ರೈತರು ಬೋರವೆಲ್ ಗೆ ಹೆಸ್ಕಾಂ ಇಲಾಖೆಯಿಂದ ಆರ್ ಆರ್ ನಂಬರ್ ಪಡೆದುಕ್ಕೊಂಡಾಗ ಮಾತ್ರ ಉಳಿದ 34,000 ಸಾವಿರ ಹಣವನ್ನ ರೈತರ ಅಕೌಂಟ್ ಗೆ ನೇರವಾಗಿ ಹಾಕಲಾಗುವುದು. ಸದ್ಯ ರೈತರೆ ಮೊದಲ ಖರ್ಚು ಮಾಡಬೇಕು ಬಳಿಕ ಸರಕಾರ ರೈತರಿಗೆ ನೀಡಲಾಗುತ್ತದೆ ಎಂದು ಕಾಂಗ್ರೆಸ್ ಸರಕಾರ ಆದೇಶವನ್ನ ಹೊರಡಿಸಿದೆ.
ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ಜ.10): ಗಂಗಾ ಕಲ್ಯಾಣ ಯೋಜನೆ ಅಂದ್ರೆ ಬಡ ರೈತರಿಗೆ ಎರಡು ಲಕ್ಷ ಅನುದಾನದಲ್ಲಿ ಬೋರವೆಲ್ ಹಾಕಿಸಿ ಕೊಡುವ ಒಂದು ಯೋಜನೆಯಾಗಿದೆ. ಆದರೆ ಇತ್ತೀಚಿಗೆ ಗಂಗಾ ಕಲ್ಯಾಣ ಯೋಜನೆ ಹಳ್ಳ ಹಿಡದಿದೆ ಎಂದರೆ ತಪ್ಪಗಾಲಾರದು. ಸದ್ಯ ಧಾರವಾಡದಲ್ಲಿ ಕಳೆದ ಮೂರು ವರ್ಷದಿಂದ ಗಂಗಾ ಕಲ್ಯಾಣ ಯೋಜನೆ ಸದ್ಯ ಸಮರ್ಪಕವಾಗಿ ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ ಎಂಬುದಕ್ಕೆ ಒಂದು ತಾಜಾ ನಿದರ್ಶನವಾಗಿದೆ. ಸದ್ಯ ಸರಕಾರದ ವಿರುದ್ಧ ಅರ್ಹ ಫಲಾನುಭವಿಗಳು ಹಿಡಿಶಾಪ ಹಾಕುತ್ತಿದ್ದಾರೆ.
ಹೀಗೆ ಅರ್ಧ ಮರ್ಧ ಬೋರವೆಲ್ ಕೊರೆಸಿ ಕೈ ಎತ್ತಿರುವ ಸರಕಾರಗಳು. ಮತ್ತೊಂದಡೆ ಬರಗಾಲದಲ್ಲಿ ರೈತರಿಗೆ ಉಚಿತವಾಗಿ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರತಿವರ್ಷವೂ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಬೋರವೆಲ್ ಕೊರೆಸಿ ಕೊಡಲಾಗುತ್ತಿತ್ತು. ಆದರೆ ಹಿಂದಿನ ಬಿಜೆಪಿ ಸರಕಾರದಲ್ಲಿ ರೈತರಿಗೆ ಸಿಗಬೇಕಾದ ಯೋಜನೆ ರೈತರಿಗೆ ನಿಲುಕುತ್ತಿಲ್ಲ. ಇನ್ನು ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ 2021-22 ಮತ್ತು 2022-23 ರಲ್ಲಿ ನೇ ಸಾಲಿನಲ್ಲಿ ಇಲಾಖೆ 376 ಬೋರವೆಲ್ ಗಳನ್ನ ಕೊರೆಸಬೇಕು ಎಂದು ಗುರಿಯನ್ನ ಹೋಂದಿತ್ತು. ಆದರೆ ಸದ್ಯ ಕೇವಲ 183 ಬೋರವೆಲ್ ಗಳನ್ನ ಕೊರೆಸಿ ಇನ್ನು ಬರೊಬ್ಬರಿ 193 ಬೋರವೆಲ್ ಗಳನ್ನ ಕೊರೆಸುವುದನ್ನ ಬಾಕಿ ಇಟ್ಡುಕೊಂಡಿದೆ.
ಧಾರವಾಡ: ಬ್ಯಾಗ್ ಟಚ್ ಆಗಿದ್ದಕ್ಕೆ ಚಲಿಸುತ್ತಿದ್ದ ಬಸ್‌ನಲ್ಲಿ ವಿದ್ಯಾರ್ಥಿನಿಗೆ ಕಪಾಳ ಮೋಕ್ಷ ಮಾಡಿದ ಕಂಡಕ್ಟರ್!
ಇನ್ನು ಸಮರ್ಪಕವಾಗಿ ರೈತರಿಗೆ ಬೋರವೆಲ್ ಕೊರೆಸುವದರಿಂದ ಹಿಡಿದು ಮೋಟಾರ್ ಆನ್ ಆಗೋವವರೆಗೂ ಬೋರವೆಲ್ ನ ಎರಡು ಲಕ್ಷದ ಹಣವನ್ನ ದೇವರಾಜ ಅರಸು ಇಲಾಖೆ ನೋಡಿಕ್ಕೊಳ್ಳುತ್ತಿತ್ತು. ಆದರೆ ಸದ್ಯ ಹಿಂದಿನ ಬಿಜೆಪಿ ಸರಕಾರದಲ್ಲಿ ಕೊರೆಸಿದ 183 ಬೋರವೆಲ್ ಗಳಿಗೆ ಕೇವಲ ಕೇಸಿಂಗ್ ಪೈಪ್ ಗೆ 1.30,000 ಸಾವಿರ ಹಣ ನೀಡಿ ಕೈ ತೊಳೆದುಕ್ಕೊಂಡಿದೆ ಇನ್ನು ಬೇಕಾದ 70 ಸಾವಿರ ಹಣವನ್ನ ರೈತರು ನೇರವಾಗಿ ಬೋರವೆಲ್ ಗೆ ಬೇಕಾದ ಸಾಮಗ್ರಿಗಳಾದ ಪಂಪು, ಮೋಟಾರು, ವಿದ್ಯುತ್ ಕಲೆಕ್ಷನ್ ಎಲ್ಲವನ್ನ ರೈತರೆ ಮಾಡಿಕ್ಕೊಳ್ಳಬೇಕು. ಬಳಿಕ ಉಳಿದ ಹಣವನ್ನ ಸರಕಾರ ನಂತರ ಕೊಡಲಾಗುವುದು ಎಂದು ಆದೇಶ ವನ್ನ ಕಾಂಗ್ರೆಸ್ ಸರಕಾರ ಕಳೆದ ಸೆಪ್ಡಂಬರ್ ನಲ್ಲಿ ಆದೇಶವನ್ನ ಹೊರಡಿಸಿದೆ.ಇನ್ನು ಎರಡು ಲಕ್ಷದ ಈ ಗಂಗಾ ಕಲ್ಯಾಣ ಯೋಜನೆ ಸದ್ಯ ಕಾಂಗ್ರೆಸ್ ಸರಕಾರ ಬಂದ ಮೆಲೆ ರೈತರಿಗೆ ಯೋಜನೆ ತಲುಪಲು ಮರೀಚಿಕೆಯಾಗಿದೆ.
ಮುಂದಿನ ತಿಂಗಳು ಪವರ್ ಸ್ಟಾರ್ ಪುನೀತ್ ಹೆಸರಲ್ಲಿ ಟೆಲಿ ಇಸಿಜಿ ಹಬ್‌ಗೆ ಚಾಲನೆ
ಇನ್ನು ರೈತರು ಬೋರವೆಲ್ ಗೆ ಹೆಸ್ಕಾಂ ಇಲಾಖೆಯಿಂದ ಆರ್ ಆರ್ ನಂಬರ್ ಪಡೆದುಕ್ಕೊಂಡಾಗ ಮಾತ್ರ ಉಳಿದ 34,000 ಸಾವಿರ ಹಣವನ್ನ ರೈತರ ಅಕೌಂಟ್ ಗೆ ನೇರವಾಗಿ ಹಾಕಲಾಗುವುದು. ಸದ್ಯ ರೈತರೆ ಮೊದಲ ಖರ್ಚು ಮಾಡಬೇಕು ಬಳಿಕ ಸರಕಾರ ರೈತರಿಗೆ ನೀಡಲಾಗುತ್ತದೆ ಎಂದು ಕಾಂಗ್ರೆಸ್ ಸರಕಾರ ಆದೇಶವನ್ನ ಹೊರಡಿಸಿದೆ.
ಒಟ್ಟಿನಲ್ಲಿ ಮೊದ ಮೊದಲು ಸಿಗುತ್ತಿದ್ದ ಗಂಗಾ ಕಲ್ಯಾಣ ಯೋಜನೆ ಇಗ ಕಾಂಗ್ರೆಸ್ ಸರಕಾರ ಬಂದ ಮೆಲೆ ರೈತರಿಗೆ ಯೋಜನೆ ತಲುಪುವುದು ಮರೀಚಿಕೆಯಾಗಿದೆ. ಇನ್ನು ರೈತರೆ ಮೊದಲು ಹಣ ಹಾಕಿಕೊಂಡು ಬೋರವೆಲ್ ಹಾಕಿಸಿ ಎಲ್ಲ ಸಾಮಗ್ರಿಗಳನ್ನ ಖರೀದಿ ಮಾಡಿ ಹೆಸ್ಕಾಂ ಇಲಾಖೆಯಿಂದ ಆರ್ ಆರ್ ನಂಬರ್ ಪಡೆದುಕೊಂಡ ಬಳಿಕ ರೈತರ ಅಕೌಂಟ್‌ಗೆ ಹಣ ಹಾಕಲಾಗುವುದು ಎಂದು ಕಾಂಗ್ರೆಸ್ ಸರಕಾರದ ಆದೇಶಕ್ಕೆ ರೈತರು ಕಿಡಿಕಾರುತ್ತಿದ್ದಾರೆ.
ಇನ್ನು ಈ ಗಂಗಾ ಕಲ್ಯಾಣ ಯೋಜನೆ ರೈತರಿಗೆ ಸಮರ್ಪಕವಾಗಿ ಸಿಗುತ್ತೋ ಇಲ್ಲವೋ ಎಂಬುದನ್ನ ಕಾಯ್ದು ನೋಡಬೇಕಿದೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಕೂಡ ನಾನು ಸಂಭಂದಪಟ್ಟ ಇಲಾಖೆಯ ಸಚಿವರ ಜತೆ ಮಾತನಾಡಿ ಸರಿ ಮಾಡುತ್ತೆನೆ ಎಂದು ಭರವಸೆ ಕೊಟ್ಟಿದ್ದಾರೆ.