ಮಧ್ಯ ಕರ್ನಾಟಕದ ಹೃದಯ ಭಾಗವಾಗಿರುವ ಕೋಟೆನಾಡು ಚಿತ್ರದುರ್ಗದಲ್ಲಿ ಮಳೆರಾಯನ ಆರ್ಭಟ ಕಡಿಮೆ ಇದೆ. ಆದ್ರೆ ಕಳೆದೊಂದು ವಾರದಿಂದಲೂ ಬಿಟ್ಟು ಬಿಟ್ಟು ಬರ್ತಿರೋ ಜಿಟಿ ಜಿಟಿ ಮಳೆ ಮಾತ್ರ ರೈತರ ನಿದ್ದೆಗೆಡಿಸಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಆ.9): ಮಧ್ಯ ಕರ್ನಾಟಕದ ಹೃದಯ ಭಾಗವಾಗಿರುವ ಕೋಟೆನಾಡು ಚಿತ್ರದುರ್ಗದಲ್ಲಿ ಮಳೆರಾಯನ ಆರ್ಭಟ ತುಂಬಾ ಕಡಿಮೆ ಇದೆ. ಆದ್ರೆ ಕಳೆದೊಂದು ವಾರದಿಂದಲೂ ಬಿಟ್ಟು ಬಿಟ್ಟು ಬರ್ತಿರೋ ಜಿಟಿ ಜಿಟಿ ಮಳೆ ಮಾತ್ರ ರೈತರ ನಿದ್ದೆಗೆಡಿಸಿದೆ. ಜಮೀನಿನಲ್ಲಿ ಹಾಕಿದ್ದ ರಾಗಿ, ಈರುಳ್ಳಿ, ಅಡಿಕೆ ಬೆಳೆಗಳಿಗೆ ಜಿಟಿ ಜಿಟಿ ಮಳೆಯ ನೀರು ನಿಂತು ರೈತರಿಗೆ ಸಂಕಷ್ಟಕ್ಕೆ ತಂದೊಡ್ಡಿದೆ. ಕಳೆದೊಂದು ತಿಂಗಳಿನಿಂದಲೂ ವರಣುನ ಆರ್ಭಟ ರಾಜ್ಯಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅದ್ರಲ್ಲಂತೂ ಉತ್ತರ ಕರ್ನಾಟಕದ ಭಾಗಗಳಲ್ಲಿ ಮಳೆರಾಯನ ಅಬ್ಬರಕ್ಕೆ ಸುಮಾರು ಹಾನಿ ಹಾಗೂ ಅನೇಕ ಜೀವ ಹಾನಿಗಳು ಆಗಿರುವಂತದ್ದು. ಆದ್ರೆ ಕೋಟೆನಾಡು ಚಿತ್ರದುರ್ಗದಲ್ಲಿ ಅಂತಹ ಜೋರು ಮಳೆ ಇಲ್ಲದಿದ್ರು ಕೂಡ ಬಿಟ್ಟು ಬಿಟ್ಟು ಬರ್ತಿರೋ ಜಿಟಿ ಜಿಟಿ ಮಳೆ ಮಾತ್ರ ಇಡೀ ಜಿಲ್ಲೆಯ ರೈತರ ನಿದ್ದೆಗಡೆಸಿದೆ ಎಂದ್ರೆ ತಪ್ಪಾಗಲಿಕ್ಕಿಲ್ಲ. ಯಾಕಂದ್ರೆ ನಿರಂತರ ಜಿಟಿ ಜಿಟಿ ಮಳೆಯಿಂದಾಗಿ ಚಿತ್ರದುರ್ಗ ತಾಲ್ಲೂಕಿನ ಲಿಂಗಾವರಹಟ್ಟಿ, ಕಾಸವರಹಟ್ಟಿ, ಕಲ್ಲಹಳ್ಳಿ ಭಾಗದ ರೈತರು ನಿತ್ಯ ಕಣ್ಣೀರು ಹಾಕ್ತಿದ್ದಾರೆ. ಯಾಕಪ್ಪ ಅಂದ್ರೆ ಈಗ ತಾನೇ ಮುಂಗಾರುವಿನಲ್ಲಿ ಜಮೀನಿಗೆ ಈರುಳ್ಳಿ, ರಾಗಿ ಅಂತಹ ಬೆಳೆ ಹಾಕಿರೋ ರೈತರಿಗೆ ಜಿಟಿ ಜಿಟಿ ಮಳೆ ಸಂಕಷ್ಟ ತಂದಿದೆ. ಜಮೀನಿನಲ್ಲಿಯೇ ನೀರು ನಿಂತಿರೋ ಪರಿಣಾಮ ಬೆಳೆ ಹಾನಿಯಾಗಿದೆ.
ಅಲ್ಪ ಸ್ವಲ್ಪ ಲಾಭ ಕಾಣಬಹುದು ಎಂದು ಅಡಿಕೆ ಗಿಡ ಹಾಕಿರೋ ರೈತರು ಕೂಡ ಇದೇನಪ್ಪ ಹೀಗೆ ಆಗೋಯ್ತು ನಮ್ಮ ಜೀವನ ಎಂದು ಗೋಳಾದುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಬರ್ಲಿಲ್ಲ ಅಂದ್ರೆ ಒಂದು ನೋವು ಅತಿಯಾಗಿ ಬಂದ್ರೆ ಹೀಗಾಗುತ್ತದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಲಕ್ಷ್ಮಿಕಾಂತ್ ನೊಂದ ರೈತ ಲಿಂಗಾವರಹಟ್ಟಿ: ಇನ್ನೂ ಈ ಬಗ್ಗೆ ಕೃಷಿ ಹಾಗೂ ತೋಟಗಾರಿಗೆ ಇಲಾಖೆ ಅಧಿಕಾರಿಗಳನ್ನ ವಿಚಾರಿಸಿದ್ರೆ, ನಮ್ಮ ಜಿಲ್ಲೆಯಲ್ಲಿ ಅಷ್ಟಾಗಿ ಬೆಳೆ ಹಾನಿ ಯಾಗಿಲ್ಲ ಜಿಟಿ ಜಿಟಿ ಮಳೆಗೆ ಅಲ್ಪ ಸ್ವಲ್ಪ ಬೆಳೆಗಳು ಹಾನಿಯಾಗಿವೆ. ಕೂಡಲೇ ಅಧಿಕಾತಿಗಳಿಗೆ ಸೂಚನೆ ನೀಡಲಾಗಿದೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಕೂಡಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತೋಟಗಾರಿಕೆ ಅಧಿಕಾರಿ ತಿಳಿಸಿದರು.
Chikkamagaluru;ಕುದುರೆಮುಖ ವ್ಯಾಪ್ತಿಯಲ್ಲಿ ಭಾರೀ ಮಳೆ ಹಿನ್ನೆಲೆ, ಹೆಬ್ಬಾಳೆ ಸೇತುವೆ ಮುಳುಗಡೆ
ಇನ್ನೂ ಈ ರೀತಿಯ ಆಶ್ವಾಸನೆ ಗಳು ತುಂಬಾ ಕೇಳಿದ್ದೀವಿ. ಯಾಕಂದ್ರೆ ಖುದ್ದು ನಮ್ಮ ಜಮೀನಿನಲ್ಲಿ ಅಡಿಕೆ ಬೆಳೆಗೆ ನೀರು ನಿಂತು ಸಂಕಷ್ಟಕ್ಕೆ ಸಿಲುಕಿದ್ರು ಯಾವೊಬ್ಬ ಅಧಿಕಾರಿಯೂ ಬಂದು ಪರಿಶೀಲನೆ ನಡೆಸಿಲ್ಲ. ಅನ್ನದಾತ ಗೋಳನ್ನು ಯಾರೂ ಕೇಳುವುದಿಲ್ಲ. ಆದ್ದರಿಂದ ಕೂಡಲೇ ಕೃಷಿ ಸಚಿವರೇ ನಮಗಾಗಿರೋ ಕಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಿ ಎಂದು ರೈತ ಆಗ್ರಹಿಸಿದ್ದಾನೆ.
ಹರಿಯುತ್ತಿದ್ದ ನೀರಲ್ಲಿ ಕಾರು ದಾಟಿಸುವ ಹುಚ್ಚಾಟ: ಕೊಚ್ಚಿ ಹೋಗುತ್ತಿದ್ದವರ ರಕ್ಷಣೆ
ಒಟ್ಟಾರೆ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆಯು ರೈತರು ಬೆಳೆದ ಬೆಳೆಗೆ ತುಂಬಾ ನಷ್ಟ ತಂದೊಡ್ಡಿದೆ. ಆದ್ದರಿಂದ ಇದನ್ನು ಮನಗಂಡು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡಲೇ ಬೆಳೆ ಹಾನಿ ಆಗಿರೋ ಜಮೀನುಗಳಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.