ಟೊಮೆಟೋ ಆಯ್ತು, ಈಗ ದಾಳಿಂಬೆ ಕಾವಲಿಗೆ ಬಂದೂಕು ಹಿಡಿದ ರೈತರು

By Kannadaprabha News  |  First Published Aug 20, 2023, 7:49 PM IST

ಬೆಳಗ್ಗಿನಿಂದ ಸಂಜೆಯವರೆಗೆ ತೋಟದಲ್ಲಿ ಕೆಲಸ ಮಾಡಿ. ಹೊಟ್ಟೆತುಂಬ ತಿಂದು ಸೊಂಪಾಗಿ ಮನೆಯಲ್ಲಿ ನಿದ್ದೆ ಮಾಡಬೇಕಿದ್ದ ರೈತರು, ರಾತ್ರಿ ಹೊತ್ತಲ್ಲಿ ಕೈಯಲ್ಲಿ ಬಂದೂಕು, ಲಾಂಗ್‌, ಮಚ್ಚು, ಕಾರದ ಪುಡಿಗಳನ್ನು ಹಿಡಿದು ದಾಳಿಂಬೆ ತೋಟ ಕಾಯುವ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. 


ಚಿಕ್ಕಬಳ್ಳಾಪುರ (ಆ.20): ಬೆಳಗ್ಗಿನಿಂದ ಸಂಜೆಯವರೆಗೆ ತೋಟದಲ್ಲಿ ಕೆಲಸ ಮಾಡಿ. ಹೊಟ್ಟೆತುಂಬ ತಿಂದು ಸೊಂಪಾಗಿ ಮನೆಯಲ್ಲಿ ನಿದ್ದೆ ಮಾಡಬೇಕಿದ್ದ ರೈತರು, ರಾತ್ರಿ ಹೊತ್ತಲ್ಲಿ ಕೈಯಲ್ಲಿ ಬಂದೂಕು, ಲಾಂಗ್‌, ಮಚ್ಚು, ಕಾರದ ಪುಡಿಗಳನ್ನು ಹಿಡಿದು ದಾಳಿಂಬೆ ತೋಟ ಕಾಯುವ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ದಾಳಿಂಬೆಗೆ ಚಿನ್ನದ ಬೆಲೆ ಬಂದಿದೆ, ಗುಣಮಟ್ಟದ ಕೆ.ಜಿ ದಾಳಿಂಬೆ 150 ರುಪಾಯಿ ಬೆಲೆಗೆ ಮಾರಾಟವಾಗುತ್ತದೆ. ಇದರಿಂದ ಕಳ್ಳರ ಕಣ್ಣು ದಾಳಿಂಬೆ ತೋಟಗಳ ಮೇಲೆ ಬಿದ್ದಿದೆ. ಇದರಿಂದ ಬೇಸತ್ತ ರೈತರು ಸ್ವತಃ ತಾವೇ ತೋಟದ ಕಾವಲಿಗೆ ನಿಂತಿದ್ದಾರೆ.

ಟೊಮೆಟೋ ಬಳಿಕ ಈಗ ದಾಳಿಂಬೆ ಸರದಿ: ಟೊಮೆಟೋಗೆ ಚಿನ್ನದ ಬೆಲೆ ಇದ್ದಾಗ ಕಳ್ಳರಿಂದ ಟೊಮೆಟೋ ಕಾಪಾಡಿಕೊಳ್ಳಲು ಬೆಳೆಗಾರರು ಟೊಮೆಟೋ ಬೆಳೆ ಕಾವಲು ಕಾಯುತ್ತಿದ್ದರು. ಈಗ ದಾಳಿಂಬೆ ತೋಟ ಕಾಯುವ ಸ್ಥಿತಿ ಉಂಟಾಗಿದೆ. ರಾತ್ರೊರಾತ್ರಿ ದಾಳಿಂಬೆ ತೋಟಗಳಿಗೆ ನುಗ್ಗುತ್ತಿರುವ ಕಳ್ಳರು ದಾಳಿಂಬೆ ಹಣ್ಣುಗಳ ಕದ್ದು ರೈತರ ಕಣ್ಣಲ್ಲಿ ನೀರು ಹಾಕಿಸುತ್ತಿದ್ದಾರೆ. ಇದರಿಂದ ಸಹನೆ ಕಳೆದುಕೊಂಡ ರೈತರು ರಾತ್ರಿಯಾದ್ರೆ ಸಾಕು ಕೈಯಲ್ಲಿ ಬಂದೂಕು, ದೊಣ್ಣೆ, ಮಚ್ಚು, ಕಾರದ ಪುಡಿಯನ್ನು ಹಿಡಿದು ತೋಟಗಳ ಕಾವಲು ಕಾಯುತ್ತಿದ್ದಾರೆ.

Tap to resize

Latest Videos

ಬದುಕಿರುವವರೆಗೆ ಬಿಜೆಪಿಯಲ್ಲಿರುವೆ ಕಾಂಗ್ರೆಸ್‌ಗೆ ಸೇರಲ್ಲ: ಶಾಸಕ ಶರಣು ಸಲಗರ ಸ್ಪಷ್ಟನೆ

ಚಿಕ್ಕಬಳ್ಳಾಪುರ ತಾಲೂಕಿನ ನಾಯನಹಳ್ಳಿ, ಅಂದಾರ್ಲಹಳ್ಳಿ, ನಂದಿ, ಚದಲಪುರದ ಬಳಿ ಇರುವ ತೋಟಗಳಲ್ಲಿ. ಹಗಲು ರಾತ್ರಿ ಕಷ್ಟಪಟ್ಟು ಬೆಳೆದ ದಾಳಿಂಬೆಗೆ ಚಿನ್ನದ ಬೆಲೆ ಬಂದಿರುವುದರಿಂದ ಗುಣಮಟ್ಟದ ಕೆ.ಜಿ ದಾಳಿಂಬೆಗೆ 150 ರೂಪಾಯಿ ಬೆಲೆಗೆ ಹೋಲ್‌ ಸೇಲ್‌ನಲ್ಲಿ ಮಾರಾಟವಾಗುತ್ತಿದೆ. ಪ್ರತಿದಿನ ಒಂದಿಲ್ಲೊಂದು ಕಡೆ ತೋಟಗಳಿಗೆ ನುಗ್ಗುತ್ತಿರುವ ಕಳ್ಳರು ಗಿಡದಲ್ಲಿದ್ದ ದಾಳಿಂಬೆಯನ್ನು ಕಳ್ಳತನ ಮಾಡ್ತಿದ್ದಾರೆ.

ಟನ್‌ಗಳಷ್ಟು ದಾಳಿಂಬೆ ಕಳವು: ನಾಯನಹಳ್ಳಿ ಗ್ರಾಮದ ವಿದ್ಯಾವಂತ ರೈತ ಚಂದನ್‌, ತನ್ನ ಎರಡು ಎಕರೆ ಜಮೀನಿನಲ್ಲಿ 5 ಲಕ್ಷ ರೂಪಾಯಿ ಬಂಡವಾಳ ಹಾಕಿ ದಾಳಿಂಬೆ ಬೆಳೆದಿದ್ದಾನೆ. ಮೊನ್ನೆ ಇವರ ತೋಟಕ್ಕೆ ನುಗ್ಗಿರುವ ಕಳ್ಳರು ಒಂದು ಟನ್‌ ನಷ್ಟು ಹಣ್ಣು ಕಟಾವು ಮಾಡಿದ್ದಾರೆ, ಮತ್ತೊಂದೆಡೆ ಚಂದನ್‌ ತೋಟದ ಬಳಿ ಇರುವ ದೇವರಾಜ್‌ ತೋಟಕ್ಕೂ ನುಗ್ಗಿರುವ ಖದೀಮರು ಅವರ ತೋಟದಲ್ಲಿಯೂ ಒಂದು ಟನ್‌ ನಷ್ಟುದಾಳಿಂಬೆ ಕಳ್ಳತನ ಮಾಡಿದ್ದಾರೆ. ಇದಕ್ಕೂ ಮುನ್ನ ನಂದಿ ಗ್ರಾಮದ ಬಳಿ ತೋಟದಲ್ಲಿಯೂ ಕಳ್ಳತನ ಮಾಡಿದ್ದರು.

ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರಿಗೆ ನಾಯಕರಾಗುವ ಯೋಗ್ಯತೆ ಇಲ್ಲವಾ?: ಭಗವಂತ ಖೂಬಾ

ರಕ್ಷಣಾ ವ್ಯವಸ್ಥೆ ಇದ್ದರೂ ಕಳ್ಳತನ: ಕಳೆದ ಒಂದು ವಾರದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ನಾಯನಹಳ್ಳಿ, ಅಂದರ್ಲಹಳ್ಳಿ ಹಾಗೂ ಚದಲಪುರ ನಂದಿಕ್ರಾಸ್‌ ಗಳ ಬಳಿ ಕೆಲವು ತೋಟಗಳಲ್ಲಿ ದಾಳಿಂಬೆ ಕಳ್ಳತನ ಮಾಡಿದ್ದಾರೆ. ಸಾಕಷ್ಟುರೈತರು ದಾಳಿಂಬೆ ತೋಟಗಳಿಗೆ ಸೋಲಾರ್‌ ವಿದ್ಯುತ್‌ ಬೇಲಿ ಹಾಕಿ, ಸಿಸಿ ಟಿವಿ ಕ್ಯಾಮರಾಗಳನ್ನು ಹಾಕಿದ್ದರೂ ಕಳ್ಳರು ತಮ್ಮ ಕೈ ಚಳಕ ತೋರಿಸುತ್ತಿದ್ದಾರೆ. ಈ ಕುರಿತು ಪೋಲಿಸ್‌ ದೂರು ನೀಡಿದರೂ ಕಳ್ಳರ ಪತ್ತೆಯಾಗಿಲ್ಲಾ. ಅಕಸ್ಮಾತ್‌ ಕಳ್ಳರು ಪತ್ತೆಯಾದರೂ ರೈತರಿಗೆ ಹಣ ಸಿಗುವ ಗ್ಯಾರಂಟಿ ಇಲ್ಲಾ. ಕಳ್ಳನಿಗೆ ಹೆಚ್ಚೆಂದರೆ ಆರುತಿಂಗಳ ಶಿಕ್ಷೆ ಕೋರ್ಚ್‌ ನೀಡಬಹುದು. ಅದಕ್ಕೆ ರೈತರೆ ಎಲ್ಲದಕ್ಕೂ ಸನ್ನದ್ದರಾಗಿ ಕಾವಲು ಕಾಯುತ್ತಿದ್ದಾರೆ.

click me!