ಬೆಂಗಳೂರು: ಪ್ಲೇವುಡ್ ಗೋಡೌನ್‌ನಲ್ಲಿ ಅಗ್ನಿ ಅವಘಡ, ತಪ್ಪಿದ ಭಾರೀ ದುರಂತ..!

By Girish Goudar  |  First Published Jan 15, 2023, 6:55 AM IST

ಸಂಪೂರ್ಣ ಗೋಡೌನ್‌ಗೆ ಬೆಂಕಿ ಆವರಿಸಿದೆ.  ಬೆಂಕಿಯನ್ನ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸವನ್ನೇ ಪಡುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಪ್ಲೇ ವುಡ್ ಬೆಂಕಿಗೆ ಆಹುತಿಯಾಗಿದೆ.


ಬೆಂಗಳೂರು(ಜ.15): ಪ್ಲೇವುಡ್ ಗೋಡೌನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬೆಂಗಳೂರಿನ ಟಿಂಬರ್ ಲೇಔಟ್‌ನಲ್ಲಿ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. 

ನವೀನ್ ಗುಪ್ತಾ ಎಂಬುವವರಿಗೆ ಗೋಡೌನ್‌ ಸೇರಿದೆ ಅಂತ ತಿಳಿದು ಬಂದಿದೆ. ಸಂಪೂರ್ಣ ಗೋಡೌನ್‌ಗೆ ಬೆಂಕಿ ಆವರಿಸಿದೆ.  ಬೆಂಕಿಯನ್ನ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸವನ್ನೇ ಪಡುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಪ್ಲೇ ವುಡ್ ಬೆಂಕಿಗೆ ಆಹುತಿಯಾಗಿದೆ. 

Tap to resize

Latest Videos

Bengaluru satish store:ತಡರಾತ್ರಿ ಭಾರೀ ಅಗ್ನಿ ಅವಘಡ: ಪೂಜಾ ಸಾಮಗ್ರಿ ಗೋದಾಮಿ ಬೆಂಕಿ!

ನವೀನ್ ಗುಪ್ತ ಅವರು 7 ವರ್ಷದಿಂದ ಗೋಡೌನ್‌ ನಡೆಸುತ್ತಿದ್ದರು, ನಿನ್ನೆ(ಶನಿವಾರ) ಸಂಜೆ ಎಂದಿನಂತೆ ಮಾಲೀಕರು ಗೋಡೌನ್‌ಗೆ ಬೀಗ ಹಾಕಿ‌ ಹೋಗಿದ್ದರು. ಗೋಡೌನ್‌ನಲ್ಲಿ ಯಾರು ಇಲ್ಲದ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ ಕ್ಷಣದಿಂದ‌‌ ಕ್ಷಣಕ್ಕೆ ಹೆಚ್ಚಾಗುತ್ತಿದೆ.

ತಪ್ಪಿದ ಭಾರೀ ಅನಾಹುತ

ಪ್ಲೇವುಡ್ ಗೋಡೌನ್‌ ಪಕ್ಕದಲ್ಲೇ ಹೆಚ್‌ಪಿ ಗ್ಯಾಸ್ ಗೋಡೌನ್‌ ಸಹ ಇತ್ತು ಅಂತ ತಿಳಿದು ಬಂದಿದೆ. ಗೋಡೌನ್‌ನಲ್ಲಿ 580 ಲೋಡೆಡ್ ಸಿಲಿಂಡರ್‌ಗಳಿದ್ದವು. ಕೂಡಲೇ ಎಚ್ಚೆತ್ತ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಅಷ್ಟೂ ಸಿಲಿಂಡರ್‌ಗಳನ್ನ ಕೂಡಲೇ ಶಿಫ್ಟ್ ಮಾಡಿದ್ದಾರೆ. 

click me!