ಬೆಲೆ ಕುಸಿತ, ರಸ್ತೆಗೆ ಟೊಮೆಟೊ ಸುರುವಿ ಪ್ರತಿಭಟಿಸಿದ ಬೆಳೆಗಾರರು

By Kannadaprabha NewsFirst Published Aug 5, 2022, 1:03 PM IST
Highlights

ಟೊಮೆಟೊ ಬೆಲೆ ದಿಢೀರ್‌ ಕುಸಿತದ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರದ ಹೊಸ ನಿಲ್ದಾಣ ಎದುರು ಗುರುವಾರ ಬೆಳೆಗಾರರು ರಸ್ತೆದೆ ಟೊಮೆಟೊ ಸುರುವಿ ಪ್ರತಿಭಟನೆ ನಡೆಸಿದರು.

ಲಕ್ಷ್ಮೇಶ್ವರ (ಆ.5) : ಟೊಮೆಟೊ ಬೆಲೆ ದಿಢೀರ್‌ ಕುಸಿತದ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರದ ಹೊಸ ನಿಲ್ದಾಣ ಎದುರು ಗುರುವಾರ ಬೆಳೆಗಾರರು ರಸ್ತೆದೆ ಟೊಮೆಟೊ ಸುರುವಿ ಪ್ರತಿಭಟನೆ ನಡೆಸಿದರು. 20ರಿಂದ 30 ಕಿಲೋ ಟೊಮೆಟೊ ತುಂಬಿದ ಪ್ಲಾಸ್ಟಿಕ್‌ ಬಾಕ್ಸ್‌ ಗುರುವಾರ ಕೇವಲ . 20ರಿಂದ 30ಕ್ಕೆ ಮಾರಾಟವಾಗಿದೆ. ಮಂಗಳವಾರದಿಂದ ಬೆಳೆ ಇಳಿಮುಖವಾಗುತ್ತಿದ್ದು, ಇಂದು ಸಹ ಬೆಲೆ ಚೇತರಿಕೆಯಾಗದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಬೆಳೆಗಾರರು ರಸ್ತೆಗೆ ಟೊಮೆಟೊ ಸುರಿದು ಪ್ರತಿಭಟನೆ ನಡೆಸಿದರು. ಕಳೆದ ವಾರ ಒಂದು ಟ್ರೇಗೆ 70ರಿಂದ 90 ರು.ಗೆ ಮಾರಿದ್ದ ರೈತರು, ಜುಲೈ ಮೊದಲ ವಾರದಲ್ಲಿ ಟೊಮೆಟೊ ಕಿಲೋ 50ರಿಂದ 60 ರು.ಗೆ ಮಾರಾಟವಾಗಿತ್ತು.

Kolar: ಟೊಮೆಟೊ ಬೆಲೆ ಕುಸಿತ: ರೈತರ ಗೋಳು ಕೇಳೋರಿಲ್ಲ!

ಈ ವೇಳೆ ಲಕ್ಷ್ಮೇಶ್ವರ(Lakshmeshwar)ತಾಲೂಕು ಪಕ್ಷಾತೀತ ರೈತಪರ ಹೋರಾಟ ವೇದಿಕೆಯ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ(Mahesh Hogesoppin)ಮಾತನಾಡಿ, ರೈತರು ಬೆವರು ಸುರಿಸಿ ಬೆಳೆದ ಬೆಲೆಯು ಹೀಗೆ ದಿಢೀರ್‌ ಕುಸಿತ ಕಂಡರೆ ಏನು ಮಾಡಬೇಕು. ಕೃಷಿ ವೆಚ್ಚ ವಿಪರೀತವಾಗಿ ಏರುತ್ತಿದ್ದು ಕೂಲಿ ಕಾರ್ಮಿಕರಿಗೆ ಪ್ರತಿ 6-8 ತಾಸಿಗೆ . 200 ರಿಂದ 300 ಕೂಲಿ ನೀಡಬೇಕು, ಅಲ್ಲದೆ ಅತಿವೃಷ್ಟಿಯಿಂದ ಬೆಳೆಗಳು ಹಾಳಾಗಿ ಹೋಗಿವೆ. ಇದರಿಂದ ರೈತರು ಮೊದಲೇ ದಿಕ್ಕು ತೋಚದಂತಾಗಿದ್ದಾರೆ. ಟೊಮೆಟೊ ಬಾಕ್ಸ್‌ಗೆ . 20-30 ಗಳಿಗೆ ಮಾರಾಟವಾದರೆ ರೈತರು ಎನು ಮಾಡಬೇಕು ಎಂದು ಪ್ರಶ್ನಿಸಿದ ಅವರು ಸರ್ಕಾರ ಉತ್ತರ ಕರ್ನಾಟಕದ ರೈತರ ಬೇಡಿಕೆಗೆ ಯಾವುದೇ ರೀತಿ ಸ್ಪಂದನೆ ಮಾಡುತ್ತಿಲ್ಲ, ರೈತರು ಬೀದಿಗಿಳಿದು ಹೋರಾಟ ಮಾಡಿದರೆ ಯಾವ ಸರ್ಕಾರವು ಉಳಿಯುವುದಿಲ್ಲ ಎಂದು ಎಚ್ಚರಿಸಿದರು. ತೋಟಗಾರಿಕೆ ಇಲಾಖೆಯು ಕೂಡಲೇ ಬೆಂಬಲ ಬೆಲೆಯಲ್ಲಿ ಟೊಮೆಟೊ ಖರೀದಿ ಕೇಂದ್ರ ಆರಂಭಿಸಬೇಕು. ಸರ್ಕಾರ ಮಧ್ಯಪ್ರವೇಶಿಸಿ ರೈತರ ನೆರವಿಗೆ ಧಾವಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದ ಅವರು ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸದಿರುವ ಹಿನ್ನೆಲೆಯಲ್ಲಿ ಇದೇ 8ರಂದು ಸ್ವಯಂ ಪ್ರೇರಿತ ಲಕ್ಷ್ಮೇಶ್ವರ ಬಂದ್‌ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಹೇಳಿದರು.

ಟೊಮೆಟೋ ದರ ಏರಿದರೂ ರೈತನ ಜೇಬು ಖಾಲಿ

ಈ ವೇಳೆ ಸ್ಥಳಕ್ಕೆ ತಹಸೀಲ್ದಾರ್‌ ಪರಶುರಾಮ ಸತ್ತಿಗೇರಿ ಅವರು ಆಗಮಿಸಿ ರೈತರ ಸಮಸ್ಯೆಗಳನ್ನು ಆಲಿಸಿ, ಈ ಕುರಿತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ, ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. ಈ ಸಂದ​ರ್ಭ​ದಲ್ಲಿ ರಾಜು ಕರಾಟೆ, ಶಿವಾನಂದ ಲಿಂಗಶೆಟ್ಟಿ, ಶೇಖಣ್ಣ ಗೋಡಿ, ಸೋಮನಗೌಡ್ರ ಪಾಟೀಲ, ಸೋಮಣ್ಣ ಬಳಗಾನೂರ, ಬಸಣ್ಣ ಬೆಂಗಳೂರ, ಚೆನಬಸಪ್ಪ ಬೆಳಗಾನೂರ, ಶಿವಣ್ಣ ವಾಲ್ಮೀಕಿ ಇದ್ದರು.

click me!