ಬೆಂಗಳೂರು (ಜು.12): ನಮ್ಮ ಮೆಟ್ರೋ ಪ್ರಯಾಣಿಕರೇ ಎಚ್ಚರ. ಮೆಟ್ರೋ ರೈಲು ಒಳಗೆ ಹಾಗೂ ನಿಲ್ದಾಣಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕು. ಮೆಟ್ರೋದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
ಕೋವಿಡ್ ರೂಲ್ಸ್ ಉಲ್ಲಂಘನೆ ಮಾಡಿದರೆ ಭಾರೀ ದಂಡ ವಿಧಿಸಲಾಗುತ್ತದೆ. ಕೋವಿಡ್ ರೂಲ್ಸ್ ಉಲ್ಲಂಘಿಸುವ ಪ್ರಯಾಣಿಕರ ಮೇಲೆ BMRCLದಂಡಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.
undefined
ಬೆಂಗಳೂರಿಗರಿಗೆ ಗುಡ್ ನ್ಯೂಸ್: ಮೆಟ್ರೋ 2A, 2B ಹಂತದ ಯೋಜನೆಗೆ ಕೇಂದ್ರ ಸಂಪುಟ ಒಪ್ಪಿಗೆ ..
ಮೆಟ್ರೋ ನಿಲ್ದಾಣ ಹಾಗೂ ರೈಲಿನಲ್ಲಿ ಸರಿಯಾಗಿ ಮಾಸ್ಕ್ ಧರಿಸದೇ ನಿಯಮ ಉಲ್ಲಂಘಿಸುವರಿಗೆ 250 ರು. ದಂಡ ವಿಧಿಸಲಾಗುತ್ತದೆ. ನಿಯಮ ಉಲ್ಲಂಘಿಸುವರ ಮೇಲೆ ಕಣ್ಗಾವಲಿಸಲು ವಿಶೇಷ ತಂಡ ರಚನೆ ಮಾಡಲಾಗಿದ್ದು, ಕಳೆದ ಒಂದು ವಾರದಿಂದಲೂ ಪ್ರಯಾಣಿಕರ ಮೇಲೆ ನಮ್ಮ ಮೆಟ್ರೋ ದಂಡಾಸ್ತ್ರ ಪ್ರಯೋಗ ಮಾಡುತ್ತಿದೆ.
ಬೆಂಗಳೂರು : ಮೆಟ್ರೋ ಪ್ರಯಾಣಿಕರಿಗೆ ಇಲ್ಲಿದೆ ಗುಡ್ ನ್ಯೂಸ್
ಮೆಟ್ರೋದಲ್ಲಿ ಶೇ 100 ರಷ್ಟು ಪ್ರಯಾಣಿಕರಿಗೆ ಅನುಮತಿ ನೀಡಿದ ಬಳಿಕ ದಂಡ ಪ್ರಕ್ರಿಯೆ ಜಾರಿ ಮಾಡಲಾಗಿದೆ. ಒಂದು ವಾರದಲ್ಲಿ ಕೋವಿಡ್ ರೂಲ್ಸ್ ಉಲ್ಲಂಘನೆ ಮಾಡಿದ ಪ್ರಯಾಣಿಕರಿಂದ 1,77, 250 ರು. ವಸೂಲಿ ಮಾಡಲಾಗಿದೆ.
ನಮ್ಮ ಮೆಟ್ರೋದಲ್ಲಿ ನಿತ್ಯ ಎಷ್ಟೆಷ್ಟು ದಂಡ ಸಂಗ್ರಹ
05/07/2021 - 20,950 ರೂ
06/07/2021 - 25,950 ರೂ
07/07/2021 - 28,350ರೂ
08/07/2021 - 33,550ರೂ
09/07/2021 - 36,850ರೂ
10/07/2021 - 31,600ರೂ
ಒಟ್ಟು ವಸೂಲಾದ ದಂಡದ ಮೊತ್ತ - 1,77,250ರೂ