Vijayapura Accident: ಬೈಕ್‌-ಲಾರಿ ಡಿಕ್ಕಿ: ತಂದೆ-ಮಗ ಸ್ಥಳದಲ್ಲಿಯೇ ಸಾವು

By Girish Goudar  |  First Published Apr 14, 2022, 12:34 PM IST

 *  ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆದ ಘಟನೆ
*  ಅಪಘಾತದ ಬಳಿಕ ಲಾರಿ ಡ್ರೈವರ್‌ ಪರಾರಿ
*  ಈ ಸಂಬಂಧ ದೇವರಹಿಪ್ಪರಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು 


ದೇವರಹಿಪ್ಪರಗಿ(ಏ.14):  ಪಟ್ಟಣದ ಸಮೀಪ ರಾಷ್ಟ್ರೀಯ ಹೆದ್ದಾರಿ-50ರ ತುಕಾಯಿ ಡಾಬಾ ಹತ್ತಿರ ಬೈಕ್‌ ಹಾಗೂ ಲಾರಿ ಮಧ್ಯ ಮುಖಾಮುಖಿ ಡಿಕ್ಕಿಯಾಗಿ ತಂದೆ-ಮಗ ಸ್ಥಳದಲ್ಲಿ ಸಾವನ್ನಪ್ಪಿದ(Death) ಘಟನೆ ನಡೆದಿದೆ. 
ಸಿಂದಗಿ(Sindagi) ತಾಲೂಕಿನ ಕನ್ನೊಳ್ಳಿ ಗ್ರಾಮದ ರಾಮಗೊಂಡ ಗೊರನಾಳ(45) ಲಕ್ಷ್ಮಣ್‌ ಗೊರನಾಳ(23) ಮೃತ ತಂದೆ-ಮಗ. ಬೈಕ್‌ನಲ್ಲಿದ್ದ ತಂದೆ ಮಗ ಕನ್ನೊಳ್ಳಿ ಗ್ರಾಮದಿಂದ ಬೆಳಗ್ಗೆ ದೇವರಹಿಪ್ಪರಗಿ ಮಾರ್ಗವಾಗಿ ಮುಳಸಾವಳಗಿ ಗ್ರಾಮದ ದ್ರಾಕ್ಷಿ ಚಟ್ನಿ ಮಾಡಲು ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ. 

ಅಪಘಾತದಲ್ಲಿ ಲಾರಿ ಪಲ್ಟಿಯಾಗಿದ್ದು ಲಾರಿ ಕೆಳಗೆ ಬೈಕ್‌ ಸವಾರರಿಬ್ಬರು ಸಿಕ್ಕಿಹಾಕಿಕೊಂಡಿದ್ದ ಪರಿಣಾಮ ಪೊಲೀಸ್‌(Police) ಸಿಬ್ಬಂದಿ ಕ್ರೇನ್‌ ಸಹಾಯದಿಂದ ಹೊರ ತೆಗೆಯಲು ಹರಸಾಹಸ ಪಟ್ಟ ಘಟನೆ ನಡೆಯಿತು. ಘಟನೆಯಲ್ಲಿ ಲಾರಿ ಡ್ರೈವರ್‌ ಪರಾರಿಯಾಗಿದ್ದು, ಈ ಕುರಿತು ಮೃತನ ಪತ್ನಿ ನಾಗಿಣಿ ದೇವರಹಿಪ್ಪರಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Tap to resize

Latest Videos

ರಸ್ತೆ ಅಪಘಾತದಲ್ಲಿ ಬಿಜೆಪಿ ಸಂಸದ ಕರಡಿ ಸಂಗಣ್ಣ ಸಹೋದರ ಸಾವು

ಕಾರ್‌-ಬೈಕ್‌ ನಡುವೆ ಅಪಘಾತ: ಬೈಕ್‌ ಸವಾರ ಸಾವು

ಮಹಾಲಿಂಗಪುರ: ಚಿಮ್ಮಡ ಗ್ರಾಮದ ಘಟಪ್ರಭಾ ಎಡದಂಡೆ ಕಾಲುವೆ ಬಳಿ, ಕಾರ್‌ ಹಾಗೂ ಬೈಕ್‌ ನಡುವೆ ನಡೆದ ಅಪಘಾತದಲ್ಲಿ(Accident) ಬೈಕ್‌ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇನ್ನೋರ್ವತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟಣೆ ಭಾನುವಾರ ಮಧ್ಯಾಹ್ನ ನಡೆದಿದೆ. 

ಚಿಮ್ಮಡ ಗ್ರಾಮದ ಸುನಿಲಕುಮಾರ ರಾಮು ಮಗದುಮ್‌ (36) ಅಪಘಾತದ ರಭಸಕ್ಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇವರ ಬೈಕ್‌ ಮೇಲೆ ಸವಾರಿ ಮಾಡುತಿದ್ದ ಗ್ರಾಮದ ಪರಸಪ್ಪ ಉಳ್ಳಾಗಡ್ಡಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. 

Tumakuru: ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ, ಸ್ಥಳದಲ್ಲೇ ಮೂವರ ದುರ್ಮರಣ

ಆರೋಪಿತನಾದ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಶಿವಾನಂದ ಮಹೇಶ ಶಿವಪುರೆ ಅವನು ತಾನು ನಡೆಸುತಿದ್ದ ಟಾಟಾ ಇಂಡಿಗೋ ಕಾರನ್ನು ಅತೀವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಮಹಾಲಿಂಗಪುರ ಕಡೆಗೆ ಹೊರಟಿದ್ದಾಗ ಎದುರಿಗೆ ಬರುತಿದ್ದ ಸುನಿಲಕುಮಾರ ರಾಮು ಮಗದುಮ್‌ ಅವರ ಬೈಕ್‌ಗೆ ಅತೀ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು ಬೈಕ್‌ನ ಹಿಂದಿನ ಸವಾರ ತೀವ್ರ ಗಾಯಗೊಂಡು ನರಳುತಿದ್ದಾಗ ಜನರ ನೆರವಿನೊಂದಿಗೆ ಆಸ್ಪತ್ರೆಗೆ ಸಾಗಿಸಲಾಗಿದೆ. 

ಬನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕ ಶಿವಾನಂದ ಮಹೇಶ ಶಿವಪುರೆ ಎಂಬುವನನ್ನು ಬಂಧಿಸಲಾಗಿದೆ. ಬನಹಟ್ಟಿ ಸಿಪಿಐ ಜೆ.ಕರುಣೇಶಗೌಡರ ನೇತೃತ್ವದಲ್ಲಿ ಠಾಣಾಧಿಕಾರಿ ಸುರೇಶ ಸಿ. ಮಂಟೂರ, ಎಎಸೈ ಎಸ್‌.ಎಸ್‌.ಬಾಬಾನಗರ, ಪಿ.ಎಸ್‌.ಚಿಲಾಪುರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

click me!