ಚಿಕ್ಕಮಗಳೂರು, (ಜುಲೈ16): ಕಳೆದ 5 ತಿಂಗಳಿನಿಂದ ಖಾಲಿ ಇದ್ದ ಚಿಕ್ಕಮಗಳೂರು ಜಿಲ್ಲೆಗೆ ಕೊನೆಗೂ ಉಸ್ತುವಾರಿ ಸಚಿವರು ಸಿಕ್ಕಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಬೈರತಿ ಬಸವರಾಜ್ ಅವರನ್ನು ದಿಢೀರ್ ನೇಮಕ ಮಾಡಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ.
ಚಿಕ್ಕಮಗಳೂರು, (ಜುಲೈ16): ಕಳೆದ 5 ತಿಂಗಳಿನ ನಂತರ ಚಿಕ್ಕಮಗಳೂರು ಜಿಲ್ಲೆಗೆ ಕೊನೆಗೂ ಉಸ್ತುವಾರಿ ಸಚಿವರು ಸಿಕ್ಕಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಬೈರತಿ ಬಸವರಾಜ್ ಅವರನ್ನು ದಿಢೀರ್ ನೇಮಕ ಮಾಡಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ.
ಬೈರತಿ ಈಗಾಗಲೇ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಈ ಹಿಂದೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆಎಸ್ ಈಶ್ವರಪ್ಪ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆದರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನ ಹಾಗೆಯೇ ಉಳಿದಿತ್ತು. ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಭಾರಿ ಪ್ರಮಾಣದಲ್ಲಿ ಹಾನಿ ಹಿನ್ನೆಲೆಯಲ್ಲಿ ನೋಡಿಕೊಳ್ಳುವುದಕ್ಕೆ ಯಾರು ಇರಲಿಲ್ಲ. ಅದಕ್ಕಾಗಿಯೇ ಸರ್ಕಾರ ತಕ್ಷಣ ಜಾರಿಗೆ ಬರುವಂತೆ ಬೈರತಿ ಬಸವರಾಜ್ ಅವರನ್ನು ಪರಿಶೀಲನೆ ಹಾಗೂ ಪರಿಹಾರ ನೋಡಿಕೊಳ್ಳುವುದಕ್ಕಾಗಿ ಉಸ್ತುವಾರಿಯನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಕಳೆದ ಐದು ತಿಂಗಳಿನಿಂದ ಜಿಲ್ಲೆಗೆ ಉಸ್ತುವಾರಿ ಸಚಿವರಿಲ್ಲದೆ ಪ್ರವಾಹ ಪರಿಸ್ಥಿತಿ ಉಂಟಾದರೂ ಮಲೆನಾಡಿಗರ ಗೋಳು ಕೇಳುವವರಿರಲಿಲ್ಲ. ಹಳ್ಳದಲ್ಲಿ ಕೊಚ್ಚಿ ಹೋದ ಹೊಸಪೇಟೆ ಬಾಲಕಿ ಮನೆಗೆ ಯಾರೊಬ್ಬರು ತೆರಳದೇ ಇದ್ದದ್ದು, ಜನರ ಆಕ್ರೋಶಕ್ಕೆ ಕಾರಣವಾಗಿತ್ತು.ಅಲ್ಲದೆ ಮಲೆನಾಡಿನಲ್ಲಿ ಮಳೆಯಿಂದ ಉಂಟಾಗುತ್ತಿರುವ ಸರಣಿ ಅನಾಹುತ, ಮನೆ ಕಳೆದಕಕೊಂಡ ಜನರಿಗೆ ಸ್ವಾಂತನ ಹೇಳಲು ಯಾವುದೇ ಸಚಿವರ ಬಾರದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ ಜನರ ಆಕ್ರೋಶ ಬಗ್ಗೆ ವರದಿ ಪ್ರಸಾರವಾಗಿತ್ತು.
ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಬೈರತಿ ಭೇಟಿ
ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಬೈರತಿ ಬಸವರಾಜ್ ಅವರು ಕೂಡಲೇ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿ, ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನ ವೀಕ್ಷಣೆ ಮಾಡಿದರು.
ಅರೆನೂರಿನಲ್ಲಿ ಭೂಕುಸಿತವಾಗಿದ್ದ ಕಾಫಿ ತೋಟ ನೋಡಲು ತೆರಳಿದ್ದ ಸಂದರ್ಭದಲ್ಲಿ ಮಣ್ಣು ಕುಸಿದಿದ್ದ ಸ್ಥಳದಲ್ಲಿ ಕಾಲಿಟ್ಟು ಸಚಿವರು ಹೊರಬರಲಾರದೆ ಪರದಾಡಿದ ಘಟನೆ ನಡೆಯಿತು. ಕೊನೆಗೆ ಸ್ಥಳೀಯರ ನೆರವಿನಿಂದ ಕಷ್ಟ ಪಟ್ಟು ಹೊರಬಂದರು. ಮಳೆಯಿಂದ ಮನೆ ಕಳೆದಕೊಂಡಿರುವ ಸಂತ್ರಸ್ಥರಿಗೆ ಸ್ವಾಂತನವನ್ನು ಸಚಿವರು ಹೇಳಿದರು. ಟಾರ್ಪಲ್ ಕಟ್ಟಿಕೊಂಡು ವಾಸಿಸುತ್ತಿರುವ ಲೀಲಾ ಮನೆಗೆ ಭೇಟಿ ನೀಡಿ, ಅವರ ಕಣ್ಣೀರಿನ ಕಥೆ ಕೇಳಿ ಸ್ಥಳದಲ್ಲೇ 50 ಸಾವಿರ ರೂಪಾಯಿ ನೆರವು ನೀಡಿದರು.