ಸಿಗದ ಬೆಲೆ ಸಿಗದ್ದಕ್ಕೆ ರೈತನಿಂದ ಧರ್ಮಸ್ಥಳಕ್ಕೆ ಕುಂಬಳಕಾಯಿ!

By Kannadaprabha NewsFirst Published Apr 8, 2021, 7:11 AM IST
Highlights

ಸಾವಿರಾರು ರು ಖರ್ಚು ಮಾಡಿ ಬೆಳೆದಿದ್ದ ಬೆಳೆಯನ್ನು  ರೈತರೋರ್ವರು ಬೆಲೆ ಸಿಗದ ಕಾರಣ ಧರ್ಮಸ್ಥಳಕ್ಕೆ ರವಾನೆ ಮಾಡಿದ್ದಾರೆ. ಎರಡು ಲೋಡ್ ಕುಂಬಳ ಕಾಯಿಯನ್ನು ಧರ್ಮಸ್ಥಳಕ್ಕೆ ಕಳುಹಿಸಿದ್ದಾರೆ. 

ಪಿರಿಯಾಪಟ್ಟಣ (ಮೈಸೂರು): ಕಷ್ಟಪಟ್ಟು ಬೆಳೆದ ಕುಂಬಳಕಾಯಿ ಬೆಳೆಗೆ ಸೂಕ್ತ ದರ ಸಿಗದ ಕಾರಣ ತಾಲೂಕಿನ ಸೀಗೆಕೊರೆ ಕಾವಲು ಗ್ರಾಮದ ರೈತ ಭುಜಂಗ ಆರಾಧ್ಯ ಅವರು ಸ್ವಂತ ಖರ್ಚಿನಲ್ಲಿ 2 ಲೋಡ್‌ ಕುಂಬಳಕಾಯಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ದಾಸೋಹಕ್ಕೆ ಕಳುಹಿಸಿಕೊಟ್ಟಿದ್ದಾರೆ.

 ತಮ್ಮ ಎರಡು ಎಕರೆ ಜಮೀನಿನಲ್ಲಿ  25 ರಿಂದ 30 ಸಾವಿರ ವೆಚ್ಚ ಮಾಡಿ ಬೆಳೆದಿದ್ದ ಕುಂಬಳಕಾಯಿ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಕ್ಕಿರಲಿಲ್ಲ. 

ಈ ತರಕಾರಿ ಬೆಲೆ 1ಕೆಜಿಗೆ 1 ಲಕ್ಷ ರೂಪಾಯಿ; ಸುಳ್ಳು ಎನ್ನುತ್ತಿದೆ ವರದಿ! .

ಪ್ರತಿ ಕೆಜಿಗೆ ಕೇವಲ  1 ರಿಂದ  2  ರು. ಕೊಟ್ಟು ಖರೀದಿ ಮಾಡಲು ಕೆಲವರು ಮುಂದೆ ಬಂದರೂ ಅಷ್ಟುಕಡಿಮೆ ದರಕ್ಕೆ ಮಾರಾಟ ಮಾಡಲು ಇಷ್ಟಪಡದ ಭುಜಂಗ ಅವರು ಕೊನೆಗೆ ಒಂದಷ್ಟುಬೆಳೆಯನ್ನು ಸ್ಥಳೀಯರಿಗೆ ಉಚಿತವಾಗಿ ಹಂಚಿದ್ದಾರೆ. ಉಳಿದವುಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ದಾಸೋಹಕ್ಕೆ ಕಳಿಸಿಕೊಡುವ ತೀರ್ಮಾನ ಕೈಗೊಂಡರು.

ತಮ್ಮದೇ ಖರ್ಚಿನಲ್ಲಿ ಬಸ್‌ ಮೂಲಕ ಧರ್ಮಸ್ಥಳಕ್ಕೆ ಕಳುಹಿಸಿಕೊಟ್ಟರು.

click me!