ಸೆ. 4ರಂದು ಚಿಕ್ಕಮಗಳೂರು ಬೆಳೆಗಾರರ ಜತೆ ವಿತ್ತ ಸಚಿವೆ ನಿರ್ಮಲಾ ಸಂವಾದ

By Kannadaprabha News  |  First Published Sep 3, 2020, 8:57 AM IST

ಸೆ.4ರಂದು ಬೆಳೆಗಾರರ ಜತೆ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವಿಡಿಯೋ ಸಂವಾದ|ಜಿಪಂ ಸಭಾಂಗಣದಲ್ಲಿ ವ್ಯವಸ್ಥೆ: ಸಚಿವ ಸಿ.ಟಿ.ರವಿ| 


ಚಿಕ್ಕಮಗಳೂರು(ಸೆ.03): ಜಿಲ್ಲೆಯ ಬೆಳೆಗಾರರು ಕೆಲವು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಸೆ.4ರಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ವಿಡಿಯೋ ಸಂವಾದದ ಮೂಲಕ ಆಲಿಸಲಿದ್ದಾರೆ.

ಅಂದು ಮಧ್ಯಾಹ್ನ 3.45ಕ್ಕೆ ಸಂವಾದ ನಡೆಯಲಿದ್ದು, ಇದಕ್ಕೆ ಜಿಪಂ ಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಬೆಳೆಗಾರರ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

Tap to resize

Latest Videos

ಚಾರ್ಮಾಡಿ ಘಾಟ್‌ನಲ್ಲಿ ಸಂಚರಿಸುವವರು ಇಲ್ಲೊಮ್ಮೆ ಗಮನಿಸಿ

ಆ.18ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿ ಸಂಕಷ್ಟಕ್ಕೊಳಗಾಗಿರುವ ಬೆಳೆಗಾರರ ಸಮಸ್ಯೆಗಳನ್ನು ಗಮನಕ್ಕೆ ತಂದು ವಿಶೇಷ ಪ್ಯಾಕೇಜ್‌ ಘೋಷಿಸುವಂತೆ ಮನವಿ ಮಾಡಲಾಗಿತ್ತು.
 

click me!