
ಬಳ್ಳಾರಿ: ಮಾಡೆಲ್ ಹೌಸ್‌ಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಅಪ್ರಾಪ್ತರು ಸೇರಿದಂತೆ ಒಟ್ಟು ಎಂಟು ಜನರನ್ನು ಬಂಧಿಸಲಾಗಿದೆ ಎಂದು ಐಜಿ ಹರ್ಷ ಮಾಹಿತಿ ನೀಡಿದ್ದಾರೆ. ವಿಚಾರಣೆ ಮುಗಿದ ನಂತರ ವಿವರಣೆ ನೀಡಲಾಗುವುದು ಎಂದು ಹೇಳಿದ್ದಾರೆ. ಹತ್ತು ವರ್ಷದಿಂದ ಯಾರು ಓಡಾಟ ಇಲ್ಲದ ಲೇಔಟ್‌ನಲ್ಲಿ ನಿತ್ಯ ಯುವಕರು ಓಡಾಟ ನಡೆಸುತ್ತಿದ್ದರು. ಜನವಸತಿ ಇಲ್ಲದ ಈ ಪ್ರದೇಶದಲ್ಲಿ ಯುವಕರು ರೀಲ್ಸ್ ಮಾಡಲು ಇಲ್ಲಿಗೆ ಆಗಮಿಸುತ್ತಿದ್ದರು ಎಂದಯ ತಿಳಿದು ಬಂದಿದೆ. ಸದ್ಯ ಪೊಲೀಸರು ಎಂಟು ಆರೋಪಿಗಳನ್ನು ಗುರುತನ್ನು ಬಹಿರಂಗಪಡಿಸಿಲ್ಲ.
ಈ ಘಟನೆ ಕುರಿತು ಮಾಹಿತಿ ನೀಡಿರುವ ಎಸ್‌ಪಿ ಸುಮನ್ ಡಿ ಪನ್ನೇಕರ್, ರೀಲ್ಸ್ ಹಾಗೂ ಪೋಟೋ ಶೂಟ್ ಮಾಡಲು ಬಂದಿದ್ದ ಹುಡುಗರಿಂದ ಕೃತ್ಯ ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ನಮಗೆ ತಿಳಿದು ಬಂದಿರೋದು ಮಾಹಿತಿಯಾಗಿದೆ. ಈಗಾಗಲೇ ಎಂಟು ಜನರನ್ನು ವಶಕ್ಕೆ ಪಡೆದಿದ್ದೇವೆ. ಅದರಲ್ಲಿ ಆರು ಜನ ಅಪ್ರಾಪ್ತರು, ಇಬ್ಬರು ಮೇಜರ್ ಇದ್ದಾರೆ. ಈ ಮನೆ ಅನೇಕ ವರ್ಷಗಳಿಂದ ಹಾಳು ಬಿದ್ದಿತ್ತು. ಇದರಲ್ಲಿ ಫ್ರಿಡ್ಜ್, ಟಿವಿ, ಸೋಫಾ ಏನು ಇರಲಿಲ್ಲ ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ನಾವಿನ್ನೂ ಆಳವಾಗಿ ತನಿಖೆ ಮಾಡುತ್ತಿದ್ದೇವೆ. ಸದ್ಯಕ್ಕೆ ಇದನ್ನ ಇಂಟೆನ್ಷನಲ್ಲಿ ಮಾಡಿಲ್ಲ ಅನ್ನೋದು ಗೊತ್ತಾಗಿದೆ. ತನಿಖೆ ಶುರು ಮಾಡಿದ್ದೇವೆ. ರಾತ್ರಿ ಸುಕೋ ತಂಡ ತನಿಖೆ ಮಾಡಿದೆ. ಮತ್ತೆ ಈಗ ತನಿಖೆ ಶುರು ಮಾಡಿದ್ದಾರೆ. ಮನೆಗೆ ಸೆಕ್ಯೂರಿಟಿ ಇಲ್ಲ, ಸಿಸಿಟಿವಿ ಇಲ್ಲ. ವಶಕ್ಕೆ ಪಡೆದವರ ಮೊಬೈಲ್ ನಲ್ಲಿ ನಮಗೆ ರೀಲ್ಸ್ ಹಾಗೂ ಫೋಟೋ ಸಿಕ್ಕಿವೆ. ಅಲ್ಲೇ ಬಿದ್ದಿರುವ ಬೆಂಕಿ ಪಟ್ಟಣದಿಂದ ಬಾಲಕನೊಬ್ಬ ಗೊತ್ತಿಲ್ಲದೇ ವಸ್ತುಗೆ ಹಚ್ಚಿದ್ದಾನೆ. ಮನೆಯ ಎಲ್ಲಾ ವಿಭಾಗದಲ್ಲಿಯೂ ಪರಿಶೀಲನೆ ಮಾಡ್ತಿದ್ದಾರೆ ಎಂದು ಎಸ್‌ಪಿ ಸುಮನ್ ಡಿ ಪನ್ನೇಕರ್ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ.
ಬ್ಯಾನರ್ ಗಲಾಟೆ ಬೆನ್ನಲ್ಲೇ ಶುಕ್ರವಾರ ಸಂಜೆ ನಗರದ ರುಕ್ಮಣಮ್ಮ ಚೆಂಗಾರೆಡ್ಡಿ ಬಡಾವಣೆಯ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಮಾದರಿ ನಿವಾಸದಲ್ಲಿ (ಮಾಡೆಲ್ ಹೌಸ್) ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ಹಚ್ಚಿಸಿದ್ದು ಶಾಸಕ ಭರತ್ ರೆಡ್ಡಿ ಎಂದು ಗಾಲಿ ರೆಡ್ಡಿ ಸೋದರ ಸೋಮಶೇಖರ ರೆಡ್ಡಿ ಆರೋಪಿಸಿದ್ದಾರೆ. ಲೇಔಟ್‌ನಲ್ಲಿ ಮನೆ ನಿರ್ಮಿಸುವ ಗ್ರಾಹಕರಿಗೆ ತೋರಿಸಲು ಈ ಮನೆ ನಿರ್ಮಿಸಲಾಗಿತ್ತು.