ಶೀಘ್ರವೇ ವಿಜಯನಗರಕ್ಕೆ ಡಿಸಿ, ಸಿಇಒ ನೇಮಕ: ಸಚಿವ ಆನಂದ್‌ ಸಿಂಗ್‌

Kannadaprabha News   | Asianet News
Published : Sep 09, 2021, 12:28 PM IST
ಶೀಘ್ರವೇ ವಿಜಯನಗರಕ್ಕೆ ಡಿಸಿ, ಸಿಇಒ ನೇಮಕ: ಸಚಿವ ಆನಂದ್‌ ಸಿಂಗ್‌

ಸಾರಾಂಶ

*  ಅಧಿಕಾರಿಗಳು ಹೊಸ ಜಿಲ್ಲೆಗೆ ಆಗಮಿಸುವ ನಿರೀಕ್ಷೆ ಇದೆ *  ಕುಡಿಯುವ ನೀರಿಗೆ ವಿಷ ಬೆರೆಸುವವರ ವಿರುದ್ಧ ನಾನ್‌ ಬೇಲೆಬಲ್‌ ವಾರೆಂಟ್‌ *  ಯಾವುದೇ ಕಾರಣಕ್ಕೂ ಕುಡಿಯುವ ನೀರನ್ನು ವಿಷವಾಗಿಸಬಾರದು   

ಹೊಸಪೇಟೆ(ಸೆ.09): ವಿಜಯನಗರ ಜಿಲ್ಲೆಗೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಸೇರಿ ಪ್ರಮುಖ ಅಧಿಕಾರಿಗಳು ಅಕ್ಟೋಬರ್‌ ಅಂತ್ಯದೊಳಗೆ ಆಗಮಿಸಲಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಹೇಳಿದ್ದಾರೆ. 

ನಗರದ ಬಿಡಿಸಿಸಿ ಬ್ಯಾಂಕ್‌ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಈ ಸಂಬಂಧ ಈಗಾಗಲೇ ಚರ್ಚೆ ನಡೆದಿದೆ. ಹೀಗಾಗಿ, ಜಿಲ್ಲಾಮಟ್ಟದ ಅಧಿಕಾರಿಗಳು ಹೊಸ ಜಿಲ್ಲೆಗೆ ಆಗಮಿಸುವ ನಿರೀಕ್ಷೆ ಇದೆ ಎಂದರು.

ಕಾರ್ಖಾನೆಗಳ ತ್ಯಾಜ್ಯವನ್ನು ತುಂಗಭದ್ರಾ ನದಿಗೆ ಬಿಡುತ್ತಿರುವ ಕುರಿತು ಗಮನ ಸೆಳೆದಾಗ, ಕುಡಿಯುವ ನೀರಿಗೆ ವಿಷ ಬೆರೆಸುವವರ ವಿರುದ್ಧ ನಾನ್‌ ಬೇಲೆಬಲ್‌ ವಾರೆಂಟ್‌ ಹೊರಡಿಸಲು ಅಧಿಕಾರಿಗಳಿಗೆ ಸೂಚಿಸಿರುವೆ. ಯಾವುದೇ ಕಾರಣಕ್ಕೂ ಕುಡಿಯುವ ನೀರನ್ನು ವಿಷವಾಗಿಸಬಾರದು ಎಂದರು.

ಖಾತೆ ಕ್ಯಾತೆ ತೆಗೆದಿದ್ದ ಆನಂದ್ ಸಿಂಗ್‌ಗೆ ಬಂಪರ್ ಗಿಫ್ಟ್

ಕೊಪ್ಪಳ ಜಿಲ್ಲೆಯಲ್ಲಿ ಹೋಂ ಸ್ಟೇ ಕುರಿತು ಜಿಲ್ಲಾಧಿಕಾರಿ ಕಿಶೋರ್‌ ಸುರಳ್ಕರ್‌ ಅವರು ಪೂರಕ ಹೇಳಿಕೆ ನೀಡಿದ್ದಾರೆ. ಹೀಗಾಗಿ ಹಂಪಿಯಲ್ಲಿಯೂ ಹೋಂಸ್ಟೇ ಪರವಾನಿಗೆ ನೀಡುತ್ತೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಡಿಸಿ ಅವರು ಮಾತಾಡಿರುವುದು ಗಮನಕ್ಕೆ ಬಂದಿಲ್ಲ ಎಂದು ಚುಟುಕಾಗಿ ಉತ್ತರಿಸಿದರು.

ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ (ಬಿಡಿಸಿಸಿ) ಬ್ಯಾಂಕ್‌ ಶತಮಾನೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಕ್ಟೋಬರ್‌ ಇಲ್ಲವೇ ನವೆಂಬರ್‌ನಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಈ ವೇಳೆ ರೈತಪರ ಯೋಜನೆ ರೂಪಿಸಲಾಗುವುದು ಎಂದರು. ಮುಖಂಡ ಸಂದೀಪ್‌ ಸಿಂಗ್‌ ಮತ್ತಿತರರಿದ್ದರು.
 

PREV
click me!

Recommended Stories

ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!
ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?