ಜರ್ಸಿ ತಳಿ ಉತ್ಪಾದನಾ ಘಟಕದ ಹುಲ್ಲುಗಾವಲಿಗೆ ಬೆಂಕಿಬಿದ್ದು ಅಪಾರ ಪ್ರಮಾಣದ ಹಸಿ ಹುಲ್ಲು ಬೆಂಕಿಗಾಹುತಿಯಾದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡುಮಂಗಳೂರಿನಲ್ಲಿ ನಡೆದಿದೆ.
ಕೊಡಗು (ಮಾ.30): ಜರ್ಸಿ ತಳಿ ಉತ್ಪಾದನಾ ಘಟಕದ ಹುಲ್ಲುಗಾವಲಿಗೆ ಬೆಂಕಿಬಿದ್ದು ಅಪಾರ ಪ್ರಮಾಣದ ಹಸಿ ಹುಲ್ಲು ಬೆಂಕಿಗಾಹುತಿಯಾದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡುಮಂಗಳೂರಿನಲ್ಲಿ ನಡೆದಿದೆ.
ಜರ್ಸಿ ತಳಿ ಗೋವುಗಳಿಗಾಗಿ ಹಸಿ ಹುಲ್ಲು ಬೆಳೆಯಲಾಗಿತ್ತು. ಬೆಂಕಿ ಅವಘಡದಲ್ಲಿ ಸುಮಾರು 10 ಎಕರೆ ಪ್ರದೇಶದ ಹಸಿ ಹುಲ್ಲು ಸುಟ್ಟು ಭಸ್ಮವಾಗಿದೆ. ಘಟನೆ ಮಾಹಿತಿ ತಿಳಿದು ಕುಶಾಲನಗರ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬಂದಿದ್ದು, ಅಗ್ನಿ ನಂದಿಸಲು ಹರಸಾಹಸ ನಡೆಸಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ ಆವರಿಸಿರುವುದರಿಂದ ಹೆಚ್ಚುವರಿ ವಾಹನಗಳಿಗಾಗಿ ಪಿರಿಯಾಪಟ್ಟಣ ಅಗ್ನಿ ಶಾಮಕ ದಳದ ಸಿಬ್ಬಂದಿಗೂ ಕರೆ ಮಾಡಿದ ಸಿಬ್ಬಂದಿ. ಅಗ್ನಿ ನಂದಿಸುವ ಕಾರ್ಯಾಚರಣೆಯಲ್ಲಿ ಕೂಡುಮಂಗಳೂರು ಗ್ರಾಂಪ ಅಧ್ಯಕ್ಷ ಭಾಸ್ಕರ್ ನಾಯಕ್
ಮತ್ತು ಪಿಡಿಓ ತೀವ್ರ ಪ್ರಯತ್ನ ನಡೆಸಿದ್ದಾರೆ.
ದತ್ತಪೀಠ ಪರಿಸರದಲ್ಲಿ ಭಾರೀ ಬೆಂಕಿ; ಕುರುಚಲು , ಹಲ್ಲುಗಾವಲು ಸುಟ್ಟು ಕರಕಲು!
ಪೇಯಿಂಟಿಂಗ್ ಅಂಗಡಿಗೆ ಬೆಂಕಿ:
ಕೊಡಗಿನ ಗೋಣಿಕೊಪ್ಪಲಿನಲ್ಲಿರುವ ಪೇಯಿಂಟಿಂಗ್ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಇಡೀ ಅಂಗಡಿಯೇ ಬೆಂಕಿ ಆವರಿಸಿ ಹೊತ್ತಿ ಉರಿದ ಘಟನೆ ನಡೆದಿದೆ.
ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲು ಗ್ರಾಮ ಗೋಣಿಕೊಪ್ಪಲು ಬೈಪಾಸ್ ರಸ್ತೆಯಲ್ಲಿರುವ ನಂದಿ ಪೈಂಟ್ಸ್ ಅಂಗಡಿಗೆ ಹೊತ್ತಿರುವ ಬೆಂಕಿ. ಬೆಂಕಿಯ ಕೆನ್ನಾಲಗೆಗೆ ಮಳಿಗೆಯಲ್ಲಿದ್ದ ಪೈಂಟ್ ಮತ್ತಿತರ ವಸ್ತುಗಳು ಸುಟ್ಟು ಭಸ್ಮವಾಗಿವೆ. ಘಟನೆ ಬಳಿಕ ಅಗ್ನಿ ಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು.