Bengaluru: ವಿಧಾನಸೌಧದ ಮೂರನೇ ಮಹಡಿಯಲ್ಲಿ ಬೆಂಕಿ ಅವಘಡ

By Suvarna NewsFirst Published Jul 16, 2022, 9:28 PM IST
Highlights

Fire Breaks Out at Vidhana Soudha: ವಿಧಾನಸೌಧ ಮೂರನೇ ಮಹಡಿಯ  ಮೀಟಿಂಗ್ ಹಾಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ

ಬೆಂಗಳೂರು (ಜು. 16): ವಿಧಾನಸೌಧ (Vidhana Soudha) ಮೂರನೇ ಮಹಡಿಯ  ಮೀಟಿಂಗ್ ಹಾಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೂರನೇ ಅಂತಸ್ಥಿನ  ಮಿಟೀಂಗ್‌ ಹಾಲ್‌ನ ಎಸಿಯಲ್ಲಿ (AC) ಬೆಂಕಿ ಕಾಣಿಸಿಕೊಂಡಿದ್ದು ಸಚಿವಾಲಯದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹಾಲ್‌ನಲ್ಲಿದ್ದ ಎಸಿಯಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.  ಸ್ಥಳಕ್ಕೆ ವಿಧಾನ ಸೌಧ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಸಂಜೆ 6:45ರ ಸುಮಾರಿಗೆ ಈ ಘಟನೆ ನಡೆದಿದ್ದು ಯಾವುದೇ ಹೆಚ್ಚಿನ ಹಾನಿಯಾಗಿಲ್ಲ. 

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ವಿಧಾನಸೌಧ ಸಿಬ್ಬಂದಿ ಅಲರ್ಟ್‌ ಆಗಿದ್ದು ಅಗ್ನಿಶಾಮಕ ಸಾಧನ (Fire Extinguisher) ಬಳಸಿ ಬೆಂಕಿ ನಂದಿಸಿದ್ದಾರೆ. ಹಾಲ್‌ನಲ್ಲಿ ಅಳವಡಿಸಿಲಾಗಿದ್ದ ಎಸಿಯಲ್ಲಿ ಕಾಣಿಸಕೊಂಡ ಬೆಂಕಿಯನ್ನು ಏಣಿ ಹತ್ತಿ ಸಿಬ್ಬಂದಿ ನಂದಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶಿಲನೆ ನಡೆಸಿದ್ದಾರೆ. 

Latest Videos

ಮಕ್ಕಳ ಆಸ್ಪತ್ರೆಗೆ ಬೆಂಕಿ: 13 ಕಂದಮ್ಮಗಳ ರಕ್ಷಣೆ:  ಜೂನ್‌ 25ರಂದು ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಆಸ್ಪತ್ರೆಯೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿತ್ತು. ಘಟನೆಯಲ್ಲಿ 13 ನವಜಾತ ಶಿಶುಗಳು ಸೇರಿದಂತೆ 60 ಕ್ಕೂ ಹೆಚ್ಚು ರೋಗಿಗಳನ್ನು ರಕ್ಷಿಸಲಾಗಿತ್ತು. ಅಹ್ಮದಾಬಾದ್‌ನಲ್ಲಿರುವ ಪರಿಮಳ ಗಾರ್ಡನ್‌ನಲ್ಲಿರುವ ದೇವ ಕಾಂಪ್ಲೆಕ್ಸ್‌ನಲ್ಲಿ ಈ ಅನಾಹುತ ಸಂಭವಿಸಿತ್ತು. 

ಇದನ್ನೂ ಓದಿ:  ಟ್ರಕ್‌ಗೆ ಬಿತ್ತು ಬೆಂಕಿ: 20 ಟನ್ ಆಲೂಗಡ್ಡೆ ಚಿಪ್ಸ್ ಭಸ್ಮ

ಈ ಕಟ್ಟಡದಲ್ಲಿ ಮಕ್ಕಳ ಆಸ್ಪತ್ರೆ ಇರುವುದರಿಂದ ಆಸ್ಪತ್ರೆಗೆ ದಾಖಲಾಗುವ ನವಜಾತ ಶಿಶುಗಳು ಸೇರಿದಂತೆ ಅನೇಕರ ಜನರ ಪ್ರಾಣಕ್ಕೆ ಅಪಾಯ ಎದುರಾಗಿತ್ತು. ಬೆಂಕಿ ಅವಘಡದ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ  ಕೂಡಲೇ ಸ್ಥಳಕ್ಕೆ ಆಗಮಿಸಿ 13 ನವಜಾತ ಶಿಶುಗಳು ಸೇರಿದಂತೆ 60 ಕ್ಕೂ ಹೆಚ್ಚು ಜನರನ್ನು ರಕ್ಷಿಸಿತ್ತು.  

ಪರಿಮಳ್ ಗಾರ್ಡನ್ ಬಳಿಯ ಇರುವ ದೇವ್ ಕಾಂಪ್ಲೆಕ್ಸ್‌ನಲ್ಲಿರುವ ಸರ್ವರ್ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯಿಂದಾಗಿ ಈ ಕಟ್ಟಡದಲ್ಲಿರುವ ಮಕ್ಕಳ ಆಸ್ಪತ್ರೆಯಲ್ಲಿರುವ ಮಕ್ಕಳ ಪ್ರಾಣಕ್ಕೆ ಅಪಾಯ ತಂದೊಡ್ಡಿತ್ತು. ಬೆಂಕಿ ಅವಘಡದ ನಂತರ, ಜನರು ತಮ್ಮ ಕೈಯಲ್ಲಿ ನವಜಾತ ಶಿಶುಗಳನ್ನು ಹಿಡಿದುಕೊಂಡು ಓಡುತ್ತಿರುವುದು ಕಂಡು ಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್‌ ಆಗಿತ್ತು.  

click me!