ಏಳುವರೆ ಸಾವಿರ ಗಿಡಗಳನ್ನು ನೆಟ್ಟು ಬೆವರು ಸುರಿಸಿ ಬೆಳೆದಿದ್ದೆ. ನೀರು ಹಾಯಿಸಿ ಸಾವಿರಾರು ರು. ಹಣ ವ್ಯಯಿಸಿ ಬೆಳೆದಿದ್ದ ಆಸೆಯ ಹೂ ಬೆಳೆಗೆ ತಮ್ಮ ಜೇಬು ತುಂಬಿಸುವ ಆರ್ಥಿಕವಾಗಿ ಸಂಕಷ್ಟಕ್ಕೀಡು ಮಾಡಿದೆ ಎಂದು ಅಳಲು ತೋಡಿಕೊಂಡ ರೈತ ಚಂದ್ರಶೇಖರ್
ಶೇಖರ್ ವೈ. ಡಿ.
ಅರಕಲಗೂಡು(ಸೆ.25): ತಾಲೂಕಿನ ದುಮ್ಮಿ ಗ್ರಾಮದ ರೈತ ಚಂದ್ರಶೇಖರ್ ಎಂಬುವರು ಬೆಲೆ ಇಲ್ಲದ ಕಾರಣ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೇವಂತಿಗೆ ಗಿಡಗಳನ್ನು ಹೂ ಸಮೇತ ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡಿ ನಾಶಪಡಿಸಿದ್ದಾರೆ.
ಏಳುವರೆ ಸಾವಿರ ಗಿಡಗಳನ್ನು ನೆಟ್ಟು ಬೆವರು ಸುರಿಸಿ ಬೆಳೆದಿದ್ದೆ. ನೀರು ಹಾಯಿಸಿ ಸಾವಿರಾರು ರು. ಹಣ ವ್ಯಯಿಸಿ ಬೆಳೆದಿದ್ದ ಆಸೆಯ ಹೂ ಬೆಳೆಗೆ ತಮ್ಮ ಜೇಬು ತುಂಬಿಸುವ ಆರ್ಥಿಕವಾಗಿ ಸಂಕಷ್ಟಕ್ಕೀಡು ಮಾಡಿದೆ ಎಂದು ಅಳಲು ತೋಡಿಕೊಂಡರು.
CHAITRA KUNDAPUR CASE: ನನಗೂ ಗಗನ್ ಕಡೂರಿಗೂ ಸಂಬಂಧ ಇಲ್ಲ: ಸಾಲುಮರದ ತಿಮ್ಮಕ್ಕ
ಕಳೆದ ವಾರ ಗೌರಿ ಗಣೇಶ ಹಬ್ಬದ ಸಮಯದಲ್ಲೂ ಸೇವಂತಿ ಹೂವಿಗೆ ಬೆಲೆ ಸಿಗಲಿಲ್ಲ. ಉತ್ತಮ ಲಾಭ ಗಳಿಸುವ ಆಸೆಯಿಂದ ಅಪಾರ ಶ್ರಮ ವಹಿಸಿ ಬೆಳೆದಿದ್ದ ಬೆಳೆ ನಮ್ಮ ಕುಟುಂಬವನ್ನು ಸಾಲದ ಶೂಲಕ್ಕೆ ತಳ್ಳಿತು ಎಂದು ಹೂ ಬೆಳೆಗಾರರು ಅವಲತ್ತುಕೊಳ್ಳುತ್ತಿದ್ದಾರೆ.
ತಾಲೂಕಿನ ಕಸಬಾ, ಕೊಣನೂರು, ರಾಮನಾಥಪುರ, ಕೇರಳಾಪುರ ಭಾಗದಲ್ಲಿ ಅಪಾರ ಬೆಳೆಗಾರರು ಬದುಕಿಗಾಗಿ ಹೂ ಬೆಳೆಯನ್ನೆ ನೆಚ್ಚಿಕೊಂಡಿದ್ದಾರೆ. ಪ್ರತಿನಿತ್ಯ ಪಟ್ಟಣ ಪ್ರದೇಶಗಳಿಗೆ ತೆರಳಿ ಹೂ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಇದೀಗ ಹೂವಿಗೆ ಬೆಲೆಯಿಲ್ಲದೆ ಪರಿತಪಿಸುವಂತಾಗಿದೆ ಎನ್ನುತ್ತಾರೆ ಬೆಳೆಗಾರರು.
ನಮ್ಮ ದೈವಭಕ್ತಿ ನಮ್ಮ ಕುಟುಂಬವನ್ನು ಕಾಪಾಡಿದೆ: ಎಚ್.ಡಿ.ರೇವಣ್ಣ
ಸೇವಂತಿಗೆ ಹೂ ಒಂದು ಮಾರಿಗೆ 5ರಿಂದ 10 ರು.ಗೆ ಮಾರಾಟ ಮಾಡಬೇಕಾಗಿದೆ. ಗಿಡಗಳಲ್ಲಿ ಹೂ ಕೊಯ್ದು ಮಾಲೆ ಕಟ್ಟಲು ತಗಲುತ್ತಿರುವ ಕೂಲಿ ವೆಚ್ಚವೂ ಸಿಗುತ್ತಿಲ್ಲ. ಇದರಿಂದ ಮನನೊಂದು ಬೆಳೆದಿದ್ದ ಹೂ ಬೆಳೆಯನ್ನು ಟ್ರ್ಯಾಲಿ ಹೊಡೆಸಿ ನಾಶಪಡಿಸುತ್ತಿದ್ದೇನೆ. ಸರ್ಕಾರ ಹೂ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಬೆಳೆಗಾರ ದುಮ್ಮಿ ಚಂದ್ರಶೇಖರ್ ಹೇಳಿದ್ದಾರೆ.
ರೈತರು ಬೆಳೆದಿದ್ದ ಹೂ ಮಾಲೆಗಳನ್ನು ಕೊಂಡು ಹುಬ್ಬಳ್ಳಿ, ಮಂಗಳೂರು, ಕೇರಳ ಮತ್ತಿತರ ನಗರ ಪ್ರದೇಶಗಳಿಗೆ ಸಾಗಿಸಿ ಮಾರಾಟ ಮಾಡಲಾಗುತ್ತಿತ್ತು. ಈಗ ಎಲ್ಲಾ ಕಡೆ ಹೂವಿನ ದರ ಪಾತಾಳ ಕಂಡಿದೆ. ಹೂವಿಗೆ ಬೇಡಿಕೆ ಇಲ್ಲದ ಕಾರಣ ಮಾರಾಟ ಸ್ಥಗಿತಗೊಳಿಸಿದ್ದೇನೆ ಎಂದು ಹೂ ವ್ಯಾಪಾರಿ ಸಂತೋಷ್ ಶಣವಿನಕುಪ್ಪೆ ತಿಳಿಸಿದ್ದಾರೆ.