ಬೆಳೆಗೆ ಬೆಂಕಿ: ನಂದಿಸಲು ಹೋದ ರೈತ ಸಜೀವ ದಹನ

By Kannadaprabha News  |  First Published Jan 21, 2020, 12:40 PM IST

ವಿವಿಧ ಪ್ರತ್ಯೇಕ ಘಟನೆಗಳಿಗೆ ಸಂಬಂಧಿಸಿ ಜಿಲ್ಲೆಯ ಹೆಬ್ಬೂರು, ಕೊರಟಗೆರೆ, ಪಾವಗಡ ತಾಲೂಕಿನಲ್ಲಿ ಸುಮಾರು ಮೂವರು, ಓರ್ವ ಮಹಿಳೆ 6 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಶುಭಾ ತರಬೇಕಾದ ಸೋಮವಾರ ಅಶುಭ ತಂದು ಸೂತಕದ ಛಾಯೆ ಅವರಿಸುವಂತೆ ಮಾಡಿದೆ. ತಾನು ಬೆಳೆದ ಬೆಳೆ ಹೊತ್ತಿ ಉರಿಯುತ್ತಿದ್ದು, ನಂದಿಸಲು ಹೋದ ರೈತ ಸಜೀವ ದಹನವಾಗಿದ್ದಾನೆ.


ತುಮಕೂರು(ಜ.21): ತೊಗರಿ ಮತ್ತು ಹುರಳಿ ಬೆಳೆ ಬಣವೆಗೆ ಬಿದ್ದ ಬೆಂಕಿ ನಂದಿಸಲು ಹೋದ ರೈತನೊಬ್ಬ ಬೆಂಕಿ ಮಧ್ಯೆ ಸಿಲುಕಿ ಜೀವಂತ ದಹನವಾಗಿರುವ ಘಟನೆ ಸೋಮವಾರ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಹೊಸಹಳ್ಳಿ ತಾಂಡಾದಲ್ಲಿ ನಡೆದಿದೆ.

ತಾಂಡಾದ ನಿವಾಸಿ ವಸುರಾಮ್‌ ನಾಯಕ್‌(55) ಮೃತ ದುರ್ದೈವಿ. ಪಳವಳ್ಳಿ ಗ್ರಾಪಂ ಸದಸ್ಯ ನಾನೂನಾಯ್‌್ಕ ಅವರ ತಂದೆ ವಸುರಾಮ್‌ ನಾಯ್‌್ಕ ತಮ್ಮ 10 ಎಕರೆ ಜಮೀನಿನಲ್ಲಿ ಬೆಳೆದ ತೊಗರಿ ಮತ್ತು ಹುರುಳಿ ಕಟಾವು ಮಾಡಿ ಗ್ರಾಮದ ಜಮೀನಿನಲ್ಲಿಯೇ ಬಣವೆ ಹಾಕಿದ್ದರು. ಕಸಕ್ಕೆ ಹಾಕಿರುವ ಬೆಂಕಿ ತೊಗರಿ ಮತ್ತು ಹುರುಳಿ ಬಣವೆಗೆ ತಾಗಿ ಹೊತ್ತಿ ಉರಿಯಲಾಂಭಿಸಿದೆ. ಈ ವೇಳೆ ಬೆಂಕಿ ನಂದಿಸಲು ಹೋದ ರೈತ ವಸುರಾಮನಾಯಕ್‌ ಬೆಂಕಿಗೆ ಸಿಲುಕಿ ಸಜೀವ ದಹನವಾಗಿದ್ದಾರೆ.

Latest Videos

undefined

ಸರ್ಕಾರಿ ಕಚೇರಿಯೇ ಇವರಿಗೆ ಸಿನಿಮಾ ಥಿಯೇಟರ್..!

ವಿವಿಧ ಪ್ರತ್ಯೇಕ ಘಟನೆಗಳಿಗೆ ಸಂಬಂಧಿಸಿ ಜಿಲ್ಲೆಯ ಹೆಬ್ಬೂರು, ಕೊರಟಗೆರೆ, ಪಾವಗಡ ತಾಲೂಕಿನಲ್ಲಿ ಸುಮಾರು ಮೂವರು, ಓರ್ವ ಮಹಿಳೆ 6 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಶುಭಾ ತರಬೇಕಾದ ಸೋಮವಾರ ಅಶುಭ ತಂದು ಸೂತಕದ ಛಾಯೆ ಅವರಿಸುವಂತೆ ಮಾಡಿದೆ.

ಮಗನ ಆತ್ಮಹತ್ಯೆ ಸುದ್ದಿ ಕೇಳಿ ತಾಯಿ ಸಾವು:

ಅತಿಯಾಗಿ ಮದ್ಯ ಸೇವಿಸಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ತಾಯಿಯೂ ಕೂಡ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹೆಬ್ಬೂರು ಸಮೀಪದ ಸಂಗ್ಲಾಪುರದಲ್ಲಿ ನಡೆದಿದೆ.

 

ಗ್ರಾಮದ ಈರಯ್ಯ(45) ಹಾಗೂ ಆತನ ತಾಯಿ ನರಸಮ್ಮ(60) ಎಂಬುವರೇ ಮೃತಪಟ್ಟಿರುವ ದುರ್ದೈವಿಗಳು. ಈರಯ್ಯನಿಗೆ ಅತಿಯಾಗಿ ಮದ್ಯ ಸೇವಿಸುವ ಚಟವಿತ್ತು. ಕುಡಿದ ಅಮಲಿನಲ್ಲಿ ಆತ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ. ಮಗನ ಆತ್ಮಹತ್ಯೆ ಸುದ್ದಿ ತಿಳಿದ ಆತನ ತಾಯಿ ನರಸಮ್ಮಗೆ ತೀವ್ರ ಹೃದಯಾಘಾತವಾಗಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾಳೆ. ಹೆಬೂರು ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.ಸೊಪ್ಪು ತೊಳೆಯಲು ಹೋದ ಇಬ್ಬರು ನೀರು ಪಾಲು

ತರಕಾರಿ ತೊಳೆಯಲು ಹೋದ ಇಬ್ಬರು ರೈತರು ಕಾಲು ಜಾರಿ ಕೆರೆಗೆ ಬಿದ್ದು ನೀರುಪಾಲಾದ ಘಟನೆ ಕೊರಟಗೆರೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಕೊರಟಗೆರೆ ತಾಲೂಕಿನ ಥರಟಿ ಗ್ರಾಮದ ಕೆರೆಯಲ್ಲಿ ಈ ದುರ್ಘಟನೆ ಜರುಗಿದ್ದು, ಗ್ರಾಮದ ಲೇ.ಭೀಮಯ್ಯನ ಮಗ ಧರ್ಮಪ್ರಕಾಶ್‌ ಹಾಗೂ ಹನುಮಂತಗಿರಿಯ ನಾಗರಾಜು ಎಂಬುವರೇ ನೀರಿನಲ್ಲಿ ಮುಳುಗಿ ಸಾವೀಗೀಡಾದ ದುದೈರ್‍ವಿಗಳಾಗಿದ್ದಾರೆ.

ಇವರು ತಾವು ಬೆಳೆದಿದ್ದ ಮೆಂತ್ಯೆ ಸೊಪ್ಪುನ್ನು ಕೆರೆಯಲ್ಲಿ ತೊಳೆಯಲು ಹೋಗಿದ್ದರು. ಈ ಸಂದರ್ಭದಲ್ಲಿ ಧರ್ಮಪ್ರಕಾಶ್‌ ಕಾಲುಜಾರಿ ನೀರಿಗೆ ಬಿದ್ದಿದ್ದಾರೆ. ಇವರನ್ನು ಕಾಪಾಡಲು ನೀರಿಗಿಳಿದ ನಾಗರಾಜು ಸಹ ಈಜುಬಾರದೆ ನೀರಿನಲ್ಲಿ ಮುಳುಗಿದ್ದಾರೆ. ಈ ವೇಳೆ ಕೆರೆಯ ಪಕ್ಕದಲ್ಲೇ ಮನೆಯಲ್ಲಿದ್ದ ಧರ್ಮಪ್ರಕಾಶ್‌ ಪತ್ನಿ ಕೆಂಪರಾಮಮ್ಮ ನೋಡಿ ಇಬ್ಬರನ್ನು ಕಾಪಾಡುವಂತೆ ಚೀರಾಡಿದ್ದಾರೆ. ಇದರಿಂದ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಾರ್ವಜನಿಕರು ಇಬ್ಬರನ್ನೂ ಮೇಲಕ್ಕೆತ್ತಿ ದಡಕ್ಕೆ ತಂದರಾದರೂ ನಾಗರಾಜು ಸ್ಥಳದಲ್ಲೆ ಕೊನೆಯುಸಿರೆಳೆದಿದ್ದು, ಧರ್ಮಪ್ರಕಾಶ್‌ ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ನದಾಫ್‌, ಪಿಎಸ್‌ ಮಂಜುನಾಥ್‌ ಭೇಟಿ ನೀಡಿ ಪರಿಶೀಲಿಸಿದರು.

ಕಾರು ಡಿಕ್ಕಿ: ಗಾಯಾಳು ಆಟೋ ಚಾಲಕ ಸಾವು

ಶಾಲಾ ವಿದ್ಯಾರ್ಥಿಗಳನ್ನು ಮನೆಗೆ ಬಿಟ್ಟು ಬರುತ್ತಿದ್ದ ಆಟೋಗೆ ಸ್ವಿಫ್ಟ್‌ಕಾರು ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸಾವನ್ನಪ್ಪಿರುವ ಘಟನೆ ಕೊರಟಗೆರೆ ಹೊರವಲಯದ ಬೈಪಾಸ್‌ ಬಳಿ ನಡೆದಿದೆ. ಪಟ್ಟಣದ ನಿವಾಸಿ ಪಸ್ಲುಲ್ಲಾ(48) ಎಂಬಾತನೇ ಮೃತಪಟ್ಟದುರ್ದೈವಿ.

ರೈಲಿಗೆ ಸಿಲುಕಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು

ಈತ ಪಟ್ಟಣದ ಕ್ರಿಶ್ಚಿಯೆಂಟ್‌ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳನ್ನು ಸಂಜೆ ಶಾಲೆ ಬಿಟ್ಟನಂತರ ಮನೆಗೆ ಬಿಟ್ಟು ಹಿಂದಿರುಗುತ್ತಿರುವಾಗ ಕೊರಟಗೆರೆ ಹೊರವಲಯದ ಬೈಪಾಸ್‌ ಬಳಿ ಆಟೋ ಹಾಗೂ ಕಾರು ನಡುವೆ ಡಿಕ್ಕಿ ಸಂಭವಿಸಿದೆ. ಈ ವೇಳೆ ಚಾಲಕ ತೀವ್ರ ಗಾಯಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

click me!