* ಹೊಸಪೇಟೆಯಲ್ಲಿ ಪವರ್‌ಸ್ಟಾರ್ ಅಭಿಮಾನಿಗಳ ಒತ್ತಾಯ
* ಹಂಪಿ, ಹೊಸಪೇಟೆ ಮೇಲೆ ಅಪಾರ ಪ್ರೀತಿ ಹೊಂದಿದ್ದ ಪುನೀತ್
* ಹೊಸಪೇಟೆಯ ಅಭಿಮಾನಿಗಳಿಗೆ ವಿಶೇಷ ಪ್ರೀತಿ ತೋರುತ್ತಿದ್ದ ಅಪ್ಪು
ಹೊಸಪೇಟೆ(ನ.06): ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ಹೊಸಪೇಟೆಯ ಪ್ರಮುಖ ವೃತ್ತಯೊಂದಕ್ಕೆ ಅವರ ಹೆಸರನ್ನಿಡಬೇಕು. ಇಲ್ಲವಾದರೆ ಜಿಲ್ಲಾ ಕ್ರೀಡಾಂಗಣಕ್ಕೆ(District Stadium) ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣ ಅಂತ ಹೆಸರನ್ನಿಡಬೇಕು ಎಂದು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಒತ್ತಾಯಿಸಿದ್ದಾರೆ.
ನಗರದ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ಸಭೆ ಸೇರಿದ್ದ ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಹಂಪಿ, ಹೊಸಪೇಟೆ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಇತ್ತೀಚೆಗೆ ಹಂಪಿ ಹಾಗೂ ಹೊಸಪೇಟೆ ಹಳ್ಳಿ ಭಾಗಕ್ಕೂ ಬಂದು ಹೋಗಿದ್ದರು. ನನ್ನನ್ನೂ ಯಾರು ಕೈಬಿಟ್ಟರೂ ಹೊಸಪೇಟೆ ಜನ ಕೈಬಿಡುವುದಿಲ್ಲ ಎಂದು ಪುನೀತ್ಹೇಳಿದ್ದಾರೆ. ಅವರು ಈ ಭಾಗದಲ್ಲಿ ಶೂಟಿಂಗ್ಗೆ ಬಂದಾಗಲೂ ಹೊಸಪೇಟೆಯ ಅಭಿಮಾನಿಗಳಿಗೆ ವಿಶೇಷ ಪ್ರೀತಿ ತೋರುತ್ತಿದ್ದರು. ಬೆಂಗಳೂರಿಗೆ ಹೋದಾಗಲು ಹೊಸಪೇಟೆ ಜನರ ಮೇಲೆ ಪ್ರೀತಿ ತೋರಿದ್ದಾರೆ. ಹಾಗಾಗಿ ಅವರ ಹೆಸರನ್ನು ಪ್ರಮುಖ ವೃತ್ತಕ್ಕೆ ಇಡಬೇಕು. ಇಲ್ಲವಾದರೇ ದೊಡ್ಮನೆ ಹುಡುಗ ಚಿತ್ರದ ಚಿತ್ರೀಕರಣ ನಡೆದ ಕ್ರೀಡಾಂಗಣಕ್ಕೆ ಅವರ ಹೆಸರನ್ನಿಡಬೇಕು. ಇದೇ ಕ್ರೀಡಾಂಗಣದಲ್ಲಿ ಪುನೀತ್ ಅವರು ಶಿವಣ್ಣ(Shivanna) ಅಭಿನಯದ ಟಗರು(Tagaru) ಚಿತ್ರದ ಆಡಿಯೋ ಬಿಡುಗಡೆ(Audio Release) ಮಾಡಿದ್ದರು. ಅವರ ನೆನಪಿಗಾಗಿ ಈ ಕಾರ್ಯ ಮಾಡಬೇಕು. ದೀಪಾವಳಿ ಹಬ್ಬದ ಬಳಿಕ ಸಚಿವ ಆನಂದ್ ಸಿಂಗ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
undefined
ದೇವರ ಕೋಣೆಯಲ್ಲಿ ಅಣ್ಣಾವ್ರು, ಅಪ್ಪು ಫೋಟೋ; ಅಭಿಮಾನಿಗಳಿಗೆ ಸಾಷ್ಟಾಂಗ ನಮಸ್ಕಾರ ಎಂದು ರಾಘಣ್ಣ
ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಾದ ಗುಜ್ಜಲ ರಘು, ಗುಜ್ಜಲ ಪುರುಷೋತ್ತಮ್, ಕಿಚಿಡಿ ವಿಶ್ವ, ಎಸ್.ಎಸ್. ಚಂದ್ರಶೇಖರ, ಜೋಗಿ ತಾಯಪ್ಪ, ಕೆ.ಎಂ. ಸಂತೋಷ್ ಮತ್ತಿತರರಿದ್ದರು.
ಪುನೀತ್ ಪ್ರತಿಮೆ ನಿರ್ಮಾಣಕ್ಕೆ ಸಚಿವ ಆನಂದ್ ಸಿಂಗ್ ಸಂಕಲ್ಪ
ಪವರ್‌ಸ್ಟಾರ್(Power Star) ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಪ್ರತಿಮೆ ನಿರ್ಮಾಣ ಮಾಡಬೇಕೆಂಬ ಪುನೀತ್ ಅಭಿಮಾನಿಗಳ ಕೂಗಿಗೆ ಸಚಿವ ಆನಂದ್ ಸಿಂಗ್ (Anand Singh) ಧ್ವನಿಗೂಡಿಸಿದ್ದರು.
ಹೊಸಪೇಟೆ ಜನರ ಮೇಲೆ ವಿಶೇಷ ಪ್ರೀತಿ ಹೊಂದಿದ್ದ ನಟ ಪುನೀತ್(Puneeth Rajkumar) ಅವರ ಪ್ರತಿಮೆಯನ್ನು(Statue) ನಗರದಲ್ಲಿ ನಿರ್ಮಾಣ ಮಾಡಬೇಕು ಎಂಬ ಅಭಿಮಾನಿಗಳ ಬೇಡಿಕೆ ಈಡೇರಿಸಲು ಸಚಿವ ಆನಂದ್ ಸಿಂಗ್
ಅವರು ನಗರದಲ್ಲಿ ನಟ ಪುನೀತ್ರಾಜಕುಮಾರ್ಪ್ರತಿಮೆ ಹಾಗೂ ಉದ್ಯಾನ(Park) ನಿರ್ಮಾಣ ಮಾಡಲು ಸಂಕಲ್ಪ ಮಾಡಿದ್ದಾರೆ. ಇದಕ್ಕಾಗಿ ಸಚಿವರು ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ನಗರದಲ್ಲಿ ಪುನೀತ್ರಾಜಕುಮಾರ ಉದ್ಯಾನ ನಿರ್ಮಿಸಿ ಪ್ರತಿಮೆ ನಿರ್ಮಾಣ ಮಾಡಿ ಸೂಕ್ತ ನಿರ್ವಹಣೆ ಮಾಡಲು ಸಚಿವರು ಮುಂದಾಗಿದ್ದಾರೆ.
ಹಂಪಿ, ಹೊಸಪೇಟೆ ಪುನೀತ್‌ಗೆ ಪಂಚಪ್ರಾಣ..!
ಪುನೀತ್ ರಾಜ್‌ಕುಮಾರ್ ಅವರಿಗೆ ಹಂಪಿ(Hampi), ಹೊಸಪೇಟೆ(Hosapete) ಎಂದರೆ ಪಂಚಪ್ರಾಣ. ಈ ಭಾಗದಲ್ಲಿ ಶೂಟಿಂಗ್(Shooting) ಇದ್ದರಂತೂ ಹೊಸಪೇಟೆಯ ಏಳುಕೇರಿಯ ತನ್ನ ಅಭಿಮಾನಿ ಬಳಗಕ್ಕೆ ಸ್ವತಃ ಫೋನ್ಮಾಡಿ ಬರಮಾಡಿಕೊಳ್ಳುತ್ತಿದ್ದರು.
ವಿಜಯನಗರದ(Vijayanagara) ನೆಲಕ್ಕೂ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಗೂ ಅವಿನಾಭಾವ ನಂಟಿದೆ. ರಣವಿಕ್ರಮ ಚಿತ್ರಕ್ಕೆ ಹಂಪಿಯ ತುಂಗಭದ್ರಾ ನದಿ(Tungabhadra River) ತಟದಲ್ಲಿ ಸೆಟ್ ನಿರ್ಮಿಸಿ ಶೂಟಿಂಗ್ ಮಾಡಲಾಗಿತ್ತು. ಅವರನ್ನು ಕಾಣಲು ದಿನಕ್ಕೆ ಹತ್ತು ಸಾವಿರಕ್ಕೂ ಅಧಿಕ ಅಭಿಮಾನಿಗಳು(Fans) ಆಗಮಿಸುತ್ತಿದ್ದರು. ಹೀಗಿದ್ದರೂ ಹೊಸಪೇಟೆ, ಹಂಪಿ, ಕಮಲಾಪುರ, ಕಂಪ್ಲಿ ಭಾಗದ ಅಭಿಮಾನಿಗಳು ಎಂದರೆ ಸಾಕು ಅವರನ್ನು ಹತ್ತಿರಕ್ಕೆ ಕರೆದು ಸೆಲ್ಫಿಗೆ ಅವಕಾಶ ಮಾಡಿಕೊಡುತ್ತಿದ್ದರು. ಜತೆಗೆ ಯೋಗಕ್ಷೇಮ ವಿಚಾರಿಸುತ್ತಿದ್ದರು.
ಪುನೀತ್ ರಾಜ್‌ಕುಮಾರ್‌ಗೆ ಚಿತ್ರ ಪ್ರದರ್ಶಕರ ಸಂಘದಿಂದ ಶ್ರದ್ಧಾಂಜಲಿ
ಕೂಡ್ಲಿಗಿ ವಿಸ್ಮಯ ಕಲ್ಲು ನೋಡಿ ವಾವ್ ಎಂದಿದ್ದ ಪುನೀತ್ ರಾಜಕುಮಾರ್
ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಕರಡಿಧಾಮದ ಪ್ರದೇಶಕ್ಕೆ ಶೂಟಿಂಗ್(shooting) ಉದ್ದೇಶದಿಂದ ಭೇಟಿ ನೀಡಿದ್ದ ಅಪ್ಪು ಅಲ್ಲಿನ ಅರಣ್ಯಪ್ರದೇಶದಲ್ಲಿನ ಅಪರಿಚಿತವಾದ ವಿಸ್ಮಯ ಕಲ್ಲುಗಳನ್ನು(Marvelous Rock) ನೋಡಿ ನಿಬ್ಬೆರಗಾಗಿ ವಾವ್ ಸೂಪರ್ ಎಂದಿದ್ದರು. ಬಯಲುಸೀಮೆಯಲ್ಲಿ ಇಂತಹ ಸ್ಥಳ ನೋಡಿ ಖುಷಿಯಾಗಿದೆ ಎಂದು ವಿಸ್ಮಯ ಕಲ್ಲುಗಳ ಮುಂದೆ ನಿಂತು ವನ್ಯಜೀವಿ ಸಾಕ್ಷ್ಯಚಿತ್ರದ(Documentary) ನಿರ್ದೇಶಕ ಅಮೋಘ ವರ್ಷ ಅವರೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದರು.
ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಕುರಿತಾದ ಸಾಕ್ಷಚಿತ್ರ ಚಿತ್ರಿಕರಣದಲ್ಲಿ ಪಾಲ್ಗೊಳ್ಳಲು ಸೆಪ್ಟೆಂಬರ್ 4ರಂದು ಶನಿವಾರ ಗುಡೇಕೋಟೆ ಕರಡಿಧಾಮಕ್ಕೆ ಭೇಟಿ ನೀಡಿ ನಂತರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ವನ್ಯಜೀವಿ ಸಾಕ್ಷ್ಯ ಚಿತ್ರದ ನಿರ್ದೆಶಕ ಅಮೋಘವರ್ಷ ಅವರ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ ವರ್ಲ್ಡ್ ಕರ್ನಾಟಕ(World Karnataka) ಎಂಬ ಹೆಸರಿನ ಸಾಕ್ಷಚಿತ್ರ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರು. ಬಳಿಕ ಕೆಲಹೊತ್ತು ಗುಡೇಕೋಟೆ ಕರಡಿಧಾಮ ವೀಕ್ಷಣೆ ಮಾಡಿದ್ದರು.