ಬೃಹತ್ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ಅವಘಡ : ಇನ್ನೂ ಆರದ ಬೆಂಕಿ

By Suvarna News  |  First Published Feb 8, 2021, 10:38 AM IST

ಬಾಗಲಕೋಟೆಯ ಬೃಹತ್ ಕಾಂಫ್ಲೆಕ್ಸಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಇನ್ನೂ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ.  9 ಅಗ್ನಿ ಶಾಮಕ ವಾಹನಗಳು ಸ್ಥಳದಲ್ಲೇ ಬೀಡು ಬಿಟ್ಟಿವೆ


ಬಾಗಲಕೋಟೆ  (ಫೆ.08):  ಇಳಕಲ್ ಬೃಹತ್ ಕಾಂಪ್ಲೆಕ್ಸ್ ನಲ್ಲಿ ಸಂಭಿಸಿದ ಅಗ್ನಿ ಅವಘಡದಲ್ಲಿ ಬೆಂಕಿ ನಂದಿಸುವ ಇನ್ನೂ ಮುಂದುವರಿದಿದೆ. 

"

Tap to resize

Latest Videos

ಬೆಳಿಗ್ಗೆಯಾದರೂ ಅಲ್ಲಲ್ಲಿ ಬೆಂಕಿಯ ಹೊಗೆ ಏಳುತ್ತಲೇ ಇದ್ದು, ಇನ್ನೂ ಸಂಪೂರ್ಣವಾಗಿ ಆರಿಲ್ಲ.  ಇಡೀ ರಾತ್ರಿ ನಂದಿಸಿದರೂ ಬೆಂಕಿ ಆರಿಲ್ಲ.  ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿ ಶಾಮಕ  ಸಿಬ್ಬಂದಿ ನಿರತರಾಗಿದ್ದಾರೆ.

ಕಟ್ಟಡದ ಇನ್ನು ಅನೇಕ ಮಳಿಗೆಗಳಲ್ಲಿ ಬೆಂಕಿ ಉರಿಯುತ್ತಿದೆ. ನಿರಂತರ 8 ಗಂಟೆಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು, ಒಂಬತ್ತು ಅಗ್ನಿ ಶಾಮಕ ವಾಹನ ಹಾಗೂ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. 

ಶಿವಕುಮಾರ ಸ್ವಾಮೀಜಿ ಜೈವಿಕ ವನಕ್ಕೆ ಬೆಂಕಿ : ಹಲವು ಗಿಡ ಮರಗಳು ಬೆಂಕಿಗಾಹುತಿ

ಕೆಳಮಹಡಿ ಸೇರಿ ಒಟ್ಟು ಐದು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಹೊತ್ತಿದ್ದು,  ಇತ್ತೀಚಿಗಷ್ಟೆ ಇಲ್ಲಿ ಕಾಂಪ್ಲೆಕ್ಸ್ ಆರಂಭ ಮಾಡಲಾಗಿತ್ತು. 17 ಅಂಗಡಿಗಳು ಈಗಾಗಲೇ ಆರಂಭ ಆಗಿದ್ದು,    43 ಕೊಠಡಿ ಇರುವ ಲಾಡ್ಜ್ ಆರಂಭದ ಸಿದ್ದತೆಯಲ್ಲಿತ್ತು.  

ಕೋಟ್ಯಂತರ ರು. ಖರ್ಚು ಮಾಡಿ ಕಟ್ಟಿದ್ದ ಬಹು ಅಂತಸ್ತಿನ ಕಟ್ಟಡ ಬೆಂಕಿಯ ಕೆನ್ನಾಲಿಗೆಯಲ್ಲಿ ದಹಿಸಿಹೋಗಿದೆ.  ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದ ಚಂದ್ರಶೇಖರ ಸಜ್ಜನ ಎಂಬುವವರಿಗೆ ಮಾಲಿಕತ್ವದ ಈ ಮಳಿಗೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. 

click me!