"ನನಗೊಂದು ಶೆಡ್ ನೀಡಿ" ಚಿಕ್ಕೋಡಿ ಗ್ರಾಮ ಪಂಚಾಯ್ತಿ ಮುಂದೆ ಎಮ್ಮೆ ಪ್ರತಿಭಟನೆ!

Published : Jun 16, 2025, 04:10 PM IST
Chikkodi Buffalo protest

ಸಾರಾಂಶ

ಸಂಬರಗಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಮಂಜೂರಾದ ದನದ ಶೆಡ್‌ಗಳು ಇನ್ನೂ ನಿರ್ಮಾಣವಾಗದ ಕಾರಣ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಪಂಚಾಯತ್ ರಾಜ್ ಇಲಾಖೆ ಇಂಜಿನಿಯರ್‌ನ ನಿರ್ಲಕ್ಷ್ಯದಿಂದಾಗಿ ಶೆಡ್ ವಿತರಣೆಯಲ್ಲಿ ಗೊಂದಲ ಉಂಟಾಗಿದೆ. 

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ದನಗಳ ಶೆಡ್ ನಿರ್ಮಾಣ ಸಂಬಂಧ ಗೊಂದಲ ಸೃಷ್ಟಿಯಾಗಿದೆ. 2024ರಲ್ಲಿ ನರೇಗಾ ಯೋಜನೆಯಡಿಯಲ್ಲಿ 135 ದನಗಳ ಶೆಡ್‌ಗಳನ್ನು ಮಂಜೂರು ಮಾಡಲಾಗಿದ್ದರೂ, ಇದುವರೆಗೂ ಕಾರ್ಯಾರಂಭವಾಗಿಲ್ಲ.

ಸಂಬರಗಿ ಗ್ರಾಮ ಪಂಚಾಯಿತಿಯಲ್ಲಿ ಶೆಡ್ ವಿತರಣೆಯಲ್ಲಿ ಗೊಂದಲ, ಬಡ ರೈತರಿಗೆ ಲಾಭವಾಗಬೇಕಾದ ಯೋಜನೆ ಗೋಲ್ ಮಾಲ್‌ಗೆ ಒಳಗಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ಶಂಕರ ಶಾಸ್ತ್ರಿ ಅವರ ನಿರ್ಲಕ್ಷ್ಯ ಹಾಗೂ ಎಡವಟ್ಟುಗಳಿಂದಾಗಿ ಶೆಡ್ ಮಂಜೂರಾದರೂ ಪ್ರಕ್ರಿಯೆಗೆ ಒಳಪಡಿಸಲ್ಪಟ್ಟಿಲ್ಲ.

ಈ ನಿರ್ಲಕ್ಷ್ಯದ ವಿರುದ್ಧವಾಗಿ, ಒಂದು ಎಮ್ಮೆಯನ್ನು ಗ್ರಾಮ ಪಂಚಾಯ್ತಿ ಕಚೇರಿಯ ಮುಂದೆ ಕಟ್ಟಿ, "ನನಗೊಂದು ಶೆಡ್ ನೀಡಿ" ಎಂಬ ವಿನೂತನ ರೀತಿಯಲ್ಲಿ ರೈತನು ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಗ್ರಾಮಸ್ಥರಲ್ಲಿ ಈ ವಿಷಯ ಬಿಟ್ಟು ತೀವ್ರ ಅಸಮಾಧಾನ ಉಂಟಾಗಿದ್ದು, ಪಂಚಾಯತ್ ಆಡಳಿತ ವ್ಯವಸ್ಥೆಯ ವಿರುದ್ಧ ವಿರೋಧದ ಧ್ವನಿ ಎದ್ದಿದೆ.

ಹಿಟ್ ಅಂಡ್ ರನ್ ಪ್ರಕರಣ: ಎರಡೇ ಗಂಟೆಗಳಲ್ಲಿ ಆರೋಪಿ  ಪೊಲೀಸ್ ಬಲೆಗೆ 

ಬೆಳಗಾವಿ ತಾಲ್ಲೂಕಿನ ಹಿರೇಬಾಗೆವಾಡಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಹಿಟ್ ಅಂಡ್ ರನ್ ಪ್ರಕರಣದಲ್ಲಿ, ಲಾರಿ ಚಾಲಕನನ್ನು ಪೊಲೀಸರು ಎರಡು ಗಂಟೆಗಳೊಳಗೆ ಚೇಸ್ ಮಾಡಿ ಬಂಧಿಸಿರುವ ಘಟನೆ ಸಂಭವಿಸಿದೆ.

ಕಿತ್ತೂರು ತಾಲ್ಲೂಕಿನ ಉಮೇಶ ದೇಸೂರಕರ್ (30) ರಸ್ತೆ ದಾಟುವಾಗ ಲಾರಿ ಹರಿದು ದುರ್ಮರಣಕ್ಕೀಡಾದರು. ಅಪಘಾತ ಸಂಭವಿಸಿದ ನಂತರ ಲಾರಿ ನಿಲ್ಲಿಸದೇ ಪರಾರಿಯಾಗಿದ್ದ ಚಾಲಕ ಹಮ್ಮಿದ್ ಖಾನ್‌ನ್ನು ಪೊಲೀಸರು ತ್ವರಿತ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

ಪಾದಚಾರಿ ವ್ಯಕ್ತಿಗೆ ಲಾರಿ ಢಿಕ್ಕಿ ಹೊಡೆದು ಪರಾರಿಯಾದ ಆರೋಪಿಗೆ ಹಿರೇಬಾಗೆವಾಡಿ ಪೊಲೀಸರು ಬೆನ್ನು ಬೀಳಿಸಿ, ಆತನನ್ನು ಕೇವಲ ಎರಡು ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು.

ಈ ಕಾರ್ಯಾಚರಣೆಗೆ ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರು ಹಿರೇಬಾಗೆವಾಡಿ ಪೊಲೀಸರು ಮತ್ತು ತಂಡದ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದಾರೆ.

 

PREV
Read more Articles on
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ