ರೈತ​ರು ಸಾಲಮನ್ನಾ ಮನೋ​ಭಾ​ವನೆ ಬಿಡ​ಬೇಕು: ಶಾಸಕ ಇಕ್ಬಾಲ್‌ ಹುಸೇನ್‌

By Kannadaprabha NewsFirst Published Aug 11, 2023, 5:50 PM IST
Highlights

ಕೃಷಿ ಸಹಕಾರ ಸಂಘಗಳು ಹಾಗೂ ಬ್ಯಾಂಕುಗಳಲ್ಲಿ ಮಾಡಿರುವ ಸಾಲವನ್ನು ಸರ್ಕಾರ ಮನ್ನಾ ಮಾಡುತ್ತದೆ ಎಂಬ ಮನೋಭಾವನೆಯನ್ನು ರೈತರು ಬಿಡ​ಬೇಕು. ನಿಗದಿತ ಅವ​ಧಿ​ಯಲ್ಲಿ ಸಾಲ ಮರು ಪಾವ​ತಿ​ಸಿ​ದರೆ ಸಹಕಾರ ಸಂಘಗಳು ಮತ್ತಷ್ಟು ವೃದ್ದಿಯಾಗುತ್ತವೆ ಎಂದು ಶಾಸಕ ಇಕ್ಬಾಲ್‌ ಹುಸೇನ್‌ ಹೇಳಿದರು.

ರಾಮನಗರ (ಆ.11): ಕೃಷಿ ಸಹಕಾರ ಸಂಘಗಳು ಹಾಗೂ ಬ್ಯಾಂಕುಗಳಲ್ಲಿ ಮಾಡಿರುವ ಸಾಲವನ್ನು ಸರ್ಕಾರ ಮನ್ನಾ ಮಾಡುತ್ತದೆ ಎಂಬ ಮನೋಭಾವನೆಯನ್ನು ರೈತರು ಬಿಡ​ಬೇಕು. ನಿಗದಿತ ಅವ​ಧಿ​ಯಲ್ಲಿ ಸಾಲ ಮರು ಪಾವ​ತಿ​ಸಿ​ದರೆ ಸಹಕಾರ ಸಂಘಗಳು ಮತ್ತಷ್ಟು ವೃದ್ದಿಯಾಗುತ್ತವೆ ಎಂದು ಶಾಸಕ ಇಕ್ಬಾಲ್‌ ಹುಸೇನ್‌ ಹೇಳಿದರು. ತಾಲೂಕಿನ ಸುಗ್ಗನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ಗೋದಾಮು ಮತ್ತು ಮೊದಲ ಅಂತಸ್ತು ಹಾಗೂ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಸಹಕಾರ ಸಂಘಗಳು ರೈತರ ಬೆನ್ನೆಲುಬಾಗಿವೆ. ರೈತರಿಗೆ ನೆರವಾಗುವ ಮೂಲಕ ಅವರ ಬದುಕನ್ನು ಹಸನು ಮಾಡುವ ಕೆಲಸ ಮಾಡುತ್ತಿವೆ. 

ಕೃಷಿ ಸೇರಿದಂತೆ ಪೂರಕ ಚಟುವಟಿಕೆಗಳಾದ ಕುರಿ, ಕೋಳಿ, ಹಸು ಸಾಕಾಣಿಕೆ ಮುಂತಾದವುಗಳಿಗೆ ಸಾಲ ಕಲ್ಪಿ​ಸು​ತ್ತಿದೆ. ಪಡೆದ ಸಾಲವನ್ನು ಮರುಪಾವತಿ ಮಾಡಿದರೆ ಸಂಘಗಳು ಉತ್ತಮ ಸ್ಥಿತಿಯಲ್ಲಿ ಬೆಳೆಯುತ್ತವೆ. ಕೆಸಿಸಿ ಸಾಲ 7.5 ಕೋಟಿ ವಿತರಣೆ ಮಾಡಲಾ​ಗಿದ್ದು, ಹೆಚ್ಚಿನ ಸಾಲ ವಿತರಣೆ ಮಾಡಿರುವ ಸುಗ್ಗ​ನ​ಹಳ್ಳಿ ಸಂಘ ದ್ವಿತೀಯ ಸ್ಥಾನದಲ್ಲಿದೆ. ಸಂಘ ಪಡೆದ ಲಾಭದಲ್ಲಿ 35 ಲಕ್ಷ ರುಪಾಯಿ ವೆಚ್ಚ​ದಲ್ಲಿ ಸ್ವಂತ ಕಟ್ಟಡ ಕಟ್ಟಿರುವುದು ಇತರ ಸಂಘಗಳಿಗೆ ಮಾದರಿಯಾಗಿದೆ ಎಂದು ಇಕ್ಬಾಲ್‌ ಹುಸೇನ್‌ ಶ್ಲಾಘಿಸಿದರು. ಬಿಡಿಸಿಸಿ ಬ್ಯಾಂಕ್‌ ಪ್ರಭಾರ ಅಧ್ಯಕ್ಷ ವೈ.ಎಚ್‌.ಮಂಜು ಮಾತನಾಡಿ, ತಾಲೂಕಿನ ಪಿಎಸಿಎಂಎಸ್‌ಗಳಲ್ಲಿ ಸುಸಜ್ಜಿತವಾದ ಸ್ವಂತ ಕಟ್ಟಡವನ್ನು ಹೊಂದಿರುವ ಉತ್ತಮ ಸಂಘಗಳ ಸಾಲಿ​ನಲ್ಲಿ ಸುಗ್ಗನಹಳ್ಳಿ ಸಂಘವೂ ಸೇ​ರಿದೆ. 

ದೇಶದಲ್ಲಿ 2050ಕ್ಕೆ ಆಹಾರ ಧಾನ್ಯಗಳ ಕೊರತೆ ಸಂಭವ: ನಿರ್ಮಲಾನಂದನಾಥ ಸ್ವಾಮೀಜಿ

ಇಲ್ಲೊಂದು ಜನೌ​ಷಧ ಕೇಂದ್ರ ತೆರೆ​ಯಲು ಅವ​ಕಾ​ಶವಿದೆ. ಹಳ್ಳಿಮಾಳ ಸರ್ವೆ ನಂಬರ್‌ ನಲ್ಲಿ ಗೋದಾಮು ನಿರ್ಮಾಣ ಮಾಡಲು ಮೂರು ಎಕರೆ ಜಾಗವನ್ನು ಗುರುತಿ​ಸ​ಲಾ​ಗಿದೆ. ಅದು ಶೀಘ್ರವಾಗಿ ಸಾಕಾರವಾಗಲಿದ್ದು ರೈತರಿಗೆ ಹೆಚ್ಚು ನೆರವಾಗಲಿದೆ ಎಂದರು. ಬಿಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ಪುಂಡಲೀಕ ಎಲ್.ಸಾದುರೆ ಮಾತನಾಡಿ, ಪಿಎಸಿಎಂಎಸ್‌ ಆರ್ಥಿಕವಾಗಿ ಪ್ರಗತಿ ಕಾಣಲು ಕೆಸಿಸಿ ಸಾಲ, ರಸಗೊಬ್ಬರ ವಿತರಣೆ ಜೊತೆಗೆ ಜನೌಷಧ ಕೇಂದ್ರ ಸೇರಿದಂತೆ ಬಹುಸೇವಾ ಕಾರ್ಯಕ್ರಮ ಗಳನ್ನು ಸಂಘದಲ್ಲಿ ಅನುಷ್ಟಾನ ಮಾಡುವ ಅಗತ್ಯವಿದೆ ಎಂದು ತಿಳಿ​ಸಿದರು.

ಸಂಘದ ಅಧ್ಯಕ್ಷ ವೀರಭದ್ರಯ್ಯ(ಗುಂಡ) ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಸಂಘಗಳ ಉಪನಿಬಂಧಕ ಶಶಿಧರ್‌, ರಾಮನಗರ ಶಾಖಾ ವ್ಯವಸ್ಥಾಪಕ ಟಿ.ಸುರೇಶ್‌, ಸಿಇಓ ಪ್ರಕಾಶ್‌, ಸಂಘದ ಉಪಾಧ್ಯಕ್ಷೆ ಶಾಂತಮ್ಮ, ನಿರ್ದೇಶಕರಾದ ಉಮಾಶಂಕರ್‌, ಶಿವಪ್ಪ, ಕೆ.ಚಂದ್ರಯ್ಯ, ಉಮೇಶ್‌, ಗಿರಿಜಮ್ಮ, ಗಂಗಾಧರಚಾರ್‌, ಚೇತನ್‌, ಸುರೇಂದ್ರನಾಥ ಶರ್ಮ, ಮುಖಂಡರಾದ ದೊಡ್ಡವೀರಯ್ಯ, ಸಿ.ರಾಮಯ್ಯ, ಎಸ್‌.ಆರ್‌.ರಾಮಕೃಷ್ಣಯ್ಯ,ಆಂಜನಪ್ಪ, ಬೈರೇಗೌಡ ಮತ್ತಿ​ತ​ರರು ಉಪ​ಸ್ಥಿ​ತ​ರಿ​ದ್ದರು.

ತರಗತಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು: ಸಮವಸ್ತ್ರ ಕಡ್ಡಾಯಗೊಳಿಸಿದ ಕಾಲೇಜು ಆಡಳಿತ ಮಂಡಳಿ!

ಮುಖ್ಯ​ಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್‌ ಅವ​ರೊಂದಿಗೆ ರಾಮ​ನ​ಗ​ರ ಕ್ಷೇತ್ರದಲ್ಲಿ ಪ್ರಾಥಮಿಕ ಹಂತದಿಂದ ಆಗಬೇಕಿರುವ ಹಾಗೂ ಜಿಲ್ಲೆಯ ಅಭಿವೃದ್ದಿ ಕೆಲಸಗಳು , ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆ ಮಾಡಲಾ​ಗಿದೆ.
-ಇಕ್ಬಾಲ್‌ ಹುಸೇನ್‌, ಶಾಸ​ಕರು, ರಾಮ​ನ​ಗರ ಕ್ಷೇತ್ರ

click me!