ವಿಜಯನಗರ: ಅರಿವಿನ ಹಬ್ಬ ತರಳಬಾಳು ಹುಣ್ಣಿಮೆ, ಸಿಎಂ ಬೊಮ್ಮಾಯಿ

By Girish Goudar  |  First Published Feb 5, 2023, 3:51 AM IST

ಸ್ವಾತಂತ್ರ್ಯ ಪೂರ್ವದಿಂದಲೂ ಮಠಮಾನ್ಯಗಳು ದಾಸೋಹ, ಶಿಕ್ಷಣ ಸೇವೆಯನ್ನು ನೀಡುತ್ತಾ ಬಂದಿವೆ, ಸರ್ಕಾರಗಳ ಜೊತೆ ಪೂರಕವಾಗಿ ಸಾಮಾಜಿಕ ಸೇವೆಯನ್ನು ನೀಡುತ್ತಿವೆ ಎಂದ ಮುಖ್ಯಮಂತ್ರಿ ಬೊಮ್ಮಯಿ. 


ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ವಿಜಯನಗರ(ಫೆ.05):  ರಾಜಕಾರಣಿಗಳನ್ನು ಮನೆಗೆ ಕಳುಹಿಸಿ. ಅವರ ಬದಲಿಗೆ ಮಠಾಧೀಶರನ್ನ ಸ್ವಾಮೀಜಿಗಳನ್ನ ವಿಧಾನಸಭೆಗೆ ಕಳುಹಿಸಿದ್ರೆ ಬೆಂಕಿ ಹತ್ತುತ್ತದೆ ಅಂತ ಸಿರಿಗೇರಿ ಪೀಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.  

Latest Videos

undefined

ನಿನ್ನೆ(ಶನಿವಾರ) ಕೊಟ್ಟರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಉತ್ಸವದಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಧರ್ಮ ಇರಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾದ ಮಂಡಿಸಿದ್ರು, ಇದಕ್ಕೆ ಭಗವದ್ಗೀತೆಯ ಉಲ್ಲೇಖ ನೀಡಿದ ಶ್ರೀಗಳು ಜೋಷಿಯವರ ಮಾತು ಅನುಮೋದಿಸುತ್ತೇವೆ ಎಂದರು. ಭಗವದ್ಗೀತೆಯಲ್ಲಿ ಧರ್ಮ ಕ್ಷೇತ್ರ ಕುರುಕ್ಷೇತ್ರ ಅನ್ನೋ ಶ್ಲೋಕವಿದೆ. ಕುರುಕ್ಷೇತ್ರ ಅಂದ್ರೇ ಯುದ್ದಭೂಮಿ ಅದು ಎಂತಹ ಯುದ್ದಭೂಮಿ ಅಂದ್ರೇ ಅದು ಧರ್ಮಕ್ಷೇತ್ರ ಎಂದು ಭಗವದ್ಗೀತೆ ಹೇಳುತ್ತದೆ. ಕುರುಕ್ಷೇತ್ರ ದಲ್ಲೂ ಧರ್ಮದ ಆಧಾರದ ತಳಹದಿಯ ಮೇಲೆ ಯುದ್ದಗಳು ನಡೆದಿವೆ. ಹಿಂದೆ ಯುದ್ಧಭೂಮಿಯಲ್ಲೂ ಒಂದು ಧರ್ಮಇತ್ತು, ಇವತ್ತಿನ ವಿಧಾನಸಭೆ, ಸಂಸತ್ತು ಕುರುಕ್ಷೇತ್ರ ಆಗಿದೆ. ಅದ್ರೇ ಧರ್ಮ ಕ್ಷೇತ್ರಗಳು ಕುರುಕ್ಷೇತ್ರ ಆಗಿಲ್ಲ.‌. ಅಧಿವೇಶನಗಳು ಧರ್ಮದ ತಳಹದಿಯ ಮೇಲೆ ನಡಿದಿದ್ರೆ ಯಾರು ಕಿತ್ತಾಡುತ್ತಿರಲಿಲ್ಲ. ಕೂಗಾಡುತ್ತಿರಲಿಲ್ಲ, ಒಂದು ನಿಯಮ ಬದ್ದ ಹೋರಾಟ ಕುರುಕ್ಷೇತ್ರದಲ್ಲಿತ್ತು. ಈಗ ಕುರುಕ್ಷೇತ್ರ ಧರ್ಮ ಕ್ಷೇತ್ರ ಆಗಿದೆ. ಧರ್ಮ ಇವತ್ತು ಕೆಟ್ಟ ರಾಜಕೀಯ ಆಗಿದೆ. ಎಲ್ಲ ರಾಜಕಾರಣಿಗಳನ್ನ ಮನೆಗೆ ಕಳುಹಿಸಿ. ಅವರ ಬದಲಿಗೆ ಮಠಾಧೀಶರನ್ನ ಸ್ವಾಮೀಜಿಗಳನ್ನ ವಿಧಾನಸಭೆಗೆ ಕಳುಹಿಸಿದ್ರೆ ಬೆಂಕಿ ಹತ್ತುತ್ತದೆ. ಹೀಗಾಗಿ ರಾಜಕೀಯ ಧರ್ಮದ ಬುನಾದಿಯ ಮೇಲೆ ಅದು ನಡೆಯಬೇಕು ಎಂದು ಹೇಳಿದರು.

ಹೂವಿನಹಡಗಲಿ: ಮೈಲಾರ ಜಾತ್ರೆಗೆ ಭರದ ಸಿದ್ಧತೆ

ಅರಿವಿನ ಹಬ್ಬ ತರಳಬಾಳು ಹುಣ್ಣಿಮೆ: ಸಿಎಂ ಬೊಮ್ಮಾಯಿ

ಇನ್ನೂ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಯಿ ಅವತು ಸ್ವಾತಂತ್ರ್ಯ ಪೂರ್ವದಿಂದಲೂ ಮಠಮಾನ್ಯಗಳು ದಾಸೋಹ, ಶಿಕ್ಷಣ ಸೇವೆಯನ್ನು ನೀಡುತ್ತಾ ಬಂದಿವೆ, ಸರ್ಕಾರಗಳ ಜೊತೆ ಪೂರಕವಾಗಿ ಸಾಮಾಜಿಕ ಸೇವೆಯನ್ನು ನೀಡುತ್ತಿವೆ ಎಂದರು.

ಜನರಿಗೆ ಸಂಸ್ಕಾರ, ಸಂಸ್ಕೃತಿ ಜೊತೆಗೆ ಅರಿವು ಮೂಡಿಸುವ ಕಾರ್ಯಕ್ರಮವೇ ತರಳಬಾಳು ಹುಣ್ಣಿಮೆ ಕಾರ್ಯಕ್ರಮ ಆಗಿದೆ. ಇಂತಹ ಮಹೋತ್ಸವದಲ್ಲಿ ನಾವು ಜ್ಞಾನವನ್ನು ಪಡೆದುಕೊಂಡು ಹೋಗುವ ಕಾರ್ಯ ನಡೆಯುತ್ತದೆ. ಜನಸಾಮಾನ್ಯರಿಗೆ ವಿಚಾರ, ಆದರ್ಶ, ಪರಂಪರೆ, ಸರ್ವರ ಸಮನ್ವಯ ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದರು.

ಚರ್ಚೆಗೆ ಗ್ರಾಸವಾದ ಲಾಡ್‌-ಶ್ರೀರಾಮುಲು ಆಲಿಂಗನ!

ವಿಚಾರದ ಮೂಲಕ್ಕೆ ಧರ್ಮ, ಜಾತಿ ಎಂಬುದಿಲ್ಲ. ವಿಚಾರದ ಬಳಕೆ ಸಮಯದಲ್ಲಿ ಎಲ್ಲವೂ ಅಂಟಿಕೊಳ್ಳುತ್ತದೆ. ವಿಚಾರವನ್ನು ಸುಜ್ಞಾನದಿಂದ ಅರಿತಾಗಲೇ ಗೊಂದಲ ನಿವಾರಣೆ ಸಾಧ್ಯ ಎಂದರು. ತರಳಬಾಳು ಜಗದ್ಗುರುಗಳ ಬದುಕಿನಲ್ಲಿ ನಡೆದ ಘಟನೆ, ಅವರು ತಾಳುತ್ತಿದ್ದ ದಿಟ್ಟ ನಿಲುವು, ಅವರ ಕಾಲನಂತರ ಅದು ಸತ್ಯ ಎಂಬುದು ಇತಿಹಾಸವಾಗಿ ಉಳಿದಿದೆ.

ಜಗದ್ಗುರುಗಳು ರೈತನ, ಕಾರ್ಮಿಕರ, ಸರ್ಕಾರಿ ನೌಕರರ, ರಾಜಕಾರಣಿಗಳ ಬದುಕನ್ನು ಹತ್ತಿರದಿಂದ ಕಂಡವರಾಗಿದ್ದರು. ಅಂತಹ ಅನುಭವವುಳ್ಳ, ದೃಷ್ಟಿಕೋನದ ವ್ಯಕ್ತಿ ಕಾಣುವಂತವರು ಪ್ರಸ್ತುತ ಸಮಾಜಕ್ಕೆ ಬೇಕಾಗಿದೆ ಎಂದರು.
ರಾಜ್ಯ ಶಿಕ್ಷಣಭರಿತವಾಗಿರುವುದಕ್ಕೆ ಮಠಗಳ ಪಾತ್ರ ಹಿರಿದಾಗಿದೆ. ಪ್ರಜಾಪ್ರಭುತ್ವಕ್ಕೂ ಮುನ್ನವೇ ಶಿಕ್ಷಣ ಪರಿಚಯ ಮಾಡಿದ್ದು ಮಠಗಳು. ಶಿಕ್ಷಣ, ದಾಸೋಹ ಮಾತ್ರವಲ್ಲದೇ ನೀರಾವರಿ ಯೋಜನೆ ಸೇರಿದಂತೆ ಕೆರೆ ತುಂಬಿಸುವ, ರೈತರಿಗೆ ಹಿತ ಬಯಸುವ ಬೇಡಿಕೆಗಳು ಸರ್ಕಾರಕ್ಕೂ ಪ್ರೇರಣೆಯಾಗಿದೆ ಎಂದರು.

click me!