ರೈತರೇ ಎಚ್ಚರ : ಮಾರಾಟವಾಗುತ್ತಿದೆ ನಕಲಿ ಗೊಬ್ಬರ

By Kannadaprabha News  |  First Published Sep 9, 2021, 12:47 PM IST
  • ಗೊಬ್ಬರ ಖರೀದಿ ಮಾಡುವ ರೈತರೆ ಎಚ್ಚರ ಎಚ್ಚರ. ಮಾರುಕಟ್ಟೆಯಲ್ಲಿ ನಕಲಿ ಗೊಬ್ಬರ ಮಾರಾಟ
  • ನಕಲಿ ಗೊಬ್ಬರದ ವಿಚಾರ ರೈತರೋರ್ವರಿಂದ ಬೆಳಕಿಗೆ

ರಾಯಚೂರು (ಸೆ.09): ಗೊಬ್ಬರ ಖರೀದಿ ಮಾಡುವ ರೈತರೆ ಎಚ್ಚರ ಎಚ್ಚರ. ಮಾರುಕಟ್ಟೆಯಲ್ಲಿ ನಕಲಿ ಗೊಬ್ಬರ ಮಾರಾಟವಾಗುತ್ತಿದೆ. ಈ ನಕಲಿ ಗೊಬ್ಬರದ ವಿಚಾರ ರೈತರೋರ್ವರಿಂದ ಬೆಳಕಿಗೆ ಬಂದಿದೆ. ಖರೀದಿ ಮಾಡುವಾಗ ಗೊಬ್ಬರ ಅಂಗಡಿ ಬಳಿಯೇ ಪರಿಶೀಲನೆ ಮಾಡಿ ಪಡೆಯುವುದು ಒಳಿತು.

ಅಸಲಿ ಗೊಬ್ಬರ ಚೀಲದಲ್ಲಿ ನಕಲಿ ಗೊಬ್ಬರ ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಲಿಂಗಸೂಗೂರು ತಾ. ಗೋಲವಾಟ್ಲ ಗ್ರಾಮದ ರೈತನಿಗೆ ಈ ರೀತಿಯ ವಂಚನೆಯಾಗಿದೆ. 

Latest Videos

undefined

ಇನ್ಮುಂದೆ ಯೂರಿಯಾ ಗೊಬ್ಬರ ಕೊಳ್ಳಲು ಆಧಾರ್‌ ಕಾರ್ಡ್‌, ಪಹಣಿ ಕಡ್ಡಾಯ..!

ಹನುಮಂತ ಎಂಬ ರೈತ ಮೋಸ ಹೋಗಿದ್ದು ಲಿಂಗಸೂಗೂರಿನ ಬಸವಶ್ರೀ ಟ್ರೇಡರ್ಸ್ ನಲ್ಲಿ ಗೊಬ್ಬರ ಖರೀದಿ ಮಾಡಿದ್ದರು. ಗೊಬ್ಬರದ ಚೀಲ ಬಿಚ್ಚಿ ನೋಡಿದಾಗ ಗೊಬ್ಬರವೂ ಸಂಪೂರ್ಣ ಕಪ್ಪು ಬಣ್ಣದಲ್ಲಿದ್ದು, ಈ ವೇಳೆ ಗೊಬ್ಬರದ ಸಮೇತ ಖರೀದಿ ಮಾಡಿದ ಅಂಗಡಿಗೆ ರೈತ ಬಂದಿದ್ದಾರೆ. 

ಅಂಗಡಿ ಮುಂದೆ ಗೊಬ್ಬರ ಸುರಿದು ತಮಗಾಗಿರುವ ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

click me!