2 ತಿಂಗಳ ಬಳಿಕ ಹಾಸನ ಅನ್‌ಲಾಕ್ : ದೇಗುಲಗಳು ಓಪನ್

Kannadaprabha News   | Asianet News
Published : Jul 12, 2021, 09:21 AM IST
2 ತಿಂಗಳ ಬಳಿಕ  ಹಾಸನ ಅನ್‌ಲಾಕ್ : ದೇಗುಲಗಳು ಓಪನ್

ಸಾರಾಂಶ

ಹಾಸನ ಜಿಲ್ಲೆಯಲ್ಲಿ ಇಂದಿನಿಂದ ಅನ್ ಲಾಕ್ ಮಾಡಲಾಗುತ್ತಿದೆ ಎರಡು ತಿಂಗಳ ದಿಗ್ಭಂಧನದ ಬಳಿಕ ಟೆಕ್ಸ್ ಟೈಲ್ ಸೇರಿ ಇತರೆ ಅಂಗಡಿ ಓಪನ್ ದೇವಾಲಯಗಳಿಗೂ ಜನರಿಗೆ ಮುಕ್ತ ಪ್ರವೇಶ

ಹಾಸನ (ಜು.12):   ಹಾಸನ ಜಿಲ್ಲೆಯಲ್ಲಿ ಇಂದಿನಿಂದ ಅನ್ ಲಾಕ್ ಮಾಡಲಾಗುತ್ತಿದೆ. ಎರಡು ತಿಂಗಳ ದಿಗ್ಭಂಧನದ ಬಳಿಕ ಟೆಕ್ಸ್ ಟೈಲ್ ಸೇರಿ ಇತರೆ ಅಂಗಡಿಗಳನ್ನು ತೆರೆಯಲಾಗುತ್ತಿದೆ. 

ಬಂದ್ ಆಗಿದ್ದ ದೇವಾಲಯಗಳಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಇಂದಿನಿಂದ ಭಕ್ತರಿಗೆ ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವ ದೇವಾಲಯಕ್ಕೂ ಪ್ರವೇಶ ದೊರಕಲಿದೆ. 

ಜನರ ಬೇಕಾಬಿಟ್ಟಿ ಓಡಾಟ: ಸ್ವಲ್ಪ ನಿರ್ಲಕ್ಷಿಸಿದ್ರೂ ಮತ್ತೆ ಸೋಂಕು ಉಲ್ಬಣ..!

ಮಂಗಳ ವಾದ್ಯಗಳೊಂದಿಗೆ ವಿಶೇಷ ಪೂಜೆ ಸಲ್ಲಿಕೆ ಬಳಿಕ ದೇಗುಲದ ಬಾಗಿಲು ಓಪನ್ ಮಾಡಲಾಗಿದೆ. ಸ್ಥಳೀಯ ಶಾಸಕ ಲಿಂಗೇಶ್ ಸಮ್ಮುಖದಲ್ಲಿ ದೇವಾಲಯ ಓಪನ್ ಮಾಡಲಾಗಿದ್ದು, ಬೇಲೂರು ಚನ್ನಕೇಶವನ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. 

ಕೊರೋನ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಲಾಕ್‌ಡೌನ್ ತೆರವು ಹಿನ್ನೆಲೆಯಲ್ಲಿ ಇಂದಿನಿಂದ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.  

PREV
click me!

Recommended Stories

ಬೆಂಗಳೂರು ಜನರಿಗೆ ಹೊಟ್ಟೆತುಂಬಾ ಬಿರಿಯಾನಿ ಬಾಡೂಟ ಕೊಟ್ಟ ಕುಟುಂಬ ಸಾಲದ ಸುಳಿಗೆ ಸಿಲುಕಿ ಆತ್ಮ*ಹತ್ಯೆ!
ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ