Haveri: ತುಂಬಿದ ಕೆರೆ ಕಟ್ಟೆಗಳು: ನೀರಿನ ಕೊರತೆ ಚಿಂತೆ ದೂರ

By Kannadaprabha News  |  First Published Oct 9, 2022, 3:17 PM IST
  • ತುಂಬಿದ ಕೆರೆ ಕಟ್ಟೆಗಳು: ನೀರಿನ ಕೊರತೆ ಚಿಂತೆ ದೂರ
  • ಜಿಲ್ಲೆಯಲ್ಲಿ ಸತತ ಮಳೆಯಿಂದ ಅಂತರ್ಜಲಮಟ್ಟಏಕಾಏಕಿ ಹೆಚ್ಚಳ
  • ಕೆರೆಗಳಿಗೆ ಜೀವಕಳೆ, ರೈತರ ಮೊಗದಲ್ಲಿ ಮಂದಹಾಸ

ಹಾವೇರಿ (ಅ.9) : ಜಿಲ್ಲೆಯಲ್ಲಿ ಸುರಿದ ಸತತ ಮಳೆಯಿಂದಾಗಿ ಕೆರೆಕಟ್ಟೆಗಳು ಭರ್ತಿಯಾಗಿದ್ದು ಒಂದಡೆಯಾದರೆ, ಇನ್ನೊಂದಡೆ ಅಂತರ್ಜಲಮಟ್ಟವು ಸಹ ಗಣನೀಯ ಪ್ರಮಾಣದಲ್ಲಿ ವೃದ್ಧಿಯಾಗಿದೆ. ಹೀಗಾಗಿ ಭವಿಷ್ಯದ ದಿನಗಳಲ್ಲಿ ಜಿಲ್ಲೆಯಲ್ಲಿ ನೀರಿನ ಕೊರತೆ ನೀಗುವ ಜೊತೆಗೆ ಸಮೃದ್ಧ ಕೃಷಿ ಚಟುವಟಿಕೆಗೆ ಅವಕಾಶ ಲಭಿಸಲಿದೆ.

Ramanagara: ಸತತ ಮಳೆಯಿಂದ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿ

Tap to resize

Latest Videos

undefined

ಕಳೆದ ನಾಲ್ಕೈದು ವರ್ಷಗಳ ಹಿಂದೆ ಮಳೆಯ ಕೊರತೆ ಮತ್ತು ಬಿಸಿಲ ಝಳದಿಂದಾಗಿ ಜಿಲ್ಲೆಯ ಹಲವೆಡೆ ಕೆರೆಕಟ್ಟೆಗಳು ಬತ್ತಿಹೋಗಿದ್ದರೆ, ಇನ್ನು ಕೆಲವು ಕಡೆ ಕೆರೆಗಳ ಸಮರ್ಪಕ ನಿರ್ವಹಣೆಯ ಕೊರೆತೆಯಿಂದಾಗಿ ಬತ್ತಿಹೋಗುವ ಹಂತಕ್ಕೆ ತಲುಪಿದ್ದವು. ಬೇಸಿಗೆ ಕಾಲದಲ್ಲಿ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ನೀರಿನ ಹಾಹಾಕಾರ ಮುಗಿಲು ಮುಟ್ಟುತ್ತಿತ್ತು. ಇದೇ ಪರಿಸ್ಥಿತಿ ಮುಂದುವರೆದಿದ್ದರೆ ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಿಸುವ ಸಂಭವವಿತ್ತು. ಆದರೆ ಇತ್ತೀಚಿನ ಎರಡ್ಮೂರು ವರ್ಷಗಳಲ್ಲಿ ಸುರಿದ ಮಳೆ ಹಾಗೂ ಪ್ರಸಕ್ತ ವರ್ಷ ಸುರಿದ ಸತತ ಮಳೆಯಿಂದಾಗಿ ನೀರಿಗಾಗಿ ಎದುರಾಗುತ್ತಿದ್ದ ಹಾಹಾಕಾರ ತಪ್ಪಿದೆ. ಅಲ್ಲದೇ ಗ್ರಾಮೀಣ ಭಾಗದಲ್ಲಿನ ಹಲವಾರು ಕೆರೆಕಟ್ಟೆಗಳು ಇಂದು ಭರ್ತಿಯಾಗಿ ಕೋಡಿಹರಿಯುತ್ತಿದೆ.

ಜಿಲ್ಲೆಯ ಕೆರೆಗಳಿಗೆ ಜೀವಕಳೆ

ಜಿಲ್ಲೆಯ ಪ್ರಮುಖ ಕೆರೆಗಳಾದ ಹಾವೇರಿಯ ಹೆಗ್ಗೇರಿ ಕೆರೆ, ಕಾಗಿನೆಲೆ ಕೆರೆ, ರಟ್ಟಿಹಳ್ಳಿಯ ಮಗದ ಮಾಸೂರ ಕೆರೆ, ಶಿಗ್ಗಾಂವಿಯ ನಾಗನೂರ ಕೆರೆ, ಗುತ್ತಲ ಪಟ್ಟಣದ ದೊಡ್ಡ ಕೆರೆ, ಹಿರೇಕೆರೂರು ದುರ್ಗಾದೇವಿ ಕೆರೆ, ಸವಣೂರಿನ ಮೋತಿ ತಲಾಬ್‌ ಕೆರೆ ಸೇರಿದಂತೆ ಜಿಲ್ಲೆಯ ಪ್ರಮುಖ ಕೆರೆಕಟ್ಟೆಗಳು ಭರ್ತಿಯಾಗಿ ಕಳೆಗಟ್ಟಿವೆ. ಜೊತೆಗೆ ಜಿಲ್ಲೆಯಲ್ಲಿ ಸುರಿದ ಸತತ ಮಳೆಯಿಂದಾಗಿ ಅಂತರ್ಜಲಮಟ್ಟದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ನೀರಿಲ್ಲದೇ ಬತ್ತಿಹೋಗಿದ್ದ ಬೋರವೆಲ್‌ಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಅಂತರ್ಜಲಮಟ್ಟಹೆಚ್ಚಳ

ಇತ್ತೀಚಿನ ಎರಡ್ಮೂರು ವರ್ಷಗಳಲ್ಲಿ ಸುರಿದ ಮಳೆ ಹಾಗೂ ಪ್ರಸಕ್ತ ವರ್ಷ ಸುರಿದ ಸತತ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲಮಟ್ಟಏಕಾಏಕಿ ಹೆಚ್ಚಳಗೊಂಡಿದೆ. ಅದರಲ್ಲಿಯೂ ನೀರಿಲ್ಲದೇ ಸಾಕಷ್ಟುವರ್ಷ ಬತ್ತಿ ಹೋಗಿದ್ದ ಬೋರವೆಲ್‌ಗಳಲ್ಲಿ ಇಂದು ನೀರು ಉಕ್ಕಿ ಹರಿಯುತ್ತಿರುವುದು ಜಿಲ್ಲೆಯಲ್ಲಿನ ಅಂತರ್ಜಲ ವೃದ್ಧಿಯಾಗಿರುವುದಕ್ಕೆ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ 2017ರಲ್ಲಿ ಅಂತರ್ಜಲಮಟ್ಟ23.35 ಮೀಟರ್‌, 2018ರಲ್ಲಿ 19.98 ಮೀ, 2019ರಲ್ಲಿ 17.56 ಮೀ, 2020ರಲ್ಲಿ 11.71 ಮೀ, 2021ರಲ್ಲಿ 9.46ಮೀ ಪ್ರಸಕ್ತ ವರ್ಷ ಆಗಸ್ಟ್‌ ವರೆಗೆ 8.87 ಮೀಟರ್‌ ದಾಖಲಾಗಿದೆ. ಜಿಲ್ಲೆಯ ಕಳೆದ ಐದು ವರ್ಷಗಳ ಈ ಅಂಕಿ ಅಂಶಗಳನ್ನು ನೋಡಿದಾಗ ವರ್ಷದಿಂದ ವರ್ಷಕ್ಕೆ ಅಂತರ್ಜಲಮಟ್ಟವೃದ್ಧಿಗೊಂಡಿರುವುದು ಬರುತ್ತಿದೆ.

ಬಯಲುಸೀಮೆ ಸೇರಿ 6 ಜಿಲ್ಲೆಯಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

ನೆಲಕಚ್ಚಿದ ಬೆಳೆಗಳು:

ಜಿಲ್ಲೆಯಲ್ಲಿ ಸುರಿದ ಸತತ ಮಳೆಯಿಂದಾಗಿ ಒಂದುಕಡೆ ಅಂತರ್ಜಲಮಟ್ಟಹೆಚ್ಚಾಗಿದ್ದರೆ, ಇನ್ನೊಂದೆಡೆ ಹವಾಮಾನ ವೈಪರೀತ್ಯದಿಂದ ಸುರಿದ ಮಳೆಗೆ ಪ್ರಮುಖ ಬೆಳೆಗಳೆಲ್ಲ ಬಹುತೇಕ ನೆಲಕಚ್ಚಿವೆ. ನಿರಂತರ ಸುರಿದ ಮಳೆಗೆ ಸಾವಿರಾರು ಹೆಕ್ಟೇರ್‌ ಕೃಷಿ ಮತ್ತು ತೋಟಗಾರಿಕೆ ಬೆಳೆಹಾನಿಯಾಗಿದೆ. ಕಷ್ಟಪಟ್ಟು ಕೃಷಿ ಮಾಡಿದ್ದ ರೈತರ ಫಲಸು ಕೈತಪ್ಪಿ ಹೋಗಿದ್ದರಿಂದ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ನಿರಂತರ ಸುರಿದ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಳಗೊಂಡು ಬೆಳೆ ನಾಶಗೊಂಡಿದೆ. ಈ ಹಿನ್ನೆಲೆ ಜಿಲ್ಲೆಯನ್ನು ‘ಹಸಿ ಬರಗಾಲ’ ಎಂದು ಘೋಷಿಸಿ ರೈತರಿಗೆ ಪರಿಹಾರ ನೀಡಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸುತ್ತಿವೆ.

ತಾಲೂಕುವಾರು ಅಂತರ್ಜಲಮಟ್ಟದ ಅಂಕಿಅಂಶ ಮೀಟರ್‌ನಲ್ಲಿ

ತಾಲೂಕು 2017 2018 2019 2020 2021 2022

  • ಹಾವೇರಿ 30.74 26.28 24.17 14.12 11.81 12.02
  • ರಾಣಿಬೆನ್ನೂರು 14.205 14.32 14.58 9.12 7.78 6.94
  • ಹಿರೇಕೆರೂರು 23.89 25.53 21.64 13.04 10.08 8.73
  • ರಟ್ಟಿಹಳ್ಳಿ 22.55 17.63 16.71 14.14 9.27 9.36
  • ಬ್ಯಾಡಗಿ 27.91 23.19 21.38 10.44 8.71 7.84
  • ಹಾನಗಲ್ಲ 18.34 14.35 13.32 11.82 10.87 10.48
  • ಸವಣೂರ 31.40 27.73 21.12 16.32 13.01 10.98
  • ಶಿಗ್ಗಾವಿ 17.76 10.79 7.58 4.69 4.16 4.61

ಸರಾಸರಿ 23.35 19.98 17.56 11.71 9.46 8.87 (ಮೀಟರ್‌)

ಜಲಶಕ್ತಿ ಹಾಗೂ ಅಮೃತ ಸರೋವರ ಅಭಿಯಾನದಡಿ ಜಿಲ್ಲೆಯಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಕೆರೆಗಳನ್ನು ಅಭಿವೃದ್ಧಿ ಪಡಿಸುವುದರಿಂದ ಅಂತರ್ಜಲಮಟ್ಟಹೆಚ್ಚಳಕ್ಕೆ ಸಹಕಾರಿಯಾಗಿದೆ. 2022-23 ಸಾಲಿನಲ್ಲಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ 223 ಕೆರೆಗಳ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಯೋಜನೆ ರೂಪಿಸಲಾಗಿದ್ದು, ಈ ಮೂಲಕ ಅಂತರ್ಜಲಮಟ್ಟಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.

ಮಹಮ್ಮದ್‌ ರೋಷನ್‌, ಜಿಪಂ ಸಿಇಒ

ಸತತ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲಮಟ್ಟಹೆಚ್ಚಳವಾಗಿದೆ. ಕಳೆದ ಐದು ವರ್ಷಗಳಿಂದ ಜಿಲ್ಲೆಯಲ್ಲಿ ಅಂತರ್ಜಲಮಟ್ಟವೃದ್ಧಿಯಾಗುತ್ತಿದೆ. 2017ರಲ್ಲಿ 23.35ಮೀ ಇದ್ದ ಅಂತರ್ಜಲ ಮಟ್ಟಪ್ರಸಕ್ತ ವರ್ಷ 8.87ಮೀ ಬಂದಿದೆ. ನಿರಂತರ ಮಳೆಯಿಂದಾಗಿ ಜಿಲ್ಲೆಯ ಕೆಲವು ಭಾಗದಲ್ಲಿ ಬತ್ತಿಹೋಗಿದ್ದ ಕೊಳವೆ ಬಾವಿಗಳಲ್ಲಿ ಅತರ್ಜಲಮಟ್ಟವೃದ್ಧಿಗೊಂಡು ನೀರು ಉಕ್ಕಿ ಹರಿಯುತ್ತಿವೆ.

ಸಂತೋಷ ಪ್ಯಾಟಿಗಾಣಗೇರ, ಹಿರಿಯ ಭೂವಿಜ್ಞಾನಿ, ಅಂತರ್ಜಲ ಇಲಾಖೆ ಹಾವೇರಿ

click me!