ನಕಲಿ ವೈದ್ಯರು ಮತ್ತು ಅನಧಿಕೃತ ಆಸ್ಪತ್ರೆಗಳ ವಿರುದ್ಧ ತಪಾಸಣೆ ಹಾಗೂ ಕಾನೂನು ಕ್ರಮ ಆರಂಭಿಸಿರುವ ಜಿಲ್ಲಾ ಆರೋಗ್ಯ ಇಲಾಖೆ ರೇಡ್ ಮಾಡಿದೆ. ಧಾರವಾಡ ತಾಲೂಕಿನ ತೇಗೂರ ಗ್ರಾಮದಲ್ಲಿ ನಕಲಿ ವೈದ್ಯನನ್ನು ಪತ್ತೆ ಹಚ್ಚಿ ಅವನ ವಿರುದ್ಧ ಎಪ್ಐಆರ್ ದಾಖಲಿಸಿದ್ದಾರೆ.
ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ (ಜು.11): ನಕಲಿ ವೈದ್ಯರು ಮತ್ತು ಅನಧಿಕೃತ ಆಸ್ಪತ್ರೆಗಳ ವಿರುದ್ಧ ತಪಾಸಣೆ ಹಾಗೂ ಕಾನೂನು ಕ್ರಮ ಆರಂಭಿಸಿರುವ ಜಿಲ್ಲಾ ಆರೋಗ್ಯ ಇಲಾಖೆ ರೇಡ್ ಮಾಡಿದೆ. ಧಾರವಾಡ ತಾಲೂಕಿನ ತೇಗೂರ ಗ್ರಾಮದಲ್ಲಿ ನಕಲಿ ವೈದ್ಯನನ್ನು ಪತ್ತೆ ಹಚ್ಚಿ ಅವನ ವಿರುದ್ಧ ಎಪ್ಐಆರ್ ದಾಖಲಿಸಿದ್ದಾರೆ.
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಶಶಿ ಪಾಟೀಲ ಹಾಗೂ ತಾಲೂಕಾ ಆರೋಗ್ಯಾಧಿಕಾರಿ ಡಾ. ತನುಜಾ ಕೆ. ಎನ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯವರು ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ಮತ್ತು ವ್ಯಾಸಾಂಗ ಮಾಡದೇ, ತೇಗೂರ ಗ್ರಾಮದಲ್ಲಿ ವೈದ್ಯಕೀಯ ವೃತ್ತಿ ಮಾಡುತ್ತಿರುವ ಮಂಜುನಾಥ ಇಳಿಗೇರ ಎಂಬುವರ ಕ್ಲಿನಿಕ್ ಮೇಲೆ ದಾಳಿ ಮಾಡಿಕೆಪಿಎಂಇ ಕಾಯ್ದೆ ಸೆಕ್ಷನ್ 19 ಪ್ರಕಾರ ಎಪ್‍ಐಆರ್ ದಾಖಲು ಮಾಡಿದ್ದಾರೆ.
ಈ ನಕಲಿ ವೈದ್ಯ ಯಾವುದೇ ವೈದ್ಯಕೀಯ ವಿದ್ಯಾರ್ಹತೆಯನ್ನು ಪೂರೈಸದೇ ಅಲೋಪಥಿಕ್ ಔಷದಿಗಳನ್ನು ಉಪಯೋಗಿಸುತ್ತಿದ್ದು, ಸಲಾಯಿನ್‍ಗಳನ್ನು ಹಚ್ಚುತ್ತಿರುವುದು ಕಂಡು ಬಂದಿರುತ್ತದೆ.ಆದ್ದರಿಂದ ಕ್ಲಿನಿಕ್‍ನ್ನು ಎಪ್ ಐ ಆರ್ ಮಾಡಿ ಸೀಜ್ ಮಾಡಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ .ಶಶಿ ಪಾಟೀಲ ಅವರು ಸ್ಥಳದಲ್ಲಿದ್ದ ಸಾರ್ವಜನಿಕರಿಗೆ ಚಿಕಿತ್ಸಾ ವಿವರಗಳನ್ನು ನೀಡಿ ರೋಗಿಗಳಿಗೆ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕೆಂದು ಸೂಚಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯಾದರೆ ಅಭಿವೃದ್ಧಿಗೆ ವೇಗ: ಎಚ್‌ಡಿಕೆ ವಿರುದ್ಧ ಶಾಸಕ ಇಕ್ಬಾಲ್ ವಾಗ್ದಾಳಿ
ಇನ್ನು ಕೇವಲ ತೇಗೂರು ಗ್ರಾಮದಲ್ಲಿ ಅಷ್ಟೆ ಅಲ್ಲ ಗ್ರಾಮೀಣ ಭಾಗದಲ್ಲಿ ಊರಿಗೊಬ್ಬ ನಕಲಿ ವೈದ್ಯರಿದ್ದಾರೆ ಅಂತವರಿಗೂ ರೇಡ್ ಮಾಡಿ ಕಠಿಣ ಕ್ರಮವನ್ನ ಕೈಗೊಳ್ಳಬೇಕಿದೆ..ಕೇವಲ ಇದೊಂದೆ ಗ್ರಾಮದಲ್ಲಿ ಅಲ್ಲ ನವಲಗುಂದ, ಕುಂದಗೋಳ, ಕಲಘಟಗಿ,ಹುಬ್ಬಳ್ಳಿ, ಅಣ್ಣಿಗೇರಿ ಎಲ್ಲ ತಾಲೂಕಿನ ಗ್ರಾಮಗಳಲ್ಲಿ ನಕಲಿ ವೈದ್ಯರು ರಾಜಾರೋಷವಾಗಿ ಕ್ಲಿನಿಕ್ ಗಳನ್ನ ನಡೆಸುತ್ತಿದ್ದಾರೆ.ಆದಷ್ಡೂ ಬೇಗ ಡಿಎಚ್ಓ ನಕಲಿ ವೈದ್ಯರಿಗೆ ಕಡಿವಾಣ ಹಾಕಿ ಇಂತವರಿಗೆ ತಕ್ಕ ಪಾಠವನ್ನ ಕಲಿಸಬೇಕಿದೆ.