ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ತಾಲೂಕು ರೈತ ಸಂಘ, ಹಸಿರು ಸೇನೆ ವತಿಯಿಂದ ನೂರಾರು ಮಂದಿ ರೈತ ಮುಖಂಡರು ತಾಲೂಕು ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಾವಗಡ : ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ತಾಲೂಕು ರೈತ ಸಂಘ, ಹಸಿರು ಸೇನೆ ವತಿಯಿಂದ ನೂರಾರು ಮಂದಿ ರೈತ ಮುಖಂಡರು ತಾಲೂಕು ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಾಲೂಕು ರೈತ ಸಂಘ,ಹಸಿರು ಸೇನೆಯ ಅಧ್ಯಕ್ಷ ದೊಡ್ಡಹಟ್ಟಿ ಪೂಜಾರಪ್ಪ ಮಾತನಾಡಿ,ರ ನಿರ್ಲಕ್ಷ್ಯದ ಪರಿಣಾಮ ಶಸ್ತ್ರ ಚಿಕಿತ್ಸೆ ಫಲಕಾರಿಯಾಗದೇ ಮೂರು ಮಹಿಳೆಯರು ಸಾವನ್ನಪ್ಪಿದ್ದು, ಬಡ ಗಳು ಸಂಕಷ್ಟಕ್ಕಿಡಾಗಿರುವುದಾಗಿ ಆರೋಪಿಸಿದರು.
undefined
ಇದೇ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲ ಸುಧಾರಣೆಗಳಾಗಬೇಕಿದೆ. ಅಲ್ಲದೇ ಮೊದಲಿನಿಂದಲೂ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ನರರೋಗ ಕಣ್ಣು, ಕಿವಿ, ಹೆರಿಗೆ ಇತರೆ ವಿಭಾಗಗಳಲ್ಲಿ ವೈದ್ಯರೆ ಇಲ್ಲ. ಸುಮಾರು 14 ಮಂದಿ ವೈದ್ಯರ ಆಗತ್ಯವಿದೆ. ಗಡಿ ಭಾಗದ ತಾಲೂಕಿನಲ್ಲಿ ಚಿಕಿತ್ಸೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಆರೋಗ್ಯ ಸಚಿವರ ಜತೆ ಚರ್ಚಿಸಿ ಹೆಚ್ಚಿನ ವೈದ್ಯರು ಹಾಗೂ ಆಸ್ಪತ್ರೆಯ ಸುಧಾರಣೆಗೆ ಕ್ರಮ ವಹಿಸುವಂತೆ ಶಾಸಕ ಎಚ್.ವಿ.ವೆಂಕಟೇಶ್ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಒತ್ತಾಯಿಸಿದರು. ಶಸ್ತ್ರ ಚಿಕಿತ್ಸೆ ವಿಫಲವಾಗಿ ನಿಧನರಾದ ಮಹಿಳೆಯ ಕುಟುಂಬಗಳಿಗೆ ತಲ ₹25 ಲಕ್ಷ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಪಳ್ಳವಳ್ಳಿ ತಾಂಡ ಸಮೀಪ ದಲಿತರು, ಲಂಬಾಣಿ, ಭೋವಿ ಸಮುದಾಯದ 60ಕ್ಕೂ ಹೆಚ್ಚು ಬಡ ಕುಟುಂಬಗಳು ಜಮೀನು ಉಳಿಮೆ ಮಾಡತ್ತಿದ್ದು, ಫಲಾನುಭವಿಯ ಹೆಸರಿಗೆ ಖಾತೆ, ಪಹಣಿಗಳಿವೆ. ಕಂದಾಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ತಹಸೀಲ್ದಾರ್‌ಗೆ ಪ್ರಶ್ನಿಸಿದರೆ ಮರು ಪರಿಶೀಲನೆ ಎಂದು ತಿಳಿಸಿ ಯಾವುದೇ ಕ್ರಮ ಜರುಗಿಸದೇ ಆನೇಕ ವರ್ಷಗಳಿಂದ ಸತಾಯಿಸುತ್ತಿರುವುದಾಗಿ ದೂರಿದರು.
ರೈತನಿಗೆ ಕಂಪ್ಯೂಟರ್ ದಾಖಲೆ ಹಾಗೂ ಪಹಣಿ ಸಿದ್ದಪಡಿಸಿ ಕೊಡುವಂತೆ ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದರು. ಉಳಿಮೆ ಜಮೀನಿನ ಬಡ ರೈತರಿಗೆ ಕಿರುಕುಳ ಹಾಗೂ ಜಮೀನು ಒತ್ತುವರಿಗೆ ಮುಂದಾದರೆ ತಾಲೂಕು ರೈತ ಸಂಘ ಹಸಿರು ಸೇನೆ ವತಿಯಿಂದ ಪಟ್ಟಣದ ಆರಣ್ಯ ಇಲಾಖೆಯ ಬಳಿ ಅನಿರ್ಧಿಷ್ಟಾವಾಧಿ ಮುಷ್ಕರ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.ರೈತ ಮುಖಂಡರಾದ ಕೃಷ್ಣರಾವ್.ಚಿತ್ತಯ್ಯ ಸರ್ಕಾರಿ ಆಸ್ಪತ್ರೆಯ ಸುಧಾರಣೆ ಹಾಗೂ ಜಮೀನು ಉಳಿಮೆಯಲ್ಲಿ ನಿರತರಾದ ಪಳವಳ್ಳಿ ತಾಂಡದ ರೈತರಿಗೆ ಕಂಪ್ಯೂಟರ್ ಫಹಣಿ ಮತ್ತು ಇತರೆ ದಾಖಲೆ ಒದಗಿಸುವಂತೆ ಕಂದಾಯ ಇಲಾಖೆಗೆ ಒತ್ತಾಯಿಸಿದರು .ಸಂಘದ ಮನವಿ ಸ್ವೀಕರಿಸಿದ ತಹಸೀಲ್ದಾರ್ ಕೂಡಲೇ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದರು.
ಹಿರಿಯ ಮುಖಂಡ ಸದಾಶಿವಪ್ಪ, ಕಿರ್ಲಾಲಹಳ್ಳಿಯ ಈರಣ್ಣ, ತಾಲೂಕು ರೈತ ಸಂಘ ಹಸಿರು ಸೇನೆಯ ಪ್ರದಾನ ಕಾರ್ಯದರ್ಶಿ ಗುಂಡ್ಲಹಳ್ಳಿ ರಾಮಾಂಜನೇಯ ಬ್ಯಾಡನೂರು ಶಿವು, ತಿಪ್ಪಯ್ಯನದುರ್ಗ ಮಂಜುನಾಥ್, ಕಾರ್ಯದರ್ಶಿ ನರಸಣ್ಣ, ಸಂಘಟನಾ ಕಾರ್ಯದರ್ಶಿ ಚನ್ನಸಾಗರದಹಟ್ಟಿ ಚಿತ್ತಯ್ಯ, ಮಹಿಳಾ ಅಧ್ಯಕ್ಷೆ ಹನುಮಕ್ಕ ಪ್ರಧಾನ ಕಾರ್ಯದರ್ಶಿ ಶಿವು ರಾಮಾಂಜನೇಯ ಇತರರಿದ್ದರು.