ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿ ವ್ಯಾಪ್ತಿಯ ಯರ್ರಮ್ಮನಹಳ್ಳಿ ಗ್ರಾಮದ ನ್ಯಾಯಬೆಲೆ ಕೇಂದ್ರದಿಂದ ಪಡಿತರದಾರರಿಗೆ ವಿತರಿಸಿದ್ದ ಅಕ್ಕಿಯಲ್ಲಿ ರಸಗೊಬ್ಬರದ ಹರಳು ಮಿಶ್ರಣವಾಗಿರುವುದು ಶುಕ್ರವಾರ ಬೆಳಕಿಗೆ ಬಂದಿದೆ.
ಪಾವಗಡ (ಫೆ.5) : ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿ ವ್ಯಾಪ್ತಿಯ ಯರ್ರಮ್ಮನಹಳ್ಳಿ ಗ್ರಾಮದ ನ್ಯಾಯಬೆಲೆ ಕೇಂದ್ರದಿಂದ ಪಡಿತರದಾರರಿಗೆ ವಿತರಿಸಿದ್ದ ಅಕ್ಕಿಯಲ್ಲಿ ರಸಗೊಬ್ಬರದ ಹರಳು ಮಿಶ್ರಣವಾಗಿರುವುದು ಶುಕ್ರವಾರ ಬೆಳಕಿಗೆ ಬಂದಿದೆ.
ತಾಲೂಕಿನ ಬೂದಿಬೆಟ್ಟಪಂಚಾಯಿತಿ ವ್ಯಾಪ್ತಿಯ ಯರ್ರಮ್ಮನಹಳ್ಳಿ ಗ್ರಾಮದ ನ್ಯಾಯಬೆಲೆ ಕೇಂದ್ರದಿಂದ ಪಡಿತರ ಆಹಾರ ಧಾನ್ಯ ವಿತರಿಸಲಾಗಿದೆ. ಈ ವೇಳೆ ಬಡ ಫಲಾನುಭವಿಯೊಬ್ಬರು ಪಡಿತರ ಆಹಾರಧಾನ್ಯಗಳು ಮನೆಗೆ ತಂದು ಶುಭ್ರಮಾಡುತಿದ್ದ ವೇಳೆ ಪಡಿತರ ಅಕ್ಕಿಯಲ್ಲಿ ಯೂರಿಯಾ ಮತ್ತು ಕಾಂಪ್ಲೆಕ್ಸ್ ಮಿಶ್ರಿತ ಗೊಬ್ಬರದ ಹರಳುಗಳು ಗೋಚರಿಸಿವೆ. ಈ ಬಗ್ಗೆ ಸಂಶಯ ವ್ಯಕ್ತಪಡಿಸಿ ಅಕ್ಕಪಕ್ಕದ ಮನೆಯ ಫಲಾನುಭವಿಗಳು ತಂದಿದ್ದ ಪಡಿತರ ಆಹಾರ ಪದಾರ್ಥಗಳನ್ನು ಪರೀಕ್ಷಿಸಿದಾಗ ಅವುಗಳಲ್ಲೂ ಗೊಬ್ಬರದ ಹರಳು ಕಂಡು ಬಂದಿದೆ. ಈ ಸಂಬಂಧ ಗ್ರಾಮಸ್ಥರೆಲ್ಲಾ ಸೇರಿ ಈ ಬಗ್ಗೆ ಸಂಬಂಧಪಟ್ಟಇಲಾಖೆಗೆ ಮಾಹಿತಿ ನೀಡಿದ್ದು ತಹಸೀಲ್ದಾರ್ ವರದರಾಜ್ ಆದೇಶದ ಹಿನ್ನಲೆಯಲ್ಲಿ ತಕ್ಷಣ ಪಡಿತರ ವಿತರಣೆ ನಿಲ್ಲಿಸಲಾಗಿದೆ.
undefined
Belagavi: ಪಡಿತರ ಅಕ್ಕಿಯೂ ಕಾಳಸಂತೆಯಲ್ಲಿ ಮಾರಾಟ?
ವಿಷಯ ತಿಳಿಯುತ್ತಿದ್ದಂತೆ ತಾಲೂಕು ಆಹಾರ ಇಲಾಖೆಯ ಪರಿವೀಕ್ಷಕ ಮಂಜುನಾಥ ಯರಮ್ಮನಹಳ್ಳಿಯ ಗ್ರಾಮಕ್ಕೆ ಭೇಟಿ ನೀಡಿ ಮನೆಮನೆಯ ಪಡಿತರ ವಿತರಣೆ ಆಹಾರ ಧಾನ್ಯ ಪರಿಶೀಲಿದಾಗ ಅಕ್ಕಿಯಲ್ಲಿ ರಸಗೊಬ್ಬರ ಮಿಶ್ರಿತ ಹರಳುಗಳು ಕಂಡು ಬಂದಿದೆ. ಸಾರ್ವಜನಿಕರ ಸೂಚನೆಯಂತೆ ಪಡಿತರ ವಿತರಣೆ ಕೇಂದ್ರಕ್ಕೆ ತೆರಳಿ ದಾಸ್ತಾನುಗಳ ಮೂಟೆಗಳನ್ನು ಪರೀಕ್ಷಿಸಿದಾಗ ಅದರಲ್ಲೂ ಗೊಬ್ಬರದ ಹರಳು ಮಿಶ್ರತವಾಗಿದ್ದು ಖಾತ್ರಿಯಾಗಿದೆ. ರಾಜ್ಯ ಹಾಗೂ ಜಿಲ್ಲಾ ಆಹಾರ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ರೀತಿ ಅಕ್ಕಿಯಲ್ಲಿ ರಸಗೊಬ್ಬರದ ಹರಳು ಮಿಶ್ರಿತವಾಗಿದೆ. ಶೀಘ್ರ ಪತ್ತೆಯಾಗಿದ್ದು ಅದೃಷ್ಟ. ಇಲ್ಲವಾಗಿದ್ದರೆ ಪಡಿತರ ಅಕ್ಕಿಯ ಆಹಾರ ಸೇವನೆಯಿಂದ ಗ್ರಾಮದ ಬಡ ಫಲಾನುವಿಗಳೆಲ್ಲಾ ಆಸ್ಪತ್ರೆಗೆ ದಾಖಲಾಗಬೇಕಿತ್ತು ಎಂದು ಆಸಮಾಧಾನ ಹೊರಹಾಕಿದ್ದಾರೆ.
ಈ ಸಂಬಂಧ ನ್ಯಾಯಬೆಲೆ ವಿತರಣೆ ಕೇಂದ್ರದ ಡೀಲರ್ ರಾಮಚಂದ್ರರೆಡ್ಡಿಯಿಂದ ಸಮಗ್ರ ಮಾಹಿತಿ ಪಡೆಯಲಾಗಿದೆ. ಪಡಿತರ ಧಾನ್ಯಗಳಲ್ಲಿ ರಸಗೊಬ್ಬರ ಹರಳು ಮಿಶ್ರತವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಕೂಡಲೇ ವರದಿ ಸಲ್ಲಿಸಲಿದ್ದು, ಪಡಿತರ ಆಹಾರ ಧಾನ್ಯ ಬದಲಿಸಿ ಕೊಡುವ ವ್ಯವಸ್ಥೆ ಮಾಡಲಾಗುವುದಾಗಿ ಆಹಾರ ಇಲಾಖೆಯ ಮಂಜುನಾಥ್ ತಿಳಿಸಿದ್ದಾರೆ.
Grama Vastavya: ಜನರಿಗೆ ಮತ್ತೆ 10 ಕೆ.ಜಿ ಪಡಿತರ ಅಕ್ಕಿ: ಸಚಿವ ಅಶೋಕ್