ರಾಜಕೀಯ ರಣಾಂಗಣದಲ್ಲಿ ಕುತೂಹಲ ಮೂಡಿದೆ. ಕೈ ವಿರುದ್ಧ ಜೆಡಿಎಸ್ ರಣತಂತ್ರ ರೂಪಿಸುತ್ತಿದೆ. ಒಟ್ಟಿನಲ್ಲಿ ಇಲ್ಲಿನ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಎಂ.ಅಫ್ರೋಜ್ ಖಾನ್
ರಾಮನಗರ (ನ.03): ಹಾಲಿ ಮತ್ತು ಮಾಜಿ ಶಾಸಕರ ಪ್ರತಿಷ್ಠೆಯಿಂದಾಗಿ ಕುತೂಹಲ ಕೆರಳಿಸಿರುವ ನ. 5ರಂದು ನಡೆಯುವ ಬಿಡದಿ ಪುರಸಭೆ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಸದಸ್ಯರಿಗೆ ನೀಡಿರುವ ವ್ಹಿಪ್ ಅನ್ನೇ ವ್ಯರ್ಥಗೊಳಿಸಲು ಜೆಡಿಎಸ್ ರಣತಂತ್ರ ರೂಪಿಸುತ್ತಿದೆ.
undefined
ಪುರಸಭೆಯಲ್ಲಿ ಬಿಸಿಎ - ಮಹಿಳೆಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ನಿಂದ ಸರಸ್ವತಿ, ಕಾಂಗ್ರೆಸ್‌ನಲ್ಲಿ ಚಂದ್ರಕಲಾ ನಾಗೇಶ್ ಆಕಾಂಕ್ಷಿಗಳಾಗಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿತರ ಸಂಖ್ಯೆ ಹೆಚ್ಚಾಗಿರುವ ಕಾರಣ ಯಾರ ಹೆಸರು ಅಂತಿಮಗೊಂಡಿಲ್ಲ. ಆದರೆ, ಪುರಸಭೆ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ತನ್ನ 11 ಮಂದಿ ಸದಸ್ಯರಿಗೆ ವ್ಹಿಪ್ ಜಾರಿ ಮಾಡಿದೆ. ಆದರೂ ಶಾಸಕ ಎ. ಮಂಜುನಾಥ್ ಅವರೊಂದಿಗೆ ಗುರುತಿಸಿಕೊಂಡಿರುವ ಕೈ ಸದಸ್ಯರು ಜೆಡಿಎಸ್ ಸದಸ್ಯರೊಂದಿಗೆ ಪ್ರವಾಸಕ್ಕೆ ತೆರಳಿದ್ದಾರೆ.
ಇದೆಂತಾ ನಾಚಿಕೆಗೇಡು : ಮತ್ತೆ ಸಿಟ್ಟಾದ ಎಚ್.ಡಿ. ರೇವಣ್ಣ ..
ಕಾಂಗ್ರೆಸ್ ಪಕ್ಷ ನೀಡಿರುವ ವ್ಹಿಪ್ ಸದಸ್ಯರಿಗೆ ಅನ್ವಯವೇ ಆಗದಂತೆ ಹಾಗೂ ಪಕ್ಷಾಂತರ ನಿಷೇಧ ಕಾಯ್ದೆ ತೂಗುಕತ್ತಿಯಿಂದ ಬಚಾವ್ ಮಾಡುವ ನಿಟ್ಟಿನಲ್ಲಿ ಜೆಡಿಎಸ್ ಶಾಸಕ ಎ.ಮಂಜುನಾಥ್, ಕಾಂಗ್ರೆಸ್‌ನ ಮತ್ತಷ್ಟುಸದಸ್ಯರನ್ನು ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
3/2 ಭಾಗದಷ್ಟುಸದಸ್ಯರ ಪಕ್ಷಾಂತರ ಅಗತ್ಯ:
ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆಯಲ್ಲಿ ಸದಸ್ಯರಿಗೆ ಜಾರಿ ಮಾಡಿದ ವ್ಹಿಪ್ ಅನ್ವಯವಾಗಬಾರದು ಎನ್ನುವುದಾದರೆ ಮೂರನೇ ಎರಡು (3/2)ಭಾಗದಷ್ಟುಸದಸ್ಯರು ಪಕ್ಷಾಂತರ ಮಾಡಬೇಕು. ಆಗ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲು ಅವಕಾಶ ಇರುವುದಿಲ್ಲ. ಈಗ ಪುರಸಭೆಯ 11 ಮಂದಿ ಕಾಂಗ್ರೆಸ್ ಸದಸ್ಯರ ಪೈಕಿ (ಮಂಗಳಮ್ಮ, ಟಿ.ಕುಮಾರ್ , ಬಿ.ಎಂ.ರಮೇಶ್ ಕುಮಾರ್, ಆರ್. ದೇವರಾಜು, ಬಿ.ಪಿ.ರಾಕೇಶ್ , ಸಿ.ಲೋಕೇಶ್) 6 ಮಂದಿ ಜೆಡಿಎಸ್ನಲ್ಲಿ ಗುರುತಿಸಿಕೊಂಡಿದ್ದರೆ, ಜೆಡಿಎಸ್‌ನ 12 ಸದಸ್ಯರ ಪೈಕಿ (ಬೋರೇಗೌಡ, ಉಮೇಶ್, ರಜನಿ )3 ಮಂದಿ ಕಾಂಗ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಕಾಂಗ್ರೆಸ್‌ನ ವ್ಹಿಪ್ ಅನ್ವಯವಾಗಬಾರದು ಎಂದರೆ 11ರ ಪೈಕಿ ಒಟ್ಟು 8 ಸದಸ್ಯರು ಪಕ್ಷಾಂತರ ಮಾಡಬೇಕು. ಇನ್ನು ಜೆಡಿಎಸ್ ಕೂಡ ವ್ಹಿಪ್ ಜಾರಿ ಮಾಡುವ ನಿರ್ಧಾರಕ್ಕೆ ಬಂದಿದೆ. ಆ ಪಕ್ಷದ 12ರ ಪೈಕಿ 9 ಸದಸ್ಯರು ಪಕ್ಷಾಂತರ ಮಾಡಿದಾಗ ಮಾತ್ರ ದಳದ ವ್ಹಿಪ್ ಪರಿಣಾಮ ಬೀರುವುದಿಲ್ಲ. ಇಲ್ಲದಿದ್ದರೆ ಪಕ್ಷಾಂತರಿಗಳ ವಿರುದ್ಧ ಕರ್ನಾಟಕ ಸ್ಥಳೀಯ ಸಂಸ್ಥೆಗಳ ಪಕ್ಷಾಂತರ ನಿಷೇಧ ಕಾಯಿದೆ 1987 ಅಡಿಯಲ್ಲಿ ಪ್ರಕರಣ ದಾಖಲಿಸಿ ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡಲು ಅವಕಾಶಗಳಿವೆ.
ಪುರಸಭೆಯಲ್ಲಿ 11 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್ ಸಂಖ್ಯೆ ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಸೇರಿ 13ಕ್ಕೆ ಹೆಚ್ಚಳವಾದರೆ, ಜೆಡಿಎಸ್‌ನ ಬಲ 12 ಸದಸ್ಯರ ಜತೆಗೆ ಶಾಸಕ ಎ. ಮಂಜುನಾಥ್ ಬೆಂಬಲದಿಂದ 13ಕ್ಕೆ ಹೆಚ್ಚಲಿದೆ. ಪುರಸಭೆ ಅಧಿಕಾರ ಕೇವಲ 6ರಿಂದ 8 ತಿಂಗಳು ಮಾತ್ರ ಅಧಿಕಾರ ಉಳಿದಿದೆ. ಪಕ್ಷಕ್ಕಿಂತ ನಾಯಕ ನಿಷ್ಠೆ ತೋರಿಸಿ ಲಾಭ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿರುವ ಉಭಯ ಪಕ್ಷಗಳ ಕೆಲ ಸದಸ್ಯರು ವ್ಹಿಪ್ ಉಲ್ಲಂಘಿಸಲೂ ಸಿದ್ದರಾಗುತ್ತಿದ್ದಾರೆ. ಇದೆಲ್ಲದರ ಜತೆಗೆ ಗದ್ದುಗೆ ಹಿಡಿಯಲು ಜೆಡಿಎಸ್ ಹಾಗೂ ಕಾಂಗ್ರೆಸ್ ತಂತ್ರ ಪ್ರತಿತಂತ್ರಗಳನ್ನು ಹೆಣೆಯುತ್ತಿವೆ.
ಕಾಂಗ್ರೆಸ್ ಚಿಹ್ನೆಯಲ್ಲಿ ಗೆದ್ದಿರುವ 11 ಸದಸ್ಯರಿಗೆ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವಂತೆ ವ್ಹಿಪ್ ಜಾರಿ ಮಾಡಿದ್ದೇವೆ.ಎಲ್ಲರು ಪಕ್ಷಕ್ಕೆ ನಿಷ್ಠರಾಗಿ ನಡೆದುಕೊಳ್ಳುತ್ತಾರೆಂಬ ವಿಶ್ವಾಸವಿದೆ. ಆದಾಗ್ಯೂ ವ್ಹಿಪ್ ಉಲ್ಲಂಘನೆ ಮಾಡಿದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಪ್ರಕರಣ ದಾಖಲಿಸುತ್ತೇವೆ.
-ಗಂಗಾಧರ್ ,ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ
ನಾನು ಜೆಡಿಎಸ್ ಸೇರ್ಪಡೆಯಾದ ನಂತರ ಪುರಸಭೆಯ ಕೆಲ ಕಾಂಗ್ರೆಸ್ ಸದಸ್ಯರು ನನ್ನೊಂದಿಗೆ ಬಂದಿದ್ದಾರೆ. ಕಾಂಗ್ರೆಸ್ ಸದಸ್ಯರಿಗೆ ವ್ಹಿಪ್ ಜಾರಿ ಮಾಡದಂತೆ ಸಂಸದ ಡಿ.ಕೆ.ಸುರೇಶ್ ಅವರಲ್ಲಿ ಮನವಿ ಮಾಡುತ್ತೇನೆ. ಹಾಗೊಂದು ವೇಳೆ ವ್ಹಿಪ್ ನೀಡಿದಲ್ಲಿ ಜೆಡಿಎಸ್ ಕೂಡ ವ್ಹಿಪ್ ಜಾರಿ ಮಾಡಲಿದೆ.
- ಎ.ಮಂಜುನಾಥ್ , ಶಾಸಕ