Udupi: ಕೊಡಚಾದ್ರಿಯಲ್ಲಿ ಹಕ್ಕಿಹಬ್ಬ: ಚಾರಣ ಪ್ರಿಯರು, ಪಕ್ಷಿ ವೀಕ್ಷಕರಲ್ಲಿ ಭಾರೀ ಸಂತಸ

By Sathish Kumar KH  |  First Published Jan 7, 2023, 7:09 PM IST

ಉಡುಪಿ ಮತ್ತು ಶಿವಮೊಗ್ಗ ಗಡಿ ಭಾಗದಲ್ಲಿರುವ ಕೊಡಚಾದ್ರಿಯಲ್ಲಿರುವ 300 ಬಗೆಯ ವಿವಿಧ ಪ್ರಭೇದ ಪಕ್ಷಿಗಳ ವಿಕ್ಷಣೆಗಂತಲೇ ಮೂರು ದಿನಗಳ ಕಾಲ ಹಕ್ಕಿ ಹಬ್ಬ ಆಯೋಜಿಸಲಾಗುತ್ತಿದೆ.


ಉಡುಪಿ (ಜ.07): ಉಡುಪಿ ಮತ್ತು ಶಿವಮೊಗ್ಗ ಗಡಿ ಭಾಗದಲ್ಲಿರುವ ಕೊಡಚಾದ್ರಿ ಯಾರಿಗೆ ಇಷ್ಟ ಇಲ್ಲ ಹೇಳಿ. ಚಾರಣ ಪ್ರಿಯರಿಗೆ, ಕೊಲ್ಲೂರು ಶ್ರೀ ಮೂಕಾಂಬಿಕೆಯ ಭಕ್ತರಿಗೆ ಇಷ್ಟವಾಗುವ ಸ್ಥಳ ಸದ್ಯ ಪಕ್ಷಿ ಪ್ರಿಯರಿಗೂ ಇಷ್ಟವಾಗುತ್ತಿದೆ. ಇಲ್ಲಿರುವ 300 ಬಗೆಯ ವಿವಿಧ ಪ್ರಭೇದ ಪಕ್ಷಿಗಳ ವಿಕ್ಷಣೆಗಂತಲೇ ಮೂರು ದಿನಗಳ ಕಾಲ ಹಕ್ಕಿ ಹಬ್ಬ ಆಯೋಜಿಸಲಾಗುತ್ತಿದೆ.

ಉಡುಪಿ ಜಿಲ್ಲೆಗೆ ಭೇಟಿ ನೀಡುವ ಬಹುತೇಕ ಪ್ರವಾಸಿಗರೂ ಉಡುಪಿ ಶ್ರೀಕೃಷ್ಣ ಮಠ, ಮಲ್ಪೆ ಬೀಚ್ ಬಿಟ್ಟರೆ ಅತೀ ಹೆಚ್ಚುವ ಸಂದರ್ಶಿಸುವ ಸ್ಥಳ ಕೊಲ್ಲೂರು ಕೊಡಚಾದ್ರಿ. ಪ್ರಕೃತಿ ಸೌಂದರ್ಯದ ರಾಶಿ ಮಧ್ಯೆ ಕುಳಿತ ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕೊಲ್ಲೂರು ಶ್ರೀ ಮೂಕಾಂಬಿಕೆಯನ್ನು ನೋಡುವುದೆ ಒಂದು ಸೊಗಸು. ಟೆಂಪಲ್ ವಿಸಿಟ್ ಜೊತೆಗೆ ವರ್ಷದಲ್ಲಿ ಲಕ್ಷಾಂತರ ಜನ ಪ್ರವಾಸಿಗರು, ಚಾರಣದ ಮಜ ಅನುಭವಿಸಲು ಇಲ್ಲಿನ ಕೊಡಚಾದ್ರಿ ಗೆ ಭೇಟಿ ನೀಡುತ್ತಾರೆ. ಸದ್ಯ ಇದೇ ಪ್ರಕೃತಿ ಮತ್ತು ದೇವರ ಸಮಾಗಮವಾಗಿರುವ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮೂರು ದಿನಗಳ ಹಕ್ಕಿ ಹಬ್ಬ ಆಯೋಜನೆಯಾಗಿದೆ. ದೇಶ ವಿದೇಶದಿಂದ ಹಕ್ಕಿಗಳ ವೀಕ್ಷಣೆಗೆ ಸದ್ಯ ಕೊಲ್ಲೂರು ಗೆ ಆಗಮಿಸುತ್ತಿದ್ದು, ಇಂದು ಕೊಲ್ಲೂರು ಸಮೀಪದ ಹಾಲ್ಕಲ್ ಬಳಿ ಈ ವಿನೂತನ ಹಕ್ಕಿ ಹಬ್ಬ ಉದ್ಘಾಟನೆ ನಡೆಯಿತು.

Tap to resize

Latest Videos

undefined

Madikeri: ಪಕ್ಷಿಪ್ರೇಮಿಗಳ ಮನಸ್ಸಲ್ಲಿ ಕಲರವ ತಂದ ಹಕ್ಕಿ ಹಬ್ಬ

 

300 ಕ್ಕೂ ಅಧಿಕ ಹಕ್ಕಿ ವೀಕ್ಷಣೆ: ಕೊಲ್ಲೂರು ಅಭಯಾರಣ್ಯ ಸೇರಿದಂತೆ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿರುವ ಹಲವು ಬಗೆಯ ಅಪರೂಪದ ಹಕ್ಕಿಗಳ ಬಗ್ಗೆ ಹಕ್ಕಿ ಹಬ್ಬದ ಮೂಲಕ ನಾಡಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಕೋ ಟೂರಿಸಂ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಹಲವು ಭಾಗಗಳಲ್ಲಿ ಹಕ್ಕಿ ಹಬ್ಬ ಆಯೋಜಿಸಲಾಗುತ್ತಿದೆ. ಪಶ್ಚಿಮ‌ ಘಟ್ಟದ ತಪ್ಪಲು ಪ್ರದೇಶದಲ್ಲಿ ವಲಸೆ ಮತ್ತು ಸ್ಥಳೀಯ ಸುಮಾರು 300 ಕ್ಕೂ ಹೆಚ್ಚು ಹಕ್ಕಿಗಳಿದ್ದು ಈ ಬಗ್ಗೆ ಸಾರ್ವಜನಿಕ ರಿಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮುದಾಯದ ಬೆಂಬಲವಿಲ್ಲದೆ ಪಕ್ಷಿಗಳ ರಕ್ಷಣೆ ಸಾಧ್ಯವಿಲ್ಲ ಎನ್ನುವುದನ್ನು ಮನಗಂಡ ಇಲಾಖೆ, ಸಮುದಾಯದ ಜೊತೆಗೂಡಿ ಕಾರ್ಯಕ್ರಮ ವಿಶೇಷವಾಗಿ ರೂಪಿಸಿದೆ. 

ಮಲಬಾರ್ ಟ್ರೋಗನ್ ರಾಯಭಾರಿ ಹಕ್ಕಿ: ಈ ಬಾರಿಯ ಹಕ್ಕಿಹಬ್ಬ ದಲ್ಲಿ ಮಲಬಾರ್ ಟ್ರೋಗನ್ ರಾಯಭಾರಿ ಹಕ್ಕಿಯನ್ನಾಗಿ ಆಯ್ಕೆ ಮಾಡಲಾಗಿದ್ದು, ಕಾಡಿನ ಮಧ್ಯೆ ಹಕ್ಕಿಗಳ ಚಲನವಲನ ಗಮನಿಸಿ ಆಸಕ್ತಿಗೆ ಬರ್ಡ್ ವಾಚ್ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟಾರೆಯಾಗಿ ಹಕ್ಕಿ ಹಬ್ಬದ ನೆಪದಲ್ಲಿ ರಾಷ್ಟ್ರೀಯ ಮಟ್ಟದ ವನ್ಯ ಜೀವಿ ಛಾಯಾಗ್ರಾಹಕರು ಕೊಲ್ಲೂರಿಗೆ ಬೇಟಿ ನೀಡುತ್ತಿದ್ದಾರೆ. ಸದ್ಯ ಪಕ್ಷಿ ಪ್ರೇಮಿಗಳಿಗೆ ಅಪರೂಪದ ಪಕ್ಷಿಗಳನ್ನು ವೀಕ್ಷಿಸಿ ಆನಂದಿಸುವ ಸದಾವಕಾಶ ಇಲಾಖೆ ಈ ಮೂಲಕ ನೀಡಿದೆ ಎಂದರೆ ತಪ್ಪಾಗಲಾರದು.

ಕೊಡಚಾದ್ರಿ ಸೇರಿ ದೇಶದ 18 ಕಡೆ ಶೀಘ್ರ ರೋಪ್‌ವೇ: ಕೇಂದ್ರದಿಂದ ಟೆಂಡರ್‌

ಕೊಡಚಾದ್ರಿಯಲ್ಲಿ ರೋಪ್‌ ವೇ ನಿರ್ಮಾಣ: ನವದೆಹಲಿ: ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಕರ್ನಾಟಕದ ಕೊಡಚಾದ್ರಿ ಶಿಖರದ ತುದಿಗೆ ರೋಪ್‌ವೇ ಸಂಪರ್ಕ ಕಲ್ಪಿಸುವ ಯೋಜನೆ ಸೇರಿದಂತೆ ಒಟ್ಟು 90 ಕಿ.ಮೀ. ದೂರದ 18 ರೋಪ್‌ವೇ ಯೋಜನೆಗಳ ಕಾಮಗಾರಿಯನ್ನು ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಅಕ್ಟೋಬರ್‌ ತಿಂಗಳಲ್ಲಿ ಬಿಡ್‌ಗಳನ್ನು ಆಹ್ವಾನಿಸಿತ್ತು ಎಂದು ಮೂಲಗಳು ತಿಳಿಸಿದ್ದವು. ಕರ್ನಾಟಕದಲ್ಲಿ ಅತಿ ಹೆಚ್ಚು ಕಷ್ಟಕರವಾದ ಟ್ರಕ್ಕಿಂಗ್‌ಗಳಲ್ಲಿ ಕೊಡಚಾದ್ರಿ ಸಹ ಒಂದಾಗಿದ್ದು, ಇಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಪ್ರವಾಸಿಗರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ 'ಪರ್ವತಾಮಾಲ' ಯೋಜನೆಯಡಿ 7 ಕಿ.ಮೀ. ಉದ್ದದ ರೋಪ್‌ ವೇ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು.

click me!