ಕೃಷಿ ಚಟುವಟಿಕೆ ಮೇಲೆ ಕೊರೋನಾ ಕರಿನೆರಳು

By Kannadaprabha News  |  First Published May 12, 2021, 3:40 PM IST
  • ಅನ್ನದಾತರ ಕೈ ಹಿಡಿದಿದ್ದ ಕೃಷಿ ಚಟುವಟಿಕಗಳಿಗೆ ಈ ಬಾರಿ ಕೊರೋನಾ ಕಾರ್ಮೋಡ
  • ಆತಂಕದಲ್ಲಿ ಜೀವನ ಸಾಗಿಸುತ್ತಿರುವ ಅನ್ನದಾತರು
  • ಕೊರೋನಾ ಎರಡನೇ ಅಲೆಯ ಆರ್ಭಟ ಕೃಷಿ ಮೇಲೆ ದುಷ್ಪರಿಣಾಮ

ಚಿಕ್ಕಬಳ್ಳಾಪುರ (ಮೇ.12) : ರಾಜ್ಯದಲ್ಲಿ ಕಳದೆ ಬಾರಿ 13 ವರ್ಷಗಳ ಬಳಿಕ ದಾಖಲೆಯ ಬಿತ್ತನೆ ಕಾರ್ಯ ನಡೆದು ಅನ್ನದಾತರ ಕೈ ಹಿಡಿದಿದ್ದ ಕೃಷಿ ಚಟುವಟಿಕಗಳಿಗೆ ಈ ಬಾರಿ ಕೊರೋನಾ ಮಂಕು ಕವಿಯುವ ಸಾಧ್ಯತೆ ಇದ್ದು ರೈತರು ಆತಂಕದಲ್ಲಿದ್ದಾರೆ.

ಮುಂಗಾರು ಆರಂಭಕ್ಕೆ ಕೇವಲ ತಿಂಗಳ ಮಾತ್ರ ಬಾಕಿ ಇದ್ದು ಕೊರೋನಾ ಎರಡನೇ ಅಲೆಯ ಆರ್ಭಟ ಹೀಗೆ ಮುಂದುವರಿದರೆ ಕೃಷಿ ಚಟುವಟಿಕೆಗಳ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಲಿದೆಯೆಂಬ ಆತಂಕ ಅನ್ನದಾತರಲ್ಲಿ ಕೇಳಿ ಬರುತ್ತಿರುವುದು ಈ ವರ್ಷ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಆಗುತ್ತಾ ಎಂಬ ಚರ್ಚೆ ನಡೆಯುತ್ತಿದೆ.

Tap to resize

Latest Videos

ಚಿಕ್ಕಬಳ್ಳಾಪುರ : ರೈತರಿಂದ ಲಕ್ಷಾಂತರ ಕ್ವಿಂಟಲ್‌ ರಾಗಿ ಖರೀದಿ .

ಈಗಾಗಲೇ ಕೊರೋನಾ ಸಂಕಷ್ಟದಿಂದ ಸರ್ಕಾರ ಘೋಷಿಸಿರುವ ಲಾಕ್‌ಡೌನ್‌ಗಳಿಂದ ಬೆಳೆದ ಹೂವು, ಹಣ್ಣು, ತರಕಾರಿ ಮತ್ತಿತರ ವಾಣಿಜ್ಯ ಬೆಳೆಗಳಿಗೆ ಮಾರುಕಟ್ಟೆ ಇಲ್ಲದೇ ಬೆಲೆ ಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟದ ಸಿಲುಕಿ ದುಸ್ಥಿತಿಗೆ ಇಳಿದಿ ರುವ ರೈತರಿಗೆ ಕೊರೋನಾ ಕಾಟ ಹೀಗೆ ಮುಂದುವರಿದರೆ ಮುಂಗಾರು ಹಂಗಾ ಮಿನಲ್ಲಿ ಬಿತ್ತನೆ ಕಾರ್ಯಕ್ಕೆ ಬೇಕಾದ ರಸ ಗೊಬ್ಬರ, ಬಿತ್ತನೆ ಬೀಜ ಖರೀದಿ ಕಷ್ಟವಾಗುತ್ತದೆ. 

ನೆಲಕ್ಕೆ ಬಿದ್ದ ಕೆಜಿಗಟ್ಟಲೇ ತೂಕದ ಆಲಿಕಲ್ಲು!

ಜೊತೆಗೆ ಲಾಕ್‌ಡೌನ್ ಮುಂದುವರಿದರೆ ರೈತರಿಗೆ ಸಿಗಬೇಕಾದ ರಸ ಗೊಬ್ಬರ ಹಾಗೂ ಬಿತ್ತನೆ ಬೀಜವನ್ನು ಸರ್ಕಾರಕ್ಕೆ ಪೂರೈಸುವ ದೊಡ್ಡ ಸವಾಲಿನ ಕೆಲಸ ಆಗಲಿದೆಯೆಂದು ರೈತ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಸಾಮಾನ್ಯವಾಗಿ ಕೊರೋನಾ ಲಾಕ್‌ಡೌನ್ ಮತ್ತಿತರ ಕಾರಣಗಳಿಗೆ ಗ್ರಾಮೀಣ ಭಾಗದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬಂದಿದ್ದು ನಿರೀಕ್ಷೆಗೂ ಮೀರಿ ಕೃಷಿ ಚಟುವಟಿಕೆಗಳು ಹೆಚ್ಚಾಗಬೇಕು. 

ಆದರೆ ಕೊರೋನಾ ದಿನೇ ದಿನೇ ಸೃಷ್ಟಿಸುತ್ತಿರುವ ಆತಂಕ, ತಲ್ಲಣಗಳ ಜೊತೆಗೆ ಈ ಬಾರಿ ಸರ್ಕಾರಗಳು ರೈತ ರಿಗೆ ಅಗತ್ಯ ರಸಗೊಬ್ಬರ ಬೆಲೆಯನ್ನು ಆರೇಳು ಪಟ್ಟು ಹೆಚ್ಚಿಸಿದ್ದು ಕೊರೋನಾ ನಿಯಂತ್ರಣದಲ್ಲಿ ಮುಳಗಿರುವ ಕೃಷಿ ಇಲಾಖೆ ಮುಂಗಾರು ಹಂಗಾಮಿಗೆ ಯಾವ ರೀತಿಯ ಸಿದ್ಧತೆ ಕೈಗೊಳ್ಳುತ್ತದೆ. ರೈತರಿಗೆ ಸಕಾಲದಲ್ಲಿ ಅಗತ್ಯವಾದ ರಸಗೊಬ್ಬರ, ಬಿತ್ತನೆ ಬೀಜ ಪೂರೈಸುತ್ತಾ ಎಂಬುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ

click me!