Bengaluru: ಜನರಿಂದ ಹಣ ಸುಲಿಗೆ ಮತ್ತಿಬ್ಬರು ಪೊಲೀಸರ ಮೇಲೆ ಆರೋಪ

By Sathish Kumar KHFirst Published Dec 12, 2022, 11:21 AM IST
Highlights

ಬೆಂಗಳೂರಿನಲ್ಲಿ ಸಾರ್ವಜನಿಕರಿಂದ ಪೊಲೀಸರು ಹಣ ಸುಲಿಗೆ ಮಾಡಿರುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗಿ ಬಯಲಿಗೆ ಬರುತ್ತಿದ್ದು, ಈಗ ಆಡುಗೋಡಿ ಪೊಲೀಸರಿಬ್ಬರು ಸಾರ್ವಜನಿಕರಿಂದ 4 ಸಾವಿರ ರೂ. ಹಣ ಸುಲಿಗೆ ಮಾಡಿರುವ ಆರೋಪ ಕೇಳಿಬಂದಿದೆ.

ಬೆಂಗಳೂರು (ಡಿ.12): ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕರಿಂದ ಪೊಲೀಸರು ಹಣ ಸುಲಿಗೆ ಮಾಡಿರುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗಿ ಬಯಲಿಗೆ ಬರುತ್ತಿದ್ದು, ಈಗ ಆಡುಗೋಡಿ ಪೊಲೀಸರಿಬ್ಬರು ಸಾರ್ವಜನಿಕರಿಂದ 4 ಸಾವಿರ ರೂ. ಹಣ ಸುಲಿಗೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪೇದೆಗಳ ವಿರುದ್ಧ ತನಿಖೆ ಮಾಡುವಂತೆ ಆಗ್ನೇಯ ವಿಭಾಗದ ಡಿಸಿಪಿ ಆದೇಶಿಸಿದ್ದಾರೆ.

ಈಗ ಇಂತಹದ್ದೇ ಪ್ರಕರಣ ಆಡುಗೋಡಿ ಪೊಲೀಸರಿಂದ ನಡೆದಿದೆ ಎಂದು ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯನ್ನು ಹಣವನ್ನು ವಸೂಲಿ ಮಾಡಿದ ಇಬ್ಬರು ಕಾನ್ಸ್ ಟೇಬಲ್ ಗಳ ವಿರುದ್ಧ ಈಶಾನ್ಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ಅವರು ತನಿಖೆಗೆ ಆದೇಶಿಸಿದ್ದಾರೆ. 

ಸುಲಿಗೆ ಘಟನೆ ವಿವರವೇನು? : ಕೋರಮಂಗಲದ ನೆಕ್ಸಾಸ್ ಮಾಲ್ ಬಳಿ ಚೈತ್ರ ರತ್ನಾಕರ್ ಹಾಗೂ ಚೀರಾಸ್ ಸಿಗರೇಟ್ ಸೇದುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದು ಬೆದರಿಸಿದ್ದ ಕಾನ್ಸ್ ಟೇಬಲ್ ಗಳು ಇಬ್ಬರ ಮೇಲೂ ಎಫ್ ಐಆರ್ ದಾಖಲಿಸುವುದರ ಜೊತೆಗೆ 50 ಸಾವಿರ ರೂ. ದಂಡ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವೇಳೆ ತಮಗೆ ಪರಿಚಯದ ಟೀ ಅಂಗಡಿಯವರ ಪೋನ್ ನಂಬರ್ ಗೆ ಹಣ ಪೋನ್ ಪೇ ಮಾಡಿಸಿಕೊಂಡಿದ್ದರು. ಪೋನ್ ನಂಬರ್ ಗೆ 4 ಸಾವಿರ ರೂ. ಲಂಚದ ಹಣ ರವಾನೆ ಮಾಡಿಸಿಕೊಂಡಿದ್ದ ಕಾನ್ಸ್ ಟೇಬಲ್ ಗಳು ಅಲ್ಲಿಂದ ಹೊರಟು ಹೋಗಿದ್ದರು. 

Bengaluru: ರಾತ್ರಿ ಓಡಾಡಂಗಿಲ್ಲ ಎಂದು ಬೆದರಿಸಿ ಪೊಲೀಸರಿಂದಲೇ ದಂಪತಿ ಸುಲಿಗೆ!

ಸಾಮಾಜಿಕ ಜಾಲತಾಣದಿಂದಲೇ ದೂರು: ಕಾರ್ತಿಕ್‌ ಪತ್ರಿ ಎನ್ನುವವವರು ಪೊಲೀಸರು ಹಣ ಸುಲಿಗೆ ಮಾಡಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೂರು ನೀಡಿದಾಗ ಅದನ್ನು ಪರಿಗಣಿಸಿ ಹಣ ವಸೂಲಿ ಮಾಡಿದ ಇಬ್ಬರು ಪೊಲೀಸರನ್ನು ಅಮಾನತು ಮಾಡಿದ ಬೆನ್ನಲ್ಲೇ ಸಿಗರೇಟ್‌ ಸೇದುವಾಗ ತಮಗೂ ಆದ ಅನ್ಯಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೂರು ನೀಡಲು ಚೈತ್ರ ರತ್ನಾಕರ್ ತೀರ್ಮಾನಿಸಿದ್ದಾರೆ. ನಂತರ ಟ್ವಿಟರ್‌ನಲ್ಲಿ ಡಿಜಿ-ಐಜಿಪಿಗೆ ಟ್ವೀಟ್ ಮಾಡಿ ದೂರು ದಾಖಲಿಸಿದ್ದಾರೆ. ರಾಜ್ಯ ಹಾಗೂ ರಾಜಧಾನಿಗೆ ಸಾಕಷ್ಟು ತೆರಿಗೆ ಪಾವತಿಸುವ ನಮಗೆ ತರ್ಡ್ ಕ್ಲಾಸ್ ಸಿಟಿಸನ್ ರೀತಿಯಲ್ಲಿ ಪೊಲೀಸರು ನಮ್ಮನ್ನು ಟ್ರೀಟ್ ಮಾಡಿದ್ದಾರೆ. ನಮ್ಮನ್ನು ನಡು ರಸ್ತೆಯಲ್ಲಿ ಹೆದರಿಸಿ, ಬೆದರಿಸಿ 4 ಸಾವಿರ ಲಂಚದ ಹಣ ಪಡೆದಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಈ ಬಗ್ಗೆ ಡಿಸಿಪಿ ಸಿ.ಕೆ. ಬಾಬಾ ಅವರು ಪೂರ್ವಭಾವಿ ಇಲಾಖಾ ತನಿಖೆಗೆ ಆದೇಶಿಸಿದ್ದು, ವಿಚಾರಣೆ ನಡೆಸಿ ವರದಿ ನೀಡುವಂತೆ ಮಡಿವಾಳ ಎಸಿಪಿಗೆ ಸೂಚನೆ ನೀಡಿದ್ದಾರೆ.

Bengaluru Crime: ಟೆಕ್ಕಿಯ ಅಪಹರಿಸಿ 8 ಲಕ್ಷ ಸುಲಿದವರ ಸೆರೆ

ನಿನ್ನೆ ಇಬ್ಬರು ಪೊಲೀಸರ ಅಮಾನತು: ಶನಿವಾರ ರಾತ್ರಿ ಸಂಪಿಗೆಹಳ್ಳಿಯ ಹೊಯ್ಸಳ ಗಸ್ತು ಪಡೆ ಪೊಲೀಸರಿಬ್ಬರು ರಾತ್ರಿ 11 ಗಂಟೆ ನಂತರ ಸಾರ್ವಜನಿಕರು ಓಡಾಡಬಾರದು ಎಂಬ ಸುಳ್ಳು ನಿಯಮವನ್ನು ಹೇಳಿ ಸ್ನೇಹಿತರ ಮನೆಯಲ್ಲಿ ಆಯೋಜಿಸದ್ದ ಔತಣಕೂಟವನ್ನು ಮುಗಿಸಿ ಮಾನ್ಯತಾ ಟೆಕ್‌ ಪಾರ್ಕ್ ಬಳಿ ವಾಪಸ್‌ ಮನೆಗೆ ಹೋಗುವ ದಂಪತಿಯಿಂದ 1 ಸಾವಿರ ರೂ. ಹಣ ಸುಲಿಗೆ ಮಾಡಿದ್ದರು. ಇದನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹಂಚಿಕೊಂಡು ಪೊಲೀಸರ ಕ್ರಮದ ವಿರುದ್ಧ ದಂಪತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್‌ ಇಲಾಖೆಯು ಆ ಸಮಯದಲ್ಲಿ ಹೊಯ್ಸಳ ಗಸ್ತು ಪಡೆಯಲ್ಲಿದ್ದ ಹೆಡ್‌ ಕಾನ್ಸ್‌ಸ್ಟೇಬಲ್‌ಗಳನ್ನು ಪತ್ತೆಹಚ್ಚಿ ಈಶಾನ್ಯ ವಿಭಾಗದ ಡಿಸಿಪಿ ಅನೂಪ್‌ ಶೆಟ್ಟಿ ಅವರು ಅಮಾನತ್ತು ಮಾಡಿದ್ದರು. 

click me!