ದೇಶಕ್ಕೆ ಅನ್ನ ನೀಡುವ ರೈತರೆಲ್ಲರೂ ಒಂದೇ, ಅನ್ನದಾತರಲ್ಲಿ ರಾಜಕೀಯ ಬೇಡ, ಬೆಳೆ ನಷ್ಟವಾಯಿತೆಂದು ಯಾವ ಅನ್ನದಾತನೂ ಆತ್ಮಹತ್ಯೆಯ ಹಾದಿ ಹಿಡಿದು ಮಕ್ಕಳನ್ನು ಅನಾಥರನ್ನಾಗಿಸ ಬೇಡಿ, ಎನೇ ಸಮಸ್ಯೆ ಇದ್ದರೂ ಪರಸ್ಪರ ಚರ್ಚೆ ಮಾಡಿ ಬಗೆಹರಿಸಿಕೊಳ್ಳೋಣ ಎಂದು ಶಾಸಕ ಪ್ರದೀಪ್ ಈಶ್ವರ್ ರೈತರಲ್ಲಿ ಮನವಿ ಮಾಡಿದರು.
ಚಿಕ್ಕಬಳ್ಳಾಪುರ (ಜೂ.09): ದೇಶಕ್ಕೆ ಅನ್ನ ನೀಡುವ ರೈತರೆಲ್ಲರೂ ಒಂದೇ, ಅನ್ನದಾತರಲ್ಲಿ ರಾಜಕೀಯ ಬೇಡ, ಬೆಳೆ ನಷ್ಟವಾಯಿತೆಂದು ಯಾವ ಅನ್ನದಾತನೂ ಆತ್ಮಹತ್ಯೆಯ ಹಾದಿ ಹಿಡಿದು ಮಕ್ಕಳನ್ನು ಅನಾಥರನ್ನಾಗಿಸ ಬೇಡಿ, ಎನೇ ಸಮಸ್ಯೆ ಇದ್ದರೂ ಪರಸ್ಪರ ಚರ್ಚೆ ಮಾಡಿ ಬಗೆಹರಿಸಿಕೊಳ್ಳೋಣ ಎಂದು ಶಾಸಕ ಪ್ರದೀಪ್ ಈಶ್ವರ್ ರೈತರಲ್ಲಿ ಮನವಿ ಮಾಡಿದರು. ಗುರುವಾರ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ರೈತರಿಗೆ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಸರ್ಕಾರ ರೈತರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನ ಮತ್ತು ರೈತರಿಗೆ ಕೃಷಿ ಇಲಾಖೆಯಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅವುಗಳ ಬಗ್ಗೆ ರೈತರಿಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಬೇಕು ಎಂದರು.
ತಮ್ಮ ಕಛೇರಿಯಲ್ಲಿ ರೈತರಿಗಾಗಿ ಪ್ರತ್ಯೇಕ ವಿಭಾಗ ತೆಗೆದು ರೈತರ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಲಾಗುವುದು. ಈ ತಿಂಗಳ ಕೊನೆಯಲ್ಲಿ ತಾಲೂಕು ಕಚೇರಿಯನ್ನು ಬೆಳಗ್ಗೆ 10-30 ಗಂಟೆಗೆ ಸಾರ್ವಜನಿಕರಿಗೆ ಮುಕ್ತ ಗೊಳಿಸಲಾಗುವುದು. ತಿಂಗಳಿಗೊಮ್ಮೆ ರೈತರ ಸಮಾವೇಶವನ್ನು ಆಯೋಜಿಸಲಾಗುವುದು ಎಂದರು. ಸಭೆಯಲ್ಲಿ ರೈತರು ಸಂಚಾರಿ ಪೋಲಿಸರು ಹೂ ಮತ್ತು ತರಕಾರಿಗಳನ್ನು ತರುವಾಗ ಅಡ್ಡಗಟ್ಟಿ ಡಿಎಲ್ ಮತ್ತಿತರ ದಾಖಲೆಗಳನ್ನು ಕೇಳುತ್ತಾರೆ. ಮತ್ತು ವಿನಾಕಾರಣ ದಂಡ ಹಾಕುತ್ತಾರೆ ನಮಗೆ ಬೇಗ ಮಾರುಕಟ್ಟೆಗೆ ಸರಕು ಹಾಕ ಬೇಕಾಗಿರುತ್ತೆ.
ಗ್ಯಾರಂಟಿ ಕಾರ್ಡ್ ಹಿಡಿದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ: ಶಾಸಕ ಸಿ.ಸಿ.ಪಾಟೀಲ್
ಲೇಟಾದರೆ ಕೊಳ್ಳುವವರಿರುವುದಿಲ್ಲಾ ಅಥವಾ ಮಾರಾಟವಾದರೂ ಉತ್ತಮ ದರ ದೊರೆಯುವುದಿಲ್ಲಾ ಎಂದಾಗ ರೈತರಿಗೆ ತೊಂದರೆ ನೀಡದಂತೆ ಸಂಚಾರಿ ಪೋಲಿಸರಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು. ಜಂಟಿ ಕೃಷಿ ನಿರ್ದೇಶಕರು ಜಾವಿದಾ ನಾಸೀಮ್ ಖಾನಂ ರವರು ಮಾತನಾಡಿ, 26 ರೈತ ಸಂಪರ್ಕ ಕೇಂದ್ರಗಳ ಮೂಲಕ ಪ್ರಾಮಾಣಿತ ಬಿತ್ತನೆ ಬೀಜ ದಾಸ್ತಾನು ಮಾಡಿ ಸಿದ್ದಪಡಿಸಿಕೊಂಡಿದೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಎಲ್ಲಾ ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಬೆಳೆಗಳ ಪ್ರಾಮಾಣಿತ ಬೀಜಗಳನ್ನು ದಾಸ್ತಾನು ಇದ್ದು, ರಿಯಾಯಿತಿ ದರದಲ್ಲಿ ಒದಗಿಸಲಾಗುವುದು ಎಂದರು.
ರಾಜ್ಯದಲ್ಲಿ ವರ್ಗಾವಣೆಗೆ ಪ್ರತಿ ಹುದ್ದೆಗೂ ದರ ನಿಗದಿ: ಎಚ್.ಡಿ.ಕುಮಾರಸ್ವಾಮಿ ಕಿಡಿ
ಈ ಸಂದರ್ಭದಲ್ಲಿ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ, ನಾರಾಯಣಸ್ವಾಮಿ,ತಾಲ್ಲೂಕು ಕೃಷಿಕ ಸಮಾಜ ಅಧ್ಯಕ್ಷ ಶ್ರೀನಿವಾಸ್, ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥರು ಪಾಪಿರೆಡ್ಡಿ, ತಾಲ್ಲೂಕು ಕೃಷಿ ಸಮಾಜ ಖಜಾಂಚಿ ಶ್ರೀನಿವಾಸಗೌಡ, ತಾಲೂಕು ಕೃಷಿ ಸಮಾಜ ಸದಸ್ಯ ಚಂದ್ರಣ್ಣ, ರೈತ ಸಂಘದ ಅಧ್ಯಕ್ಷ ರಾಮಾಂಜಿನಪ್ಪ, ರೈತ ಸಂಘದ ಅಧ್ಯಕ್ಷ, ನರಸಿಂಹಪ್ಪ ಬಿ.ಹೆಚ್, ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಸುಬ್ಬರಾಯಪ್ಪ, ಕೃಷಿ ಉಪನಿರ್ದೇಶಕ ಚಂದ್ರಕಾಂತ್, ಸಹಾಯಕ ಕೃಷಿ ನಿರ್ದೇಶಕ ಕೇಶವರೆಡ್ಡಿ ಮತ್ತು ರೈತರು ಹಾಜರಿದ್ದರು.