Vijayapura: ಮಕ್ಕಳ ಹಿರಿಯ ಸಾಹಿತಿ ಶರಣಪ್ಪ ಕಂಚ್ಯಾಣಿ ಇನ್ನಿಲ್ಲ

By Girish Goudar  |  First Published Apr 14, 2022, 11:53 AM IST

*  ದೇಹದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಸಾಹಿತಿ
*  ರಾಷ್ಟ್ರ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರಣಪ್ಪ ಕಂಚ್ಯಾಣಿ
*  ಶರಣಪ್ಪ ಕಂಚ್ಯಾಣಿ ನಿಧನಕ್ಕೆ ಗಣ್ಯರ ಸಂತಾಪ  
 


ವಿಜಯಪುರ(ಏ.14):  ಮಕ್ಕಳ ಹಿರಿಯ ಸಾಹಿತಿ, ರಾಷ್ಟ್ರ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರಣಪ್ಪ ಕಂಚ್ಯಾಣಿ (92)(Sharanappa Kanchyani) ಬುಧವಾರ ವಿಧಿವಶರಾಗಿದ್ದಾರೆ. ವಿಜಯಪುರ(Vijayapura) ಜಿಲ್ಲೆ ಶಿಕ್ಷಣ ಸಾಹಿತಿಗಳ ನೆಲೆವೀಡು. ಅದರಲ್ಲೂ ಇಲ್ಲಿರುವಷ್ಟು ಮಕ್ಕಳ ಸಾಹಿತಿಗಳು(Children's Writer) ಬೇರೆ ಎಲ್ಲೂ ಇಲ್ಲ. ಶಿ.ಶು. ಸಂಗಮೇಶ, ಶಂ.ಗು.ಬಿರಾದಾರ, ಈಶ್ವರಚಂದ್ರ ಚಿಂತಾಮಣಿ ಅವರಂತೆ ಶರಣಪ್ಪ ಕಂಚ್ಯಾಣಿ ಅವರು ಹಿರಿಯ ತಲೆಮಾರಿನ ಮಕ್ಕಳ ಸಾಹಿತ್ಯದ ಕೊನೆಯ ಕೊಂಡಿಯಾಗಿದ್ದರು.

ಶರಣಚೇತನ ಪತ್ರಿಕೆಯಲ್ಲಿ ಪ್ರಕಟವಾದ ಕಥೆಗಳು, ಕಥೆಗಳನ್ನು ಹುಡುಕಿ ಸಂಗ್ರಹಿಸಿ, ಚಿತ್ರ ಬಿಡಿಸಿ, ಪ್ರಕಟಣೆಗೆ ಸಜ್ಜುಗೊಳಿಸಿದ ಕೀರ್ತಿಇವರದ್ದು. ಕವಿ ತಿಲಕತಿಪ್ಪಣ್ಣ, ಸಿಕ್ಕಿ ಬಿದ್ದ ಕಳ್ಳರು, ಮನ್ನಪ್ಪ ಮಾಸ್ತರರು, ಪುಣ್ಯಕೋಟಿ, ಖರೆಖರೆ ಮಾಸ್ತರ್‌, ಉಂಗುರ ಬೆರಳು, ಹುಟ್ಟುಗುಣ ಮತ್ತು ದತ್ತು ಪುತ್ರಿ ಹೀಗೆ ಮಕ್ಕಳ ಕಥೆಗಳನ್ನು ಹೆಣೆಯುವದರಲ್ಲಿ ಸಿದ್ದ ಹಸ್ತರಾಗಿದ್ದರು. ಇವರ ಕಥೆ, ಕವನ, ನಾಟಕ, ಪ್ರಾಥಮಿಕ ಶಿಕ್ಷಕರಿಂದ ಸಂಶೋಧನ ವಿದ್ಯಾರ್ಥಿಗಳೂ ಕೂಡ ಮಾರ್ಗದರ್ಶಿಯಾಗಿವೆ. ಇವುಗಳಲ್ಲಿ ಕೆಲವೊಂದು ಪಠ್ಯಪುಸ್ತಕಗಳಲ್ಲಿ ಪ್ರಕಟವಾಗಿವೆ.

Latest Videos

undefined

HM Mahesh Passed Away: ಸಂಗೀತಾ ಕ್ಯಾಸೆಟ್‌ ಮಾಂತ್ರಿಕ ಎಚ್‌.ಎಂ. ಮಹೇಶ್‌ ಇನ್ನಿಲ್ಲ

ರಾಷ್ಟ್ರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(Kannada Rajyotsava Award)  ಹೀಗೆ ಹಲವಾರು ಪ್ರಶಸ್ತಿಗಳು ತಾವಾಗಿಯೇ ಹುಡುಕಿಕೊಂಡು ಬಂದಿದ್ದವು. ಶರಣಪ್ಪ ಕಂಚ್ಯಾಣಿ ಅವರು ತಾವಷ್ಟೇ ಸಾಹಿತ್ಯವನ್ನು ರಚಿಸಲಿಲ್ಲ. ತಮ್ಮೊಂದಿಗೆ ಇನ್ನಿತರ ಮಕ್ಕಳ ಸಾಹಿತಿಗಳನ್ನು ಬೆಳೆಸಿ, ಸಾಹಿತ್ಯದ ಲೋಕವನ್ನು ಜೀವಂತವಾಗಿಡುವಂತೆ ಮಾಡಿದ್ದಾರೆ. ಅವರು ಭೌತಿಕವಾಗಿ ನಮ್ಮಿಂದ ದೂರವಾಗಿದ್ದರೂ, ಕವಿ, ಸಾಹಿತಿಗಳ ಮನದಲ್ಲಿ ಎಂದೆಂದೂ ಧ್ರುವತಾರೆಯಾಗಿ ನಮ್ಮ ಮನದ ಅಂಗಳದಲ್ಲಿ ಬೆಳಕು ಚೆಲ್ಲಿದ್ದಾರೆ. ಸರಳ, ಸಜ್ಜನಿಕೆಯ ಕವಿಗಳಾಗಿ ಮಕ್ಕಳಿಗೆ ಅರಳು ಮಲ್ಲಿಗೆಯ ಹೂವಾಗಿ, ಹಿರಿಯರಿಗೆ ಸಲಹೆ, ಮಾರ್ಗದರ್ಶನ ನೀಡುವ ಆಪತ್‌ಬಾಂಧವರಾಗಿ ಕೆಲಸ ಮಾಡಿದ್ದು, ಇನ್ನೂ ಜನರಲ್ಲಿ ಹಸರಾಗಿ ಉಳಿದಿದೆ.

ಮಕ್ಕಳ ಸಾಹಿತ್ಯದ ಸೇವೆ ಮಾಡಿದಂತೆ ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ದೇಹವನ್ನು ಅಧ್ಯಯನಕ್ಕಾಗಿ ದಾನ ಮಾಡಿ, ಶರಣಪ್ಪ ಕಂಚ್ಯಾಣಿ ಅವರು ಪ್ರಾತ​ಸ್ಮರಣೀಯರಾಗಿದ್ದಾರೆ.

ಶರಣಪ್ಪ ಕಂಚ್ಯಾಣಿ ಅವರು ನಿವೃತ್ತ ಪ್ರಾಚಾರ್ಯ ಅರವಿಂದ ಕಂಚ್ಯಾಣಿ, ಶರಣ ಸಾಹಿತ್ಯ ಪರಿಷÜತ್‌ ಅಧ್ಯಕ್ಷ ಜಂಬುನಾ¥ Üಕಂಚ್ಯಾಣಿ ಸೇರಿದಂತೆ ಐವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಹೊಂದಿದ್ದಾರೆ.

ಈ ಸಂದರ್ಭದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಗಣ್ಯರಾದ ವಿ.ಸಿ. ನಾಗಠಾಣ, ಬಿ.ಎಂ.ಪಾಟೀಲ, ಹಾಸಿಂಪೀರ ವಾಲಿಕಾರ, ಡಾ. ಎಂ.ಎಸ್‌. ಮದಭಾವಿ, ಡಾ. ವಿ.ಡಿ. ಐಹೊಳ್ಳಿ, ಡಾ. ಮಹಾಂತೇಶ ಬಿರಾದಾರ, ಡಾ. ಎಂ.ಎಸ್‌. ಚಾಂದಕವಟೆ, ಸುರೇಶ ಶೇಡಶ್ಯಾಳ, ಎಸ್‌.ಎಸ್‌.ಗರಸಂಗಿ, ರಂಗನಾಥ ಅಕ್ಕಲಕೋಟ, ಹ.ಮ.ಪೂಜಾರ, ರಾಶಿ ವಾಡೆದ, ಫ.ಗು. ಸಿದ್ದಾಪುರ, ಆರ್‌.ಡಿ. ಐಹೊಳ್ಳಿ, ಚಂದ್ರಶೇಖರ ಮುಳವಾಡ, ಜಿ.ಎಂ. ಹಳ್ಳೂರ, ಮಹಾದೇವಿ ತೆಲಗಿ, ಶಾಂತಾಬಾಯಿ ಜೋಗೆನ್ನವರ, ಭಾರತಿ ಪಾಟೀಲ, ಡಾ. ಮಹೇಶ ಚಿಂತಾಮಣಿ ಮತ್ತಿತರರು ನುಡಿನಮನ ಸಲ್ಲಿಸಿದರು.

TRK Bhat Passed Away: ಬಿಜೆಪಿ ಹಿರಿಯ ಮುಖಂಡ ಟಿ.ಆರ್‌.ಕೆ. ಭಟ್‌ ಇನ್ನಿಲ್ಲ

ಶರಣಪ್ಪ ಕಂಚ್ಯಾಣಿ ಅವರ ಇಚ್ಚೆಯಂತೆ ಅವರ ನಿಧನಾನಂತರ ಅವರ ದೇಹವನ್ನು ಬುಧವಾರ ಸಂಜೆ 4ಗಂಟೆಗೆ ಬಿ.ಎಲ್‌.ಡಿ.ಇ ಡೀಮ್‌್ಡ ವಿಶ್ವವಿದ್ಯಾಲಯ ವೈದ್ಯಕೀಯ ಕಾಲೇಜ ಪ್ರಾಚಾರ್ಯ ಡಾ.ಅರವಿಂದ ಪಾಟೀಲ ಅವರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಡಾ.ವಿ.ಡಿ. ಐಹೊಳ್ಳಿ, ಡಾ. ಮಹಾಂತೇಶ ಬಿರಾದಾರ, ಡಾ. ಬುಲಗೌಡ, ಸುರೇಶ ಘೋಣಸಗಿ, ಅಶೋಕ ತಿಮ್ಮಶೆಟ್ಟಿ, ಎ.ಬಿ. ಬೂದಿಹಾಳ, ಚನ್ನಕುಮಾರ ಅರವಿಂ¨ Üಕಂಚ್ಯಾಣಿ ಉಪಸ್ಥಿತರಿದ್ದರು.

ಸಂತಾಪ: 

ಮಕ್ಕಳ ಸಾಹಿತಿ ಶರಣಪ್ಪ ಕಂಚ್ಯಾಣಿ ಅವರ ನಿಧನದಿಂದ ಮಕ್ಕಳ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿಅಧ್ಯಕ್ಷ, ಮಾಜಿ ಸಚಿವ ಎಂ.ಬಿ.ಪಾಟೀಲ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಂಗಮೇಶ ಬಬಲೇಶ್ವರ, ನ್ಯಾಯವಾದಿ, ಸಾಹಿತಿ ಮಲ್ಲಿಕಾರ್ಜುನ ಭೃಂಗಿಮಠ ಸೇರಿದಂತೆ ಅನೇಕರು ಮಕ್ಕಳ ಸಾಹಿತಿ ಕಂಚ್ಯಾಣಿ ಶರಣಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
 

click me!