ಈರುಳ್ಳಿ ಬೆಲೆ ಕೆ.ಜಿಗೆ ಕೇವಲ 3 ರು.ಗೆ ಕುಸಿತ: ಕಂಗಾಲಾದ ರೈತರು

By Girish Goudar  |  First Published May 24, 2022, 5:23 AM IST

*   ಬೆಂಗಳೂರಲ್ಲಿ 50 ಕೆಜಿಗೆ 500 ರು.
*  ಇತರೆಡೆ 3 ರು.ಗೆ ವ್ಯಾಪರಿಗಳ ಖರೀದಿ
*  ಬೆಳೆ ಖರ್ಚೂ ಸಿಗದೆ ರೈತ ಕಂಗಾಲು
 


ಚಿತ್ರದುರ್ಗ(ಮೇ.24): ಮಳೆ, ರಫ್ತು ನಿಷೇಧ ಮತ್ತಿತರ ಕಾರಣಗಳಿಗೆ ಬೆಂಗಳೂರು ಮಾರುಕಟ್ಟೆಯಲ್ಲಿ ಈರುಳ್ಳಿ ದರ ಪಾತಾಳಕ್ಕೆ ಕುಸಿದಿದ್ದು ಚಿತ್ರದುರ್ಗದ ಈರುಳ್ಳಿ ಬೆಳೆಗಾರ ಮತ್ತೆ ಸಂಕಷ್ಟಕ್ಕೆ ನೂಕಲ್ಪಟ್ಟಿದ್ದಾನೆ. ಕಳೆದ ಎರಡು ತಿಂಗಳಿನಿಂದ ಕುಸಿತ ಕಂಡ ಈರುಳ್ಳಿ ದರ ಮತ್ತೆ ಚೇತರಿಸಿಲ್ಲ. ಬೆಂಗಳೂರಿನಲ್ಲಿ ವಿವಿಧ ದರ್ಜೆಯ ಈರುಳ್ಳಿ .5ರಿಂದ .12ರವರೆಗೆ ಮಾರಾಟವಾಗುತ್ತಿದ್ದು, ಚಿತ್ರದುರ್ಗದಲ್ಲಿ ಸ್ಥಳೀಯ ವ್ಯಾಪಾರಿಗಳಿಗೆ ಮಾರಿದರೆ ಕೆ.ಜಿ.ಗೆ ಮೂರೂವರೆ ರುಪಾಯಿಯಷ್ಟೇ ಸಿಗುತ್ತಿದೆ.

ಬೆಂಗಳೂರು ಮಾರುಕಟ್ಟೆಯಲ್ಲಿ ಉತ್ತಮ ಗುಟಮಟ್ಟದ ಈರುಳ್ಳಿ ಸೋಮವಾರದ ಮಾರುಕಟ್ಟೆಯಲ್ಲಿ 50 ಕೆ.ಜಿ. ಚೀಲ .500ರಿಂದ .600ರವರೆಗೆ ಮಾರಾಟವಾಗಿದೆ. ಎರಡನೇ ದರ್ಜೆಯ ಈರುಳ್ಳಿ ಚೀಲಕ್ಕೆ .250ರಿಂದ .300ರಂತೆ ಬಿಕರಿಯಾಗಿದೆ. ಒಂದು ಚೀಲ ಈರುಳ್ಳಿ ಬೆಳೆಯಲು ಸರಿಸುಮಾರು .600 ಖರ್ಚಾಗುತ್ತದೆ. ಹೀಗಿರುವಾಗ ಸದ್ಯ ಬೆಂಗಳೂರು ಮಾರುಕಟ್ಟೆಗೆ ಈರುಳ್ಳಿ ಒಯ್ದರೆ ಲಾರಿ ಬಾಡಿಗೆ ಕೂಡಾ ಸಿಗುವುದಿಲ್ಲವೆಂಬುದು ರೈತರ ಅಳಲಾಗಿದೆ.

Latest Videos

undefined

ಅಕಾ​ಲಿಕ ಮಳೆ ಆಪ​ತ್ತು: ಈರುಳ್ಳಿ ಬೆಲೆಗೆ ವಿಪ​ತ್ತು, ಕಂಗಾಲಾದ ರೈತ..!

ಸ್ಥಳೀಯವಾಗಿ ಕೇಳುವವರಿಲ್ಲ: 

ಚಿತ್ರದುರ್ಗದಿಂದ ಬೆಂಗಳೂರಿಗೆ ಸಾಗಾಣಿಕೆ ವೆಚ್ಚ ದುಬಾರಿಯಾಗಿರುವುದರಿಂದ ಸಿಕ್ಕಷ್ಟೇ ಸಿಗಲಿ ಎಂಬ ಕಾರಣಕ್ಕೆ ರೈತರು ಸ್ಥಳೀಯವಾಗಿಯೇ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಶಿವಮೊಗ್ಗ, ದಾವಣಗೆರೆ ಭಾಗದ ಈರುಳ್ಳಿ ಖರೀದಿದಾರರು ರೈತರ ಜಮೀನಿಗೆ ಆಗಮಿಸಿ 250 ರುಪಾಯಿಗೆ ಪ್ಯಾಕೆಟ್‌ ಕೊಂಡುಕೊಳ್ಳುತ್ತಿದ್ದಾರೆ. ಒಂದು ಪ್ಯಾಕೆಟ್‌ ಈರುಳ್ಳಿ ಎಪ್ಪತ್ತು ಕೆಜಿ ತೂಗಲಿದ್ದು ಸರಾಸರಿ ಮೂರುವರೆ ರುಪಾಯಿಗೆ ಒಂದು ಕೆ.ಜಿ.ಯಂತೆ ಬಿಕರಿಯಾಗುತ್ತಿದೆ.
 

click me!