Chamarajanagar: ಕೃಷಿ ನನಗೆ ಒಂದು ಫ್ಯಾಷನ್‌: ರೋಜರ್‌ ಬಿನ್ನಿ

By Kannadaprabha News  |  First Published Jun 17, 2023, 11:59 PM IST

ವ್ಯವಸಾಯಕ್ಕಾಗಿ ಬಿಸಿಸಿಐ ಅಧ್ಯಕ್ಷ, ಮಾಜಿ ಖ್ಯಾತ ಕ್ರಿಕೆಟಿಗ ರೋಜರ್‌ ಬಿನ್ನಿ ಅವರು ನಗರದ ಈಶ್ವರಿ ಟ್ರ್ಯಾಕ್ಟರ್‌ ಶೋರೂಂ ನಲ್ಲಿ ಮಹೀಂದ್ರ ಟ್ರ್ಯಾಕ್ಟರ್‌ ಖರೀದಿಸಿ, ಚಾಲನೆ ಮಾಡಿ ಇತರ ರೈತರಿಗೂ ಟ್ರಾಕ್ಟರ್‌ ವಿತರಿಸಿದರು. 


ಚಾಮರಾಜನಗರ (ಜೂ.17): ವ್ಯವಸಾಯಕ್ಕಾಗಿ ಬಿಸಿಸಿಐ ಅಧ್ಯಕ್ಷ, ಮಾಜಿ ಖ್ಯಾತ ಕ್ರಿಕೆಟಿಗ ರೋಜರ್‌ ಬಿನ್ನಿ ಅವರು ನಗರದ ಈಶ್ವರಿ ಟ್ರ್ಯಾಕ್ಟರ್‌ ಶೋರೂಂ ನಲ್ಲಿ ಮಹೀಂದ್ರ ಟ್ರ್ಯಾಕ್ಟರ್‌ ಖರೀದಿಸಿ, ಚಾಲನೆ ಮಾಡಿ ಇತರ ರೈತರಿಗೂ ಟ್ರಾಕ್ಟರ್‌ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೃಷಿ ನಂಗೆ ಒಂದು ಫ್ಯಾಷನ್‌. ಇದೇ ಕಾರಣಕ್ಕೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ಬಳಿ ಜಮೀನು ಖರೀದಿಸಿದ್ದೇನೆ. 

ಈಗ ಟ್ರ್ಯಾಕ್ಟರ್‌ ಸಹ ಖರೀದಿ ಮಾಡಿದ್ದೇನೆ ಎಂದರು. ಬಂಡೀಪುರ ಅರಣ್ಯದಂಚಿನ ಬಳಿ 36 ಎಕರೆ ಫಾರಂ ಇದೆ. ನಮ್ಮ ಪೂರ್ವಿಕರೇನೂ ಕೃಷಿಕರಲ್ಲ, ಆದರೆ, ನಾನು ಕಳೆದ 25 ವರ್ಷದಿಂದ ಕೃಷಿ ಮಾಡುತ್ತಾ ಬಂದಿದ್ದೇನೆ, ಕೃಷಿ ಎಂದರೆ ನನಗೆ ಖುಷಿ ಎಂದರು. ಐಪಿಎಲ್‌ಗೂ ಅಂತಾರಾಷ್ಟೀಯ ಕ್ರಿಕೆಟ್‌ಗೂ ಸಂಬಂಧವಿಲ್ಲ, ಇದರ ನಿಯಮವೇ ಬೇರೆ, ಆದರ ನಿಯಮವೇ ಬೇರೆ, ಮುಂದಿನ ದಿನಗಳಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಉತ್ತಮ ಭವಿಷ್ಯವಿದೆ, ವಿಶ್ವಕಪ್‌ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಭಾರತಕ್ಕೆ ಸ್ವಲ್ಪ ಹಿನ್ನಡೆಯಾಯಿತು, ಆದರೂ ನಮ್ಮವರು ಉತ್ತಮ ಪ್ರದರ್ಶವನ್ನೇ ನೀಡಿದ್ದಾರೆ.

Tap to resize

Latest Videos

undefined

ಸರ್ಕಾರ ಬಂದು 20 ದಿನ ಆಗಿಲ್ಲ, ಯಾವ ಕಮಿಷನ್‌ ತೆಗೆದುಕೊಳ್ಳುವುದು: ಎಚ್‌ಡಿಕೆ ವಿರುದ್ಧ ಸಚಿವ ವೆಂಕಟೇಶ್‌ ಕಿಡಿ

ಆಸ್ಟೇಲಿಯದ ಅನುಭವಿ ಆಟಗಾರರಿಗೆ ಅಲ್ಲಿನ ಪಿಚ್‌ ಸಹಕಾರಿಯಾಯಿತು ಎಂದರು. ಇದೇ ಸಂದರ್ಭದಲ್ಲಿ ಶೋ ರೂಂ ವತಿಯಿಂದ ರೋಜರ್‌ ಬಿನ್ನಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಮಹೀಂದ್ರ ಕಂಪನಿಯ ಅರವಿಂದ್‌ ಪಾಂಡೆ, ಮೌಲಿಕ್‌ ತೆಕ್ಕರ್‌, ಸಂತೋಷ್‌ ದುಗಾದಿ, ಶಂಕರ್‌ ಶ್ರೀನಿವಾಸ, ಶೋ ರೂಂ ಮಾಲೀಕರಾದ ಜಿ.ಪ್ರಶಾಂತ್‌, ಅಶೋಕ್‌, ಮುಖಂಡರಾದ ಅರಕಲವಾಡಿಮಹೇಶ್‌, ಶಮಿತ್‌, ಕಲ್ಪುರ ಸೋಮು, ಸಂಜು, ರಾಜೇಶ್‌, ಬೇಡರಪುರ ಮಹೇಶ್‌, ಶಿವರಾಜ್‌ ಇತರರು ಇದ್ದರು

ಐಪಿಎಲ್‌ನಿಂದ ಕ್ರಿಕೆಟ್‌ ಪಂದ್ಯಗಳಿಗೆ ತೊಂದರೆಯಿಲ್ಲ: ಐಪಿಎಲ್‌ ಪಂದ್ಯಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಿಗೆ ಯಾವುದೇ ತೊಂದರೆಯಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ ತಿಳಿಸಿದರು. ಚಾಮರಾಜನಗರಕ್ಕೆ ಶುಕ್ರವಾರ ಭೇಟಿ ಕೊಟ್ಟಿದ್ದ ಅವರು ಟಿ 20 ಗೂ, ಏಕ ದಿನ, ಟೆಸ್ಟ್‌ ಪಂದ್ಯಗಳಿಗೆ ಸಾಕಷ್ಟು ವ್ಯತ್ಯಾಸವಿದೆ. ನಾವು ಟೆಸ್ಟ್‌ ಕ್ರಿಕೆಟ್‌ ಅನ್ನು ಯಾವುದೇ ಕಾರಣಕ್ಕೂ ಮರೆಯಬಾರದು. 

ಚಾಮರಾಜನಗರ ಜಿಲ್ಲೆಗೆ ಅಗತ್ಯವಿರುವಷ್ಟು ನೆರವು ನೀಡಲು ನಮ್ಮ ಸರ್ಕಾರ ಬದ್ಧ: ಸಚಿವ ಮಹದೇವಪ್ಪ

ಟೆಸ್ಟ್‌ ನಲ್ಲಿ ಕ್ರಿಕೆಟ್‌ ಭವಿಷ್ಯ ಅಡಗಿದೆ. ವೀಕ್ಷಕರ ಮನರಂಜನೆಗಾಗಿ ಐಪಿಎಲ್‌ ನಡೀತಿದೆ. ವಿಭಿನ್ನ ವಾತಾವರಣದಲ್ಲಿ ಕ್ರಿಕೆಟ್‌ ಆಡುವಾಗ ಪಿಚ್‌ ಅರ್ಥ ಮಾಡಿಕೊಳ್ಳಲೂ ಕಷ್ಟಆಗುತ್ತೆ. ಅಸೀಸ್‌ ವಿರುದ್ಧದ ಟೆಸ್ಟ್‌ ಫೈನಲ್‌ ವೇಳೆ ಮೊದಲ ದಿನ ಸರಿಯಾಗಿ ಆಡಲಿಲ್ಲ, ಟೀಮ್‌ ಆಯ್ಕೆಯ ವೇಳೆ ಒಂದು ಸಣ್ಣ ತಪುತ್ರ್ಪ ಕೂಡ ಆಗಿದೆ. ಇಲ್ಲದಿದ್ದರೆ ಆ ಪಂದ್ಯ ಗೆಲ್ಲುತ್ತಿದ್ದೆವು ಎಂದಿದ್ದಾರೆ. ಟಿ ಟ್ವೆಂಟಿ ಇರಲಿ, ಏಕದಿನವಾಗಲಿ, ಟೆಸ್ಟ್‌ ಇರಲಿ ಎಲ್ಲದಕ್ಕೂ ಆಟಗಾರರು ಹೊಂದಾಣಿಕೆ ಆಗಬೇಕು. ಆಗ ಅವರು ಉತ್ತಮ ಆಟಗಾರರಾಗಿರುತ್ತಾರೆಂದು ಅಭಿಪ್ರಾಯಪಟ್ಟರು.

click me!