್ಸ್ ಪೆಕ್ಟರ್)
* ಬಸವಯ್ಯ ಪುಟ್ಟಸ್ವಾಮಿ( ಚಾಮರಾಜನಗರ ಮಹಿಳಾ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್) 
* ವೆಂಕಟೇಶ( ಕೆಎಸ್‌ಆರ್‌ಪಿ ಬೆಂಗಳೂರು, ಸ್ಪೆಶಲ್ ಅಸಿಸ್ಟಂಟ್ ಸಬ್  ಇನ್ಸ್ ಪೆಕ್ಟರ್) 
*ಮೋಹನ್ ರಾಜು( ಕೆಎಸ್‌ಆರ್‌ಪಿ ಬೆಂಗಳೂರು, ಸ್ಪೆಶಲ್ ಅಸಿಸ್ಟಂಟ್ ಸಬ್  ಇನ್ಸ್ ಪೆಕ್ಟರ್) 
* ವೆಂಕಟಸ್ವಾಮಿ  ಚಿನ್ನಪ್ಪ( ಕೆಎಸ್‌ಆರ್‌ಪಿ ಬೆಂಗಳೂರು, ಸ್ಪೆಶಲ್ ಅಸಿಸ್ಟಂಟ್ ಸಬ್  ಇನ್ಸ್ ಪೆಕ್ಟರ್)
* ಶಶಿಕುಮಾರ್( ಗುಪ್ತಚರದಳ, ಅಸಿಸ್ಟಂಟ್ ಸಬ್  ಇನ್ಸ್ ಪೆಕ್ಟರ್) 
* ಜೀತೇಂದ್ರ ಕುಡುಕಡಿ ರಾಧಾಕೃಷ್ಣ ರೈ( ಡಿಕೆಆರ್ ಕೊಡಗು, ಅಸಿಸ್ಟಂಟ್ ಸಬ್  ಇನ್ಸ್ ಪೆಕ್ಟರ್)
* ರಾಮಚಂದ್ರ  ಲೋಕೇಶ್( ಮೈಸೂರು ಡಿಎಆರ್ ಹೆಡ್ ಕಾನ್ಸಟೇಬಲ್) 
* ಉಸ್ಮಾನ್ ಸಾಬ್( ತಿಪಟೂರು ಟೌನ್ ಸಿವಿಲ್ ಹೆಡ್ ಕಾನ್ಸಟೇಬಲ್) 
* ಸತೀಶ್ ಕೆಂಪಯ್ಯ ವೆಂಕಟಪ್ಪ( ಸಿಐಡಿ ಹೆಡ್ ಕಾನ್ಸಟೇಬಲ್) 
* ಪ್ರಕಾಶ್ ಶೆಟ್ಟಿ( ಕೆಎಸ್‌ಆರ್‌ಪಿ ಹೆಡ್ ಕಾನ್ಸಟೇಬಲ್)

ಕರ್ನಾಟಕದ ಇಬ್ಬರು ಬಾಲಕರಿಗೆ 2021ನೇ ಸಾಲಿನ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ದೊರೆತಿದೆ. ಕೇಂದ್ರ ಸರ್ಕಾರ ನೀಡುವ 2021ನೇ ಸಾಲಿನ ಪ್ರಶಸ್ತಿಗೆ ಒಟ್ಟು 32 ಮಕ್ಕಳು ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ರಾಕೇಶ್ ಕೃಷ್ಣ ಹಾಗೂ ಬೆಂಗಳೂರಿನ ವೀರ್ ಕಶ್ಯಪ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

 

PREV
click me!

Recommended Stories

ಸ್ಕೂಲ್ ಬಸ್ ಹರಿದು 8 ವರ್ಷದ ಬಾಲಕಿ ಸಾವು; ಚಾಲಕನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿ
ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!