ಹಾವೇರಿ ಗ್ರಾಮೀಣ ಭಾಗದಲ್ಲಿ ಡೀಸೆಲ್‌ಗೆ ಹಾಹಾಕಾರ, ಬಿತ್ತನೆ ಹುರುಪಿನಲ್ಲಿದ್ದ ರೈತರಿಗೆ ಆತಂಕ

By Suvarna News  |  First Published May 30, 2022, 8:56 PM IST

 * ಬಿತ್ತನೆ ಕಾರ್ಯಕ್ಕೆ ಸಜ್ಜಾಗಿದ್ದ ರೈತರಿಗೆ ಈಗ ಡೀಸೆಲ್​ ಶಾಕ್​​​ 
* ಹಾವೇರಿ ಗ್ರಾಮೀಣ ಭಾಗದಲ್ಲಿ ಡೀಸೆಲ್‌ಗೆ  ಹಾಹಾಕಾರ
* ಬಿತ್ತನೆ ಹುರುಪಿನಲ್ಲಿದ್ದ ರೈತರಿಗೆ ಆತಂಕ


ಹಾವೇರಿ, (ಮೇ.30): ಹಾವೇರಿಯಲ್ಲಿ ಉತ್ತಮ ಮಳೆಯಿಂದ ಬಿತ್ತನೆ ಕಾರ್ಯಕ್ಕೆ ಸಜ್ಜಾಗಿದ್ದ ರೈತರಿಗೆ ಈಗ ಡೀಸೆಲ್​ ಶಾಕ್​​​ ಕೊಟ್ಟಿದೆ. ಹಾವೇರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಡೀಸೆಲ್ ಸಿಗುತ್ತಿಲ್ಲ‌. ಬಿತ್ತನೆ ಕಾರ್ಯಕ್ಕೆ ಸಜ್ಜಾಗಿದ್ದ ರೈತರಿಗೆ ಡೀಸೆಲ್​ ಕೊರತೆ ಕಾಡುತ್ತಿದೆ.

ಹೌದು... ಹಾವೇರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಬಿತ್ತನೆಗೆ ಹೊಲಗಳನ್ನು ಸಜ್ಜುಗೊಳಿಸುತ್ತಿದ್ದ ರೈತರಿಗೆ ಇದ್ದಕ್ಕಿದ್ದಂತೆ ಡೀಸೆಲ್ ಅಭಾವ ಆತಂಕ ತಂದಿದೆ. ಹೀಗಾಗಿ ಹಾವೇರಿ ನಗರ ಪ್ರದೇಶದ ಬಂಕ್​ಗಳತ್ತ ಟ್ರ್ಯಾಕ್ಟರ್​​ನಲ್ಲಿ ಬಂದು ಡ್ರಮ್​ಗಳಲ್ಲಿ , ದೊಡ್ಡ ದೊಡ್ಡ ಕ್ಯಾನ್​ಗಳಲ್ಲಿ ಡೀಸೆಲ್ ತುಂಬಿಸಿಕೊಂಡು ಹೋಗುತ್ತಿದ್ದಾರೆ. 

Tap to resize

Latest Videos

undefined

Hubballi: ಇಂಧನ ಕೊರತೆಯ ವದಂತಿ: ಪೆಟ್ರೋಲ್ ಬಂಕ್‌ಗಳ ಮುಂದೆ ದೊಡ್ಡ ಸರದಿ ಸಾಲು!

ಭಾರತ್ ಪೆಟ್ರೋಲಿಯಂ ಬಂಕ್​​​ಗಳಿಗೆ ಸಮರ್ಪಕ ಡೀಸೆಲ್ ಪೂರೈಕೆ ಆಗ್ತಿಲ್ಲ ಅನ್ನೋ ಆರೋಪ ಇದೆ. ಸವಣೂರು, ಹಾವೇರಿ, ಶಿಗ್ಗಾವಿ, ಹಾನಗಲ್, ರಾಣೆಬೆನ್ನೂರು ತಾಲೂಕುಗಳಲ್ಲಿ ಡೀಸೆಲ್​​ ಕೊರತೆ ಇದೆ ಎಂದು ರೈತರು ಆರೋಪಿಸುತ್ತಿದ್ದಾರೆ. ಭಾರತ್ ಪೆಟ್ರೋಲಿಯಂ ಬಂಕ್ ಗಳಿಗೆ ಬೆಳಗಾವಿಯಿಂದ ಪೆಟ್ರೋಲ್ , ಡೀಸೆಲ್ ಪೂರೈಕೆ ಆಗುತ್ತೆ. ಆದರೆ ಬೆಳಗಾವಿಯಿಂದ ಸಮರ್ಪಕ ರೀತಿಯಲ್ಲಿ ಡೀಸೆಲ್ ಪೂರೈಕೆ ಆಗ್ತಾ ಇಲ್ಲ. ಬೇಡಿಕೆಗೆ ತಕ್ಕ ಹಾಗೆ ಡೀಸೆಲ್ ಪೂರೈಕೆಯಾಗದ ಕಾರಣ ಡೀಸೆಲ್ ಕೊರತೆ ಆಗಿದೆ‌. ಸಪ್ಲೈ ಪಾಯಿಂಟ್ ಪ್ರಾಬ್ಲಂ ನಿಂದ ಹೀಗಾಗಿದೆ ಅಂತಾರೆ ಬಂಕ್ ಮಾಲೀಕರು.

ಪೆಟ್ರೋಲ್‌ ಪ್ರತಿ ಲೀ.ಗೆ 9.50 ರೂ., ಡೀಸೆಲ್‌ ಪ್ರತಿ ಲೀ. ದರ 8 ರೂ. ಇಳಿಸುವ ಮೂಲಕ ಗ್ರಾಹಕರ ಮೇಲಿನ ಹೊರೆ ಇಳಿದಿರುವುದು ಸ್ವಾಗತಾರ್ಹ. ಆದರೆ ಈ ಘೋಷಣೆ ವೇಳೆ ವಾರಾಂತ್ಯವೂ ಆಗಿದ್ದರಿಂದ ಪೆಟ್ರೋಲ್‌ ಬಂಕ್‌ಗಳಲ್ಲಿ ಭಾರೀ ತೈಲ ದಾಸ್ತಾನಿತ್ತು. ಈ ಸಮಯದಲ್ಲಿ ಜಿಲ್ಲೆಯ ಎಲ್ಲ ಬಂಕ್‌ಗಳಲ್ಲಿ 20 ಸಾವಿರಕ್ಕೂ ಅಧಿಕ ಲೀ. ತೈಲ ಸಂಗ್ರಹ ಇತ್ತು. ಕೇಂದ್ರ ಸರಕಾರ ಪೆಟ್ರೋಲ್‌, ಡೀಸೆಲ್‌ ದರವನ್ನು ಯಾವುದೇ ಮುನ್ಸೂಚನೆ ನೀಡದೇ ದಿಢೀರ್‌ ಇಳಿಸಿದ ಪರಿಣಾಮ ಇದೀಗ ತೈಲ ವಿತರಕರಿಗೆ ಕೋಟ್ಯಂತರ ರೂ. ನಷ್ಟವಾಗಿದೆ ಎಂದು ಬಂಕ್ ಮಾಲೀಕರು ಅಳಲು ತೋಡಿಕೊಳ್ತಿದ್ದಾರೆ.

ಬಿತ್ತನೆಗೆ ತಯಾರಾಗಿದ್ದ ರೈತರು ದೊಡ್ಡ ದೊಡ್ಡ ಕ್ಯಾನ್ ಗಳೊಂದಿಗೆ ಬಂಕ್ ಗಳಲ್ಲಿ ಕ್ಯೂ ಹಚ್ಚಿರೋ ದೃಷ್ಯಗಳು ಈಗ ಜಿಲ್ಲೆಯಾದ್ಯಂತ ಸರ್ವೆ ಸಾಮಾನ್ಯವಾಗಿದೆ.

ಪೆಟ್ರೋಲ್ ಬಂಕ್ ಮಾಲೀಕರು ಮುಷ್ಕರ
ನಾಳೆಯಿಂದ(ಮಂಗಳವಾರ) ಪೆಟ್ರೋಲ್ ಬಂಕ್ ಮಾಲೀಕರು ಮುಷ್ಕರ ನಡೆಸಲಿದ್ದು, ಪೆಟ್ರೋಲ್, ಡಿಸೇಲ್ ಕೊರತೆ ಉಂಟಾಗಲಿದೆ ಎಂಬ ಸುದ್ದಿ ಹರಿದಾಡಿದ ಹಿನ್ನೆಲೆಯಲ್ಲಿ ವಾಹನ ಸವಾರರು ಪೆಟ್ರೋಲ್, ಡಿಸೇಲ್ ತುಂಬಿಸಲು ಬಂಕ್ ಗಳ ಮುಂದೆ ಮುಗಿಬಿದ್ದ ಘಟನೆ ಹುಬ್ಬಳ್ಳಿ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ಹಲವೆಡೆ ನಡೆದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ  ಪೆಟ್ರೋಲ್ ಬಂಕ್‌ ಮುಂದೆ ಜನ ಪೆಟ್ರೋಲ್ ತುಂಬಿಸಲು ನಾ ಮುಂದು ತಾ ಮುಂದೆ ಅಂತ ಕ್ಯೂ ನಿಂತಿದ್ದಾರೆ.

ಬ್ಯಾಂಕಿಂಗ್ ವಹಿವಾಟಿನಲ್ಲಿ ಆಗುತ್ತಿರುವ ತೊಂದರೆ ತಪ್ಪಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ತೈಲ ಖರೀದಿ ನಿಲ್ಲಿಸುವ ಮೂಲಕ ಮೇ 31ರಂದು ಪ್ರತಿಭಟನೆ ನಡೆಸಲು ಪೆಟ್ರೋಲ್ ಬಂಕ್ ಮಾಲೀಕರು ನಿರ್ಧರಿಸಿದ್ದು, ಈ ವಿಚಾರ ತಪ್ಪಾಗಿ ಅರ್ಥೈಸಿಕೊಂಡು ಸಮಾಜಿಕ ಜಾಲತಾಣದಲ್ಲಿ ತೈಲ ಕೊರತೆ ಉಲ್ಬಣಿಸಲಿದೆ ಎಂದು ಬಿಂಬಿಸಲಾಗಿದ್ದು, ಇದರಿಂದ ವಾಹನ ಸವಾರರು ತಮ್ಮ ಗಾಡಿಗಳಿಗೆ ತೈಲ ತುಂಬಿಸಲು ಮುಗಿಬಿದ್ದಿದ್ದಾರೆ.

click me!