Tungabhadra Dam : ತುಂಗ​ಭದ್ರಾ ಎಡ​ದಂಡೆ ಕಾಲುವೆ ಕೆಳ​ಭಾಗಕ್ಕೆ ನೀರು ಹರಿ​ಸಲು ಆಗ್ರಹಿಸಿ ರೈತರ ಪ್ರತಿಭಟನೆ

By Kannadaprabha News  |  First Published Mar 5, 2023, 6:07 AM IST

ತುಂಗ​ಭದ್ರಾ ಎಡ​ದಂಡೆ ಕಾಲುವೆ ಕೆಳ​ಭಾ​ಗದ ರೈತ​ರಿಗೆ ಸಮ​ರ್ಪಕ ನೀರು ಹರಿ​ಸಲು ಆಗ್ರ​ಹಿಸಿ ಪಕ್ಷಾ​ತೀ​ತ​ವಾಗಿ ರಾಜ​ಕೀಯ ಮುಖಂಡ​ರು,​ ರೈ​ತರು ಶನಿ​ವಾರ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿ​ಭ​ಟನೆ ನಡೆ​ಸಿ​ದ​ರು.


ರಾಯ​ಚೂರು (ಮಾ.5) : ತುಂಗ​ಭದ್ರಾ ಎಡ​ದಂಡೆ ಕಾಲುವೆ ಕೆಳ​ಭಾ​ಗದ ರೈತ​ರಿಗೆ ಸಮ​ರ್ಪಕ ನೀರು ಹರಿ​ಸಲು ಆಗ್ರ​ಹಿಸಿ ಪಕ್ಷಾ​ತೀ​ತ​ವಾಗಿ ರಾಜ​ಕೀಯ ಮುಖಂಡ​ರು,​ ರೈ​ತರು ಶನಿ​ವಾರ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿ​ಭ​ಟನೆ ನಡೆ​ಸಿ​ದ​ರು.

ಸಮೀ​ಪದ ಸಾಥ್‌​ಮೈಲ್‌ ಕ್ರಾಸ್‌​ನಲ್ಲಿ ಸೇರಿದ ರೈತ,​ ಮು​ಖಂಡರು ಸುಮಾರು ಐದಾರು ತಾಸು ಹೆದ್ದಾರಿ ಮೇಲೆ ಕುಳಿತು ಘೋಷ​ಣೆ​ಗ​ಳನ್ನು ಕೂಗಿ ಬೇಡಿಕೆ ಈಡೇ​ರಿ​ಸ​ಬೇಕು ಎಂದು ಆಗ್ರ​ಹಿ​ಸಿ​ದರು. ಬೆಳಗ್ಗೆ ಆರಂಭಿ​ಸಿದ ಸಂಚಾರ ತಡೆ ಸಂಜೆವರೆಗೂ ನಡೆಸಿದ್ದ​ರಿಂದ ರಾಯ​ಚೂ​ರು-ಲಿಂಗ​ಸು​ಗೂರು ಮತ್ತು ರಾಯ​ಚೂರು-ಸಿಂಧ​ನೂರು(Raichur-Sindhanuru) ಸೇರಿ​ದಂತೆ ಅಂತರ್‌ ತಾಲೂ​ಕು, ​ಜಿಲ್ಲೆ ಮತ್ತು ರಾಜ್ಯದ ವಾಹ​ನ​ಗಳ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತ​ವ್ಯ​ಸ್ತ​ಗೊಂಡಿತ್ತು. ಸಾರಿಗೆ ಬಸ್‌​ಗಳು ಸೇರಿ​ದಂತೆ ಖಾಸಗಿ ವಾಹ​ನ​ಗಳು, ದ್ವಿಚಕ್ರ ವಾಹ​ನ​ಗಳ ಓಡಾ​ಟ​ವನ್ನು ಸಂಪೂರ್ಣ ಬಂದ್‌ ಮಾಡ​ಲಾ​ಗಿತ್ತು. ದೂರದ ಊರು​ಗ​ಳಿಂದ ರಾಯ​ಚೂರು ನಗ​ರಕ್ಕೆ ಬರು​ತ್ತಿದ್ದ ಜನರು ವಾಹನ ವ್ಯವ​ಸ್ಥೆ​ಯಿ​ಲ್ಲದೇ ಪರ​ದಾ​ಡಿ​ದರು. ಜನಸಾಮಾನ್ಯರು ವಾಹ​ನ​ಗ​ಳನ್ನು ಬಿಟ್ಟು ಕಾಲ್ನ​ಡಿಗೆಯಲ್ಲಿ ರಸ್ತೆ ಮೇಲೆ ಹೋಗು​ತ್ತಿದ್ದ ದೃಶ್ಯ​ಗಳು ಸಾಮಾ​ನ್ಯ​ವಾಗಿ ಕಂಡು​ಬಂದವು.

Latest Videos

undefined

ರಾಯಚೂರು: ನೋವು ಅನುಭವಿಸಿದ ಸಮುದಾಯಕ್ಕೆ ಎಸ್ಸಿ ಮೀಸಲು ಒದಗಿಸಿ: ಕೆ. ಶಿವರಾಂ

ಈ ವೇಳೆ ಮಾತ​ನಾ​ಡಿದ ಶಾಸ​ಕ​ರು,​ ಮು​ಖಂಡರು ತುಂಗಾಭದ್ರ ಅಚ್ಚುಕಟ್ಟು ಪ್ರದೇಶ(Tungabhadra area)ದ ಕೆಳಭಾಗಕ್ಕೆ ನೀರು ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಸಿರವಾರ(Sirwar), ಮಾನ್ವಿ(Manvi), ರಾಯಚೂರು(Raichur) ತಾಲೂಕಿನ ವ್ಯಾಪ್ತಿಯ ತುಂಗಭದ್ರಾ ನಾಲೆ(Tungabhadra Canal)ಯನ್ನೆ ಅವಲಂಬಿತ ರೈತರಿಗೆ ಕಳೆದ ಒಂದು ತಿಂಗಳಿಂದ ನೀರಿಗೆ ತೊಂದರೆಯಾಗಿದೆ. ಭತ್ತ, ಹತ್ತಿ, ಜೋಳ, ಮೆಣಸಿನಕಾಯಿ ಬಿತ್ತನೆ ಮಾಡಿದ್ದಾರೆ. ಕಾಳು ಕಟ್ಟುವ ಹಂತದಲ್ಲಿವೆ. ಈಗ ನೀರಿನ ಅವಶ್ಯಕತೆ ಹೆಚ್ಚು ಇದೆ. ಆದರೆ, ಮೇಲ್ಭಾಗದಲ್ಲಿಯೆ ನೀರನ್ನು ಬಳಕೆ ಮಾಡಿಕೊಂಡು ನಮಗೆ ನೀರು ಇಲ್ಲದಂತೆ ಮಾಡಲಾಗಿದೆ. ಕೆಳ​ಭಾ​ಗದ ಉಪ​ಕಾ​ಲು​ವೆ​ಗ​ಳಿಗೆ ಸಮ​ರ್ಪಕ ನೀರು ಹರಿ​ಸು​ವಂತೆ ಅನೇಕ ಬಾರಿ ಹೋರಾಟ ನಡೆ​ಸಿ​ದರು ಸಹ ನೀರು ಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

ಜಿಲ್ಲಾ​ಡ​ಳಿತ, ನೀರಾ​ವರಿ ಇಲಾ​ಖೆಯ ಅಧಿ​ಕಾ​ರಿ​ಗಳ ನಡುವೆ ಸಮನ್ವಯ ಇಲ್ಲದಂತಾಗಿದೆ. ಕೊನೆಭಾಗಕ್ಕೆ ನೀರು ಹರಿಸುವಲ್ಲಿ ರೈತರು ವಿಫಲರಾಗಿದ್ದಾರೆ. ಜಿಲ್ಲಾಧಿಕಾರಿ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲವೆಂದು ಅಸ​ಮಾಧಾನ ವ್ಯಕ್ತ​ಪ​ಡಿ​ಸಿ​ದರು.

ಹೋರಾ​ಟ​ದಲ್ಲಿ ಸ್ಥಳೀಯ ಶಾಸ​ಕ​ರಾದ ಡಾ.ಶಿ​ವ​ರಾಜ ಪಾಟೀಲ್‌, ಬಸ​ನಗೌಡ ದದ್ದಲ್‌, ರಾಜಾ ವೆಂಕ​ಟಪ್ಪ ನಾಯಕ, ತಿಪ್ಪ​ರಾಜು ಹವ​ಲ್ದಾರ, ಗಂಗಾ​ಧರ ನಾಯಕ, ಚಾಮ​ರಸ ಮಾಲಿ​ಪಾ​ಟೀ​ಲ್‌, ಲಿಂಗ​ರೆಡ್ಡಿ ಪಾಟೀ​ಲ್‌,​ ಪ್ರ​ಭಾ​ಕರ ಪಾಟೀ​ಲ್‌,​ ಬೂ​ದ​ಯ್ಯ​ಸ್ವಾಮಿ ಗಬ್ಬೂ​ರು,​ ಗೋ​ವಿಂದ ನಾಯಕ, ಮಲ್ಲಣ್ಣ ದಿನ್ನಿ,​ ದೇ​ವ​ರಾಜ ನಾಯ​ಕ,​ ಮ​ಲ್ಲಪ್ಪ ಪೂಜಾ​ರಿ,​ ಸಿ​ದ್ದ​ಯ್ಯ​ಸ್ವಾಮಿ ಸೇರಿ​ದಂತೆ ರಾಯ​ಚೂ​ರು,​ ಮಾ​ನ್ವಿ,​ ಸಿ​ರ​ವಾರ ತಾಲೂ​ಕು​ಗಳ ರೈತ​ಬಾಂಧ​ವರು ಭಾಗ​ವ​ಹಿ​ಸಿ​ದ್ದರು.

8ರವರೆಗೆ ಟಿಎ​ಲ್‌​ಬಿಸಿ ಮೇಲೆ ನಿಷೇಧಾಜ್ಞೆ ಜಾರಿ

ರಾಯಚೂರು: ತುಂಗಭದ್ರಾ ಎಡದಂಡೆ ಮುಖ್ಯ ಮೈಲ್‌-47 ರಿಂದ ಮೈಲ್‌-108 ( ವಿತರಣಾ ಕಾಲುವೆ 36 ರಿಂದ 94) ರವರೆಗೆ ಮುಖ್ಯ ಕಾಲುವೆಯ ಎಡದಂಡೆಯಿಂದ 100 ಮೀ. ಅಂತರದ ವ್ಯಾಪ್ತಿಯ ಪ್ರದೇಶದಲ್ಲಿ 1973ರ ದಂಡ ಪ್ರಕ್ರಿಯೆ ಸಂಹಿತೆ ಕಲಂ.144 ರನ್ವಯ ನಿಷೇ​ಧಾಜ್ಞೆ ಜಾರಿ​ ಮಾ​ಡ​ಲಾ​ಗಿದೆ.

ಹೋಳಿ ಹಬ್ಬಕ್ಕೂ ಮೊದಲೇ ರಾಯಚೂರು ಜಿಲ್ಲೆಯಲ್ಲಿ ರಾಜಕೀಯ ರಂಗಿನಾಟ

ಟಿಎ​ಲ್‌​ಬಿಸಿ ಕೆಳ​ಭಾ​ಗಕ್ಕೆ ಸಮ​ಪರ್ಕ ನೀರು ಸರ​ಬ​ರಾಜು ಮಾಡುವ ಅಗ​ತ್ಯ​ವಿ​ರುವ ಹಿನ್ನೆ​ಲೆ​ಯಲ್ಲಿ ಕಾಲುವೆ ಮೇಲೆ ಕಾನೂನು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮಾ.8ರ ಮಧ್ಯರಾತ್ರಿ 12 ಗಂಟೆವರೆಗೆ ತುಂಗಭದ್ರ ಎಡದಂಡೆ ಕಾಲುವೆಯ ಮೈಲ್‌ 47ರಿಂದ ಮೈಲ್‌ 108 (ವಿತರಣಾ ಕಾಲುವೆ 36 ರಿಂದ 94 ರವರೆಗೆ 100 ಮೀ. ಅಂತರದ ವ್ಯಾಪ್ತಿಯ ದಡದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರು ಎರಡು ಜನಕ್ಕಿಂತ ಹೆಚ್ಚಾಗಿ ಒಡಾಡುವುದನ್ನು ನಿಷೇಧಿಸಿದೆ. ಈ ಆದೇಶವು ಮಾ.2ರಂದು ಜಾರಿಗೊಳಿಸಲಾಗಿದೆ. ಈ ಎಲ್ಲಾ ಷರತ್ತಿಗೊಳಪಟ್ಟು ಜಿಲ್ಲಾಧಿಕಾರಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

click me!