ಪ್ರೀತಿ ನಿರಾಕರಿಸಿದ್ದಕ್ಕೆ ಚೂರಿಯಿಂದ ಮನಬಂದಂತೆ ಇರಿದ : ಜೈಲು ಸೇರಿದ

By Kannadaprabha News  |  First Published Feb 8, 2021, 9:26 AM IST

ತನ್ನ ಪ್ರೀತಿ ನಿರಾಕರಿಸಿದಳು ಎನ್ನುವ ಕಾರಣಕ್ಕೆ ಆಕೆಗೆ ಚಾಕುವಿನಿಂದ ಮನ ಬಂದಂತೆ ಇರಿದ ಪಾಗಲ್ ಪ್ರೇಮಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. 


ಬೆಂಗಳೂರು (ಫೆ.08):  ಪ್ರೀತಿ ಮಾಡಲು ನಿರಾಕರಿಸಿದ ಯುವತಿ ಮೇಲೆ ಹಲ್ಲೆ ನಡೆಸಿದ ಪಾಗಲ್‌ ಪ್ರೇಮಿಯೊಬ್ಬ ನಂದಿನಿ ಲೇಔಟ್‌ ಠಾಣೆಯ ಪೊಲೀಸರ ಅತಿಥಿಯಾಗಿದ್ದಾನೆ.

ನಂದಿನಿ ಲೇಔಟ್‌ ನಿವಾಸಿ ದೀಪಕ್‌(32) ಬಂಧಿತ ಆರೋಪಿಯಾಗಿದ್ದಾನೆ.

Tap to resize

Latest Videos

21 ವರ್ಷದ ಯುವತಿ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದು, ಈ ಹಿಂದೆ ವಿದ್ಯಾರ್ಥಿನಿ ಲಗ್ಗೆರೆಯಲ್ಲಿ ಪೋಷಕರೊಂದಿಗೆ ವಾಸವಿದ್ದಳು. ಅದೇ ಪ್ರದೇಶದಲ್ಲಿ ವಾಸವಾಗಿದ್ದ ಆರೋಪಿ ದೀಪಕ್‌ ಪ್ರೀತಿಸುವಂತೆ ಯುವತಿ ಹಿಂದೆ ಬಿದ್ದಿದ್ದ. ಈ ವಿಚಾರವನ್ನು ಯುವತಿ ಪೋಷಕರಿಗೆ ತಿಳಿಸಿದ್ದಳು. ಯುವತಿಯ ಮನೆಯವರು ದೀಪಕ್‌ಗೆ ಬುದ್ಧಿವಾದ ಹೇಳಿದ್ದರು. ಇಷ್ಟಕ್ಕೆ ಸುಮ್ಮನಾಗದ ಆರೋಪಿ ಮತ್ತೆ ತನ್ನ ಹಳೆ ಚಾಳಿ ಮುಂದುವರೆಸಿದ್ದ. ಈತನ ಕಾಟ ತಾಳಲಾರದೇ ಯುವತಿ ಪೋಷಕರ ಮನೆ ಖಾಲಿ ಮಾಡಿ ನಂದಿನಿ ಲೇಔಟ್‌ಗೆ ಮನೆ ಬದಲಾಯಿಸಿದ್ದರು.

ಮಣಿಪಾಲ್; ಚಾಕು ತೋರಿಸಿ ಕಾಲೇಜು ಸ್ಟುಡೆಂಟ್ಸ್ ದೋಚಿದ್ದ ಶಿವಮೊಗ್ಗದ ಕಳ್ಳರು ಬಲೆಗೆ ...

ದೀಪಕ್‌ ಬೇರೆಯವರ ಮೂಲಕ ಯುವತಿಯ ನಂಬರ್‌ ಪಡೆದು ಆಗ್ಗಾಗ್ಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ. ಈ ಹಿನ್ನೆಲೆಯಲ್ಲಿ ಯುವತಿ ಸಿಮ್‌ ಬದಲಾಯಿಸಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿಯು, ಜ.25ರಂದು ಸ್ನೇಹಿತನ ಜತೆ ದ್ವಿಚಕ್ರ ವಾಹನದಲ್ಲಿ ಯುವತಿ ಟ್ಯೂಷನ್‌ಗೆ ಹೋಗುತ್ತಿದ್ದಾಗ ಅಡ್ಡಗಟ್ಟಿಚೂರಿಯಿಂದ ಕತ್ತು, ಬೆನ್ನು, ಕೈ ಭಾಗಕ್ಕೆ ಇರಿದು ಹಲ್ಲೆ ನಡೆಸಿ ಪರಾರಿಯಾಗಿದ್ದ. ನಂತರ ಸ್ಥಳೀಯರು ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಯುವತಿ ಪೋಷಕರು ನಂದಿನಿ ಲೇಔಟ್‌ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದರು. ಪ್ರಕರಣ ದಾಖಲಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

click me!