ಬೆಂಗಳೂರು ನಗರಕ್ಕೆ ಕಾವೇರಿ ನೀರು ಪೂರೈಕೆ ಸ್ಥಗಿತ! ಯಾವ ಏರಿಯಾಗೂ ಒಂದು ಹನಿ ನೀರು ಬರೋದಿಲ್ಲ!

Published : Jun 16, 2025, 04:01 PM ISTUpdated : Jun 16, 2025, 06:51 PM IST
BWSSB Cauvery water supply disruption

ಸಾರಾಂಶ

ಜೂನ್ 19 ರಿಂದ 20 ರವರೆಗೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕಾವೇರಿ 5ನೇ ಹಂತದ ಕಾಮಗಾರಿ ಹಾಗೂ ವಿದ್ಯುತ್ ನಿರ್ವಹಣೆ ಕಾರಣದಿಂದಾಗಿ ಈ ಸ್ಥಗಿತ ಅನಿವಾರ್ಯವಾಗಿದೆ. ನಾಗರಿಕರು ಮುಂಜಾಗ್ರತೆಯಾಗಿ ನೀರು ಸಂಗ್ರಹಿಸಿಕೊಳ್ಳುವಂತೆ BWSSB ಮನವಿ ಮಾಡಿದೆ.

ಬೆಂಗಳೂರು (ಜೂ.16): ಬೃಹತ್ ಬೆಂಗಳೂರು ನಗರ ವ್ಯಾಪ್ತಿಯ ಬಹುತೇಕ ಭಾಗಗಳಿಗೆ ನೀರು ಪೂರೈಕೆ ಮಾಡುವ ಕಾವೇರಿ ನೀರು ಸರಬರಾಜು ಯೋಜನೆಯ ಹಂತ-1ರಿಂದ ಹಂತ-5ರವರೆಗೆ ಜಲರೇಚಕ ಯಂತ್ರಾಗಾರಗಳನ್ನು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತಿದೆ. ದಿನಾಂಕ ಜೂನ್ 19ರ ಬೆಳಿಗ್ಗೆ 6 ಗಂಟೆಯಿಂದ ಜೂನ್ 20ರ ಬೆಳಿಗ್ಗೆ 6 ಗಂಟೆವರೆಗೆ ಈ ಸ್ಥಗಿತ ಮುಂದುವರೆಯಲಿದ್ದು, ಈ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಕುರಿಯುವ ನೀರು ಮತ್ತು ಒಳಚರಂಡಿ ಮಂಡಳಿ (BWSSB) ತಿಳಿಸಿದೆ.

ಬೆಂಗಳೂರು ನಗರ ಹಾಗೂ ಉಪನಗರ ವ್ಯಾಪ್ತಿಯ ಪ್ರದೇಶಗಳಿಗೆ ಮುಂದಿನ ದಶಕಗಳ ನೀರಿನ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ ಟಿ.ಕೆ. ಹಳ್ಳಿಯಲ್ಲಿ ನಡೆಯುತ್ತಿರುವ ಕಾವೇರಿ 5ನೇ ಹಂತದ ಕಾಮಗಾರಿ ಪ್ರಮುಖವಾಗಿದೆ. ಈ ಹಂತದಡಿಯಲ್ಲಿ ಹೊಸ 3000 ಮಿ.ಮೀ. ವ್ಯಾಸದ ಕೊಳವೆ ಮಾರ್ಗವನ್ನು ಜೋಡಿಸಲು ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (KPTCL) ಸೂಚಿಸಿರುವ ವಿದ್ಯುತ್ ಸ್ಥಾವರಗಳ ವಾರ್ಷಿಕ ನಿರ್ವಹಣೆ ಮತ್ತು ತುರ್ತು ತಾಂತ್ರಿಕ ತಪಾಸಣೆಯನ್ನು ಸಹ ಕೈಗೊಳ್ಳಲಾಗುತ್ತಿದೆ.

ಎಲ್ಲಾ ಹಂತಗಳ ನೀರು ಸರಬರಾಜು ಸ್ಥಗಿತ:

ಈ ನಿರ್ವಹಣಾ ಕಾರ್ಯದ ವೇಳೆ, ಹಂತ-1ರಿಂದ ಹಂತ-5ರ ತನಕ ಇರುವ ಎಲ್ಲಾ ಜಲರೇಚಕ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗುವುದು. ಇದರಿಂದಾಗಿ ಕಾವೇರಿ ನೀರಿನ ಸರಬರಾಜು ಸಂಪೂರ್ಣವಾಗಿ ನಿರ್ಬಂಧಿತವಾಗಲಿದೆ. ನೀರಿನ ವ್ಯತ್ಯಯವನ್ನು ಮನನದಲ್ಲಿಟ್ಟುಕೊಂಡು ನಗರದ ನಾಗರಿಕರು, ವಾಣಿಜ್ಯ ಸಂಸ್ಥೆಗಳು ಹಾಗೂ ಕೈಗಾರಿಕೆಗಳು ಮುಂಜಾಗ್ರತಾ ಕ್ರಮವಾಗಿ ಅಗತ್ಯವಿರುವ ನೀರನ್ನು ಪೂರ್ವದಲ್ಲಿ ಸಂಗ್ರಹಿಸಿಕೊಳ್ಳುವಂತೆ ಬೃಹತ್ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮನವಿ ಮಾಡಿದೆ.

ಸಾರಾಂಶ:

  • ಸ್ಥಗಿತ ದಿನಾಂಕ: ಜೂನ್ 19 ಬೆಳಗ್ಗೆ 6 ರಿಂದ ಜೂನ್ 20 ಬೆಳಗ್ಗೆ 6ರ ವರೆಗೆ
  • ಕಾರಣ: ಕಾವೇರಿ ಹಂತ-5 ಕೊಳವೆ ಜೋಡಣೆ, ವಿದ್ಯುತ್ ನಿರ್ವಹಣೆ, ತುರ್ತು ತಪಾಸಣೆ
  • ಪರಿಣಾಮ: ಬೆಂಗಳೂರು ನಗರದಲ್ಲಿ ನೀರಿನ ವ್ಯತ್ಯಯ
  • ಮನವಿ: ನೀರನ್ನು ಮುಂಚಿತವಾಗಿ ಸಂಗ್ರಹಿಸಿಕೊಳ್ಳಿ

ನೀರು ಸರಬರಾಜಿನಲ್ಲಿ ತಾತ್ಕಾಲಿಕವಾಗಿ ಉಂಟಾಗುತ್ತಿರುವ ತೊಂದರೆಗಾಗಿ ಗ್ರಾಹಕರು ಸಹಕಾರ ನೀಡಬೇಕು ಎಂದು ಮಂಡಳಿಯಿಂದ ಮನವಿ ಮಾಡಲಾಗಿದೆ. ನಿಗದಿತ ಸಮಯಕ್ಕೆ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಸಾಧ್ಯವಾದಷ್ಟು ಬೇಗ ನೀರಿನ ಸರಬರಾಜು ಪುನಃ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

PREV
Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್