ಬೇಡಿಕೆ ಈಡೇರಿಸಲು ಸರ್ಕಾರ ವಿಫಲ; ಇಂದು ಮೈಸೂರು ಹೆದ್ದಾರಿ ತಡೆದು ರೈತಸಂಘ ಪ್ರತಿಭಟನೆ

By Ravi JanekalFirst Published Oct 5, 2022, 8:09 AM IST
Highlights

ದಸರಾ ಸಂದರ್ಭದಲ್ಲೇ ಕರ್ನಾಟಕ ರೈತ ಸಂಘ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮೈಸೂರು ಸಂಪರ್ಕ ಕಲ್ಪಿಸುವ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿರುವುದು ಸರ್ಕಾರಕ್ಕೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.

ಮಂಡ್ಯ (ಅ.5): ದಸರಾ ಹಿನ್ನೆಲೆ ಮೈಸೂರು ಸಾಂಸ್ಕೃತಿ ವೈಭವ ಕಣ್ತುಂಬಿಕೊಳ್ಳಲು ರಾಜ್ಯಾದ್ಯಂತ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಹರಿದು ಬಂದಿದ್ದಾರೆ.  ಟ್ರಾಫಿಕ್ ಜಾಮ್‌ಗೆ ಪೊಲೀಸರು ಹೈರಾಣಾಗಿದ್ದಾರೆ. ಈ ನಡುವೆ ದಸರಾ ದಿನವೇ ಕರ್ನಾಟಕ ರೈತ ಸಂಘ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮೈಸೂರು ಸಂಪರ್ಕ ಕಲ್ಪಿಸುವ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿರುವುದು ಸರ್ಕಾರಕ್ಕೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.

Mysuru: ಸೆ.19 ರಂದು ಮಂಡ್ಯದಲ್ಲಿ ಬೃಹತ್‌ ರೈತ ಸಮಾವೇಶ: ಬಡಗಲಪುರ ನಾಗೇಂದ್ರ

ಬೆಳಗ್ಗೆ 10 ಗಂಟೆಯಿಂದ ಹೆದ್ದಾರಿ ಬಂದ್ ಮಾಡಲು ರೈತ ಸಂಘ ಕರೆ ನೀಡಿದೆ. ಮಂಡ್ಯ ಜಿಲ್ಲೆಯಲ್ಲಿ ಮದ್ದೂರು, ಕೆ.ಆರ್.ಪೇಟೆ, ಮಳವಳ್ಳಿ, ಶ್ರೀರಂಗಪಟ್ಟಣ ಹಾಗೂ ಮೈಸೂರು ಜಿಲ್ಲೆಯ ಇಲವಾಲ, ಟಿ.ನರಸೀಪುರ, ನಂಜನಗೂಡು, ಹುಣುಸೂರಿನಲ್ಲಿ ಹೆದ್ದಾರಿ ತಡೆಯಲು ಪ್ಲಾನ್.

ಬೇಡಿಕೆಗಳೇನು?

ಕೆಆರ್‌ಎಸ್ ಸುತ್ತಮುತ್ತ ಶಾಶ್ವತವಾಗಿ ಗಣಿಗಾರಿಕೆ ನಿಲ್ಲಿಸಬೇಕು, ಟನ್ ಕಬ್ಬಿಗೆ 4,500ರೂ. ಬೆಲೆ ನಿಗದಿಪಡಿಸಬೇಕು, ಪ್ರತಿ ಲೀಟರ್ ಹಾಲಿಗೆ 40ರೂ. ನೀಡಬೇಕು.. ಇನ್ನು ಹಲವು ಬೇಡಿಕೆಗಳು ಈಡೇರಿಸುವಂತೆ ಆಗ್ರಹ. ಕಳೆದ ತಿಂಗಳು ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ ಸಭೆ ನಡೆಸಿ ಸರ್ಕಾರಕ್ಕೆ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದರು ಆದರೆ ರೈತಸಂಘ ಸಭೆ ನಡೆಸಿ ತಿಂಗಳಾದರೂ ಸರ್ಕಾರ ಯಾವುದೇ ಬೇಡಿಕೆ ಈಡೇರಿಸದ್ದಕ್ಕೆ ಇಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ನಾಗೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಹೆದ್ದಾರಿ ತಡೆಯಲು ನಿರ್ಧಾರ.

ಹೆದ್ದಾರಿ ತಡೆದರೆ ಪ್ರವಾಸಿಗರಿಗೆ ಸಮಸ್ಯೆ:

ಹೆದ್ದಾರಿ ತಡೆಯಿಂದ ದಸರಾಗೆ ಬರುವ ಪ್ರವಾಸಿಗರಿಗೆ ಸಮಸ್ಯೆಯಾಗುತ್ತದೆ. ದಸರಾ ಹಿನ್ನೆಲೆ ರಾಜ್ಯಾದ್ಯಂತ ಲಕ್ಷಾಂತರ ಪ್ರವಾಸಿಗರು ಈಗಾಗಲೇ ಮೈಸೂರಿಗೆ ಬಂದಿರುವುದರಿಂದ ಜನದಟ್ಟಣೆಯಿಂದ ಟ್ರಾಫಿಕ್ ಸಮಸ್ಯೆಯಾಗಿದೆ. ಇದೀಗ ಹೆದ್ದಾರಿ ತಡೆದರೆ ಮೈಸೂರು ದಸರಾಕ್ಕೆ ಬರುವ ಪ್ರವಾಸಿಗರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ.

ಹೆದ್ದಾರಿ ತಡೆಗೆ ನಾಲ್ಕು ದಿನದ ಹಿಂದೆಯೇ ನಿರ್ಧಾರ: ಸರ್ಕಾರ ರೈತ ಸಂಘದ ಬೇಡಿಕೆ ಈಡೇರಿಸಿದ್ದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ರೈತ ಸಂಘ ಹೇಳಿತ್ತು. ಆ ಬಗ್ಗೆ ಮಂಡ್ಯ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರ ಗಮನಕ್ಕೂ ತಂದಿದ್ದರು. ಆದರೆ ಸಚಿವ ಕೆ.ಗೋಪಾಲಯ್ಯ ಅವರು, ತಕ್ಷಣ ಸಭೆ ನಡೆಸಲು ಆಗಲ್ಲ, 15 ದಿನ ಸಮಯ ಕೊಡಿ ಎಂದಿದ್ದರು. ಬಳಿಕ ಸಚಿವರು ಯಾವುದೇ ನಿರ್ಧಾರಕ್ಕೆ ಬರದೇ, ಸಭೆ ನಡೆಸದೇ ನಿರ್ಲಕ್ಷಿಸಿದ್ದರು. 

ಸೆ.26ರಂದು ರೈತ ಸಂಘಟನೆಗಳ ಒಕ್ಕೂಟದಿಂದ ವಿಧಾನಸೌಧ ಚಲೋ: ಕುರುಬೂರು ಶಾಂತಕುಮಾರ್‌

ಮೈಸೂರು ಉಸ್ತುವಾರಿ ಸಚಿವರ ಗಮನಕ್ಕೂ ತಂದಿದ್ದ ರೈತ ಸಂಘ:

ಬೇಡಿಕೆ ಈಡೇರಿಸಲು ಸರ್ಕಾರ ವಿಫಲವಾದಲ್ಲಿ ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎರಡು ದಿನಗಳ ಹಿಂದೆಯಷ್ಟೇ ರಾಜ್ಯ ರೈತಸಂಘ  ಮೈಸೂರು ಉಸ್ತುವಾರಿ ಸಚಿವರ ಗಮನಕ್ಕೂ ತಂದಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಎಸ್‌.ಟಿ.ಸೋಮಶೇಖರ್, ಸಿಎಂ ಜೊತೆ ಚರ್ಚಿಸುತ್ತೇನೆ 10 ದಿನ ಸಮಯ ಬೇಕು ಎಂದಿದ್ದರು. ಸಂಧಾನ ಸಭೆ ವಿಫಲವಾದ್ದರಿಂದ ಇಂದು ರಾಜ್ಯ ರೈತಸಂಘ ಹೆದ್ದಾರಿ ತಡೆಯಲು ನಿರ್ಧಾರ.

click me!