* ಧಾರವಾಡ ನಗರದ ಇಕ್ಕೆಲ ಗ್ರಾಮಗಳ ಹೊಲದಲ್ಲಿ ಫಲವತ್ತಾದ ಮಣ್ಣು ಕಳ್ಳತನ.
* ಕಾಮಗಾರಿ ಉದ್ದೇಶದಿಂದ ಎಗ್ಗಿಲ್ಲದೆ ನಡಿತಿದೆ ಮಣ್ಣು ಮಾಪೀಯಾ.
* ಅನ್ನದಾತರ ಬಾಯಿಗೆ ಮಣ್ಣು ಹಾಕುತ್ತಿರುವ ಕಳ್ಳಬಾಕರು.
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಡಿ.12): ವಿದ್ಯಾಕಾಶಿ ಧಾರವಾಡದಲ್ಲಿ ಕೈಗಾರಿಕೋದ್ಯಮಗಳು ಆರಂಭವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಆದರೆ, ಕೈಗಾರಿಕೋದ್ಯಮ ಸ್ಥಾಪನೆಗೆ ಮತ್ತು ಕಟ್ಟಡಗಳ ನಿರ್ಮಾಣಕ್ಕಾಗಿ ಗ್ರಾಮೀಣ ಭಾಗದಲ್ಲಿರುವ ರೈತರ ಜಮೀನುಗಳಿಂದ ಫಲವತ್ತಾದ ಮಣ್ಣನ್ನು ಲೂಟಿ ಮಾಡಲಾಗುತ್ತಿದೆ.
ವಿದ್ಯಾಕಾಶಿ ಧಾರವಾಡದಲ್ಲಿ ಐಐಐಟಿ, ಐಐಟಿ, ಕಟ್ಟಡಗಳು, ತಲೆ ಎತ್ತಿವೆ. ಇನ್ನು ವಿದ್ಯಾಕಾಶಿಯಲ್ಲಿ ಕೆಐಎಡಿಬಿ ವತಿಯಿಂದ ಸಾವಿರಾರು ಎಕರೆ ಜಮಿನುಗಳನ್ನ ಭೂಸ್ವಾಧಿನ ಪಡಿಸಿಕೊಂಡಿದ್ದಾರೆ. ಆದರೆ ಸದ್ಯ ಸರ್ಕಾರ ಒಂದು ಕಡೆ ರೈತರ ಜಮೀನನ್ನ ಭೂಸ್ವಾಧಿನಕ್ಕೆ ಪಡೆದು ಕೈಗಾರಿಕೋದ್ಯಮಕ್ಕೆ ಜಮೀನು ಕೊಡುತ್ತಿದೆ. ಮತ್ತೊಂದು ಕಡೆ ಉದ್ಯಮ ಆರಂಭಕ್ಕಾಗಿ ಭೂಮಿಯನ್ನು ಸಮತಟ್ಟು ಮಾಡಲು ಇಕ್ಕೆಲಗಳಲ್ಲಿದ್ದ ಜಮೀನಿನ ಮಣ್ಣನ್ನು ಕಳ್ಳತನ ಮಾಡುತ್ತಿದ್ದಾರೆ. ಮಣ್ಣಿನ ಕಳ್ಳಬಾಕರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲೂಕಿನ ಜೋಗೆಲ್ಲಾಪೂರ ಗ್ರಾಮದಲ್ಲಿ ರೈತರ ಜಮೀನ ಸಾಕಷ್ಟು ಕೈಗಾರಿಕೆ ಉದ್ಯಮಕ್ಕೆ ಹೋಗಿದೆ. ಆದರೆ ಅಲ್ಪ ಸ್ವಲ್ಪ ಇದ್ದ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಜೀವನವನ್ನ ಸಾಗಿಸುವ ರೈತರಿಗೆ ಕಳ್ಳಬಾಕರು ರಾತ್ರಿಯ ವೇಳೆ ಮಣ್ಣನ್ನ ಕಳ್ಳತನ ಮಾಡುತ್ತಿದ್ದಾರೆ. ಯಾರದಾರೂ ರೈತರು ಪ್ರಶ್ನೆ ಮಾಡಿದರೆ ಅವರ ಮೆಲೆ ಹಲ್ಲೆ ಮಾಡಿ ಹೋಗುತ್ತಿದ್ದಾರೆ ಎಂದು ರೈತರು ಅಳಲನ್ನ ತೋಡಿಕೊಂಡಿದ್ದಾರೆ.
BIG 3: ಹರಿಹರದಲ್ಲಿ ಮಣ್ಣು ಮಾಫಿಯಾ: ಕಾನೂನು ಕ್ರಮ ಯಾವಾಗ?
ಅಳಲು ತೋಡಿಕೊಂಡ ರೈತರು: ಈ ಬಗ್ಗೆ ಅಳಲು ತೋಡಿಕೊಂಡಿರುವ ಜೋಗೆಲ್ಲಾಪುರ ಗ್ರಾಮದ ರೈತ ಗಂಗಪ್ಪ ಶೇಖ ಸನದಿ ಮತ್ತು ನಿಂಗಪ್ಪ ಶೇಖಸನದಿ ಎಂಬುವರ ಹೊಲದಲ್ಲಿ ರಾತ್ರೋ ರಾತ್ರಿ ಜೇಸಿಬಿಗಳನ್ನ ಹಾಗೂ ಟಿಪ್ಪರ್‌ಗಳನ್ನು ತೆಗೆದುಕೊಂಡು ಹೋಗಿ ಹಗಲು- ರಾತ್ರಿ ಮಣ್ಣು ಲೂಟಿ ಮಾಡುತ್ತಿದ್ದಾರೆ. ಈ ವೇಳೆ ಮಣ್ಣು ಒಯ್ಯದಂತೆ ಪ್ರಶ್ನೆ ಮಾಡಿದರೆ ಜೀವ ಬೆದರಿಕೆ ಹಾಕುತ್ತಾರೆ. ಯಾರೊಬ್ಬರೂ ನಮ್ಮಮಾತಿಗೆ ಬೆಲೆ ಕೊಡುತ್ತಿಲ್ಲ ಎಂದು ಅನ್ನದಾತರು ಸುವರ್ಣ ನ್ಯೂಸ್ ಮುಂದೆ ಅಳಲು ತೋಡಿಕೊಂಡಿದ್ದಾರೆ. ಈ ಮಣಣು ಲೂಟಿಯ ಬಗ್ಗೆ ರೈತರು ಧಾರವಾಡ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಂದಾಯ, ಪೊಲೀಸ್ ಇಲಾಖೆ ನಿರ್ಲಕ್ಷ್ಯ: ರೈತರ ಮಣ್ಣು ಲೂಟಿ ಮಾಡುತ್ತಿರುವ ವಿಚಾರವಾಗಿ ಈಗಾಗಲೇ ಧಾರವಾಡ ತಹಶಿಲ್ದಾರ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ಕೊಟ್ಟರು ಏನೂ ಪ್ರಯೋಜನವಾಗಿಲ್ಲ. ಇನ್ನು ಕಳೆದ ಒಂದು ವಾರದ ಹಿಂದೆ ಪೊಲೀಸರಿಗೆ ದೂರು ದಾಖಲಿಸಿದರು ಏನೂ ಕ್ರಮ ಆಗುತ್ತಿಲ್ಲ. ಈ ಬಗ್ಗೆ ಪೊಲಿಸರಿಗೆ ಕೇಳಿದರೆ ನೀವೇ ಸಿಸಿ ಕ್ಯಾಮರಾ ಕೂಡಿಸಿ, ಅಥವಾ ಅದರ ಬಗ್ಗೆ ನೀವೇ ನಮಗೆ ಸಾಕ್ಷ್ಯ ಸಮೇತ ಮಾಹಿತಿ ಕೊಡಿ ಎಂದು ಕೇಳುತ್ತಾರೆ. ನಾವು ಸಾಮಕ್ಷಿ ಸಮೇತ ಮಾಹಿತಿ ಕೊಡಲು ಸಾಧ್ಯವಾಗಿದ್ದರೆ ಕೊಡುತ್ತಿದ್ದೆವು. ಆದರೆ, ನಾವು ಹೊಲದ ಬಳಿ ಹೋದರೆ ಹಲ್ಲೆ ಮಾಡುತ್ತಾರೆ. ಸಾಕ್ಷಿಗಾಗಿ ವೀಡಿಯೋ ಮಾಡಿದರೆ ನಮ್ಮನ್ನು ಅಲ್ಲಿಯೇ ಕೊಲೆ ಮಾಡುತ್ತಾರೆ. ದೂರು ಕೊಟ್ಟವರನ್ನೇ ಸಾಕ್ಷಿ ಮತ್ತು ಮಾಹಿತಿ ಕೇಳುವುದಾದರೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ರೈತರು ಆಕ್ರೊಶ ವ್ಯಕ್ತ ಪಡಿಸಿದರು.
ಪ್ರತಿ 5 ಸೆಕೆಂಡಿಗೆ 1 ಫುಟ್‌ಬಾಲ್ ಮೈದಾನದಷ್ಟುಮಣ್ಣು ಮಲಿನ: ಸದ್ಗುರು ಆತಂಕ
ರೈತರ ಹೊಲಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮಣ್ಣು ಲೂಟಿಗೆ ಗ್ರಾಮಸ್ಥರು ಸೇರಿ ಪೋಲಿಸರಿಗೆ ಮನವಿ ಮಾಡಿದ್ದೇವೆ. ಇನ್ನು ಮುಂದಾದರೂ ಪೊಲೀಸರು ಮಣ್ಣು ಲೂಟಿಕೋರರ ದಂಧೆಗೆ ಬ್ರೇಕ್ ಹಾಕುತ್ತಾರೋ, ಇಲ್ಲವೋ ಕಾದು ನೋಡಬೇಕು. ಇನ್ನು ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಮಾಡಿಲು ಸ್ಥಳಕ್ಕೆ ಪೋಲಿಸರು ಬೇಟಿ ನೀಡುತ್ತಾರೆಯೋ ಇನ್ನಷ್ಟೇ ತಿಳಿಯಬೇಕಿದೆ.