4 ಎಕರೆ ದಾಳಿಂಬೆ ತೋಟ ನಾಶ ಮಾಡಿದ ರೈತ

By Kannadaprabha NewsFirst Published Jul 20, 2021, 7:13 AM IST
Highlights
  • ಜಾಗತಿಕ ಮಹಾಮಾರಿಗಳ ನಡುವೆ ರೈತನ ಸ್ಥಿತಿ ದುಃಸ್ಥಿತಿಯಾಗಿದೆ
  • ಹವಾಮಾನ ವೈಪರೀತ್ಯದಿಂದ ಅನ್ನದಾತನ ಸ್ಥಿತಿ ಚಿಂತಾಜನಕ
  • ಬೆಳೆದ ಬೆಳೆಗೆ ರೋಗ ಬಾಧೆಯಿಂದ ರೈತನ ಸಂಕಷ್ಟ

ಅಥಣಿ(ಜು.20):  ಜಾಗತಿಕ ಮಹಾಮಾರಿಗಳ ನಡುವೆ ರೈತನ ಸ್ಥಿತಿ ದುಃಸ್ಥಿತಿಯಾಗಿದೆ. ಇದರ ನಡುವೆ ಹವಾಮಾನ ವೈಪರೀತ್ಯದಿಂದ ಅನ್ನದಾತನ ಸ್ಥಿತಿ ಚಿಂತಾಜನಕವಾಗಿದೆ. ಬೆಳೆದ ಬೆಳೆಗೆ ರೋಗ ಬಾಧೆಯಿಂದ ರೈತನ ಸಂಕಷ್ಟದೇವರಿಗೆ ಪ್ರೀತಿ ಎಂಬಂತೆ ಅಥಣಿ ತಾಲೂಕಿನ ಆಜೂರ ಗ್ರಾಮದ ರೈತ ಎರಡು ಎಕರೆ ದಾಳಿಂಬೆ ತೋಟವನ್ನು ನಾಶಪಡಿಸಿದ ಘಟನೆ ನಡೆದಿದೆ.

ಅಥಣಿ ತಾಲೂಕಿನ ಆಜೂರ ಗ್ರಾಮದ ಯುವರೈತ ನವನಾಥ ಮಾನೆ ಎಂಬುವರು 6 ವರ್ಷಗಳ ಹಿಂದೆ ನಾಟಿ ಮಾಡಿದ್ದ ದಾಳಿಂಬೆ ಬೆಳೆಯುವುದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹವಾಮಾನ ವೈಪರಿತ್ಯದಿಂದ ಚುಚ್ಚಿ ರೋಗಕ್ಕೆ ತುತ್ತಾಗಿರುವ ದಾಳಿಂಬೆ ಬೆಳೆಯನ್ನು ಯುವ ರೈತ ಕೊಡಲಿಯಿಂದ ಕಡಿದು ನಾಶಪಡಿಸುತ್ತಿದ್ದಾರೆ. ಇದಕ್ಕೆ ಹವಾಮಾನ ವೈಪರೀತ್ಯ ಪ್ರಮುಖ ಕಾರಣವಾಗಿದೆ. ಹತೋಟಿಗೆ ಬಾರದ ರೋಗಕ್ಕೆ ತುತ್ತಾಗುವ ದಾಳಿಂಬೆ ಬೆಳೆ ಚುಕ್ಕಿ ರೋಗ, ಕ್ಯಾರ ರೋಗ, ಬೆಂಕಿರೋಗ ಗಳಂತಹ ರೋಗಬಾಧೆಯಿಂದ ನಷ್ಟಸಂಭವಿಸಿದೆ. ಇದರಿಂದ ರೈತ ಬೆಳೆ ನಾಶಕ್ಕೆ ಮುಂದಾಗಿದ್ದಾರೆ.

ಟೊಮೆಟೋ ಬೆಳೆಗೆ ಚುಕ್ಕಿ ರೋಗ ಕಾಟ : ರೈತರಲ್ಲಿ ಆತಂಕ

ಎರಡು ಎಕರೆ ದಾಳಿಂಬೆ ಬೆಳೆಯಲು ಕನಿಷ್ಠ ಮೂರರಿಂದ .4 ಲಕ್ಷ ಸಾಲ ಮಾಡಿದ ಯುವ ರೈತ ನವನಾಥ ಸತತ ಆರು ವರ್ಷಗಳಿಂದ ಗಿಡಗಳನ್ನು ಪೋಷಿಸಿ ಆಲಿಸಿ ಪ್ರತಿವರ್ಷವೂ ನಷ್ಟಸಂಭವಿಸಿದ ಬೆನ್ನಲ್ಲೇ ಈ ನಿರ್ಧಾರ ಮಾಡಿ ತೋಟವನ್ನು ನಾಶ ಮಾಡುತ್ತಿದ್ದಾರೆ. ಅಷ್ಟೋ ಇಷ್ಟುಬೆಳೆದ ಫಸಲಿಗೆ ಸೂಕ್ತ ಬೆಲೆ ಇಲ್ಲದೆ ರೈತರನ್ನು ಸಂಕಷ್ಟಕ್ಕೀಡಾಗಿಸಿದೆ ತೋಟಗಾರಿಕೆ ಬೆಳೆ. ಆಜೂರ ಗ್ರಾಮದ ರೈತನಿಗೆ ದಾಳಿಂಬೆ ಫಸಲು ಕೈಗೆ ಬಂದಿರುವ ಸಂದರ್ಭದಲ್ಲಿ ಸೂಕ್ತ ಬೆಲೆ ಇಲ್ಲದೆ ಹಾಗೂ ರೋಗ ಬಾಧೆಯಿಂದ ಕಂಗಾಲಾಗಿ ರೈತ ವಿಧಿಯಿಲ್ಲದೆ ತೋಟವನ್ನು ನಾಶಪಡಿಸಿದ್ದಾರೆ.

ಒಟ್ಟಾರೆಯಾಗಿ ಅಥಣಿ ತಾಲೂಕಿನಲ್ಲಿ ಒಣಬೇಸಾಯ ಹೆಚ್ಚಾಗಿರುವುದರಿಂದ ಈ ಭಾಗದ ರೈತರು ದಾಳಿಂಬೆ ಬೆಳೆಗೆ ಆಕರ್ಷಕವಾಗಿ ಬೆಳೆದ ಈ ಬೆಳೆಯಿಂದ ನಷ್ಟಸಂಭವಿಸಿ ಮೈತುಂಬ ಸಾಲ ಮಾಡಿಕೊಂಡಿರುವವರು ಹೆಚ್ಚಾಗಿದ್ದಾರೆ. ಯುವರೈತ ನವನಾಥ ಹಾಗೂ ತಾಲೂಕಿನಲ್ಲಿ ದಾಳಿಂಬೆ ಬೆಳೆದ ರೈತರು ಸರ್ಕಾರದಿಂದ ಪರಿಹಾರದ ಪ್ಯಾಕೇಜ್‌ ನೀಡುವಂತೆ ಆಗ್ರಹಿಸಿದ್ದಾರೆ.

click me!