ಧಾರವಾಡ: ಐಸೋಲೇಶನ್‌ ವಾರ್ಡ್‌ನಲ್ಲಿ ಸೋಂಕಿತ ವ್ಯಕ್ತಿಯ ಕುಟುಂಬಸ್ಥರು

Kannadaprabha News   | Asianet News
Published : Mar 23, 2020, 07:35 AM IST
ಧಾರವಾಡ: ಐಸೋಲೇಶನ್‌ ವಾರ್ಡ್‌ನಲ್ಲಿ ಸೋಂಕಿತ ವ್ಯಕ್ತಿಯ ಕುಟುಂಬಸ್ಥರು

ಸಾರಾಂಶ

ಧಾರವಾಡದ ವ್ಯೆಕ್ತಿಗೆ ಕೊರೋನಾ ವೈರಸ್ ಸೋಂಕು ದೃಢ| ಐಸೋಲೇಶನ್‌ ವಾರ್ಡ್‌ನಲ್ಲಿ ಸೋಂಕಿತನನೊಂದಿಗೆ ಸಂಪರ್ಕದಲ್ಲಿದ್ದ ಕುಟುಂಬದಸ್ಥರು| ಸೋಂಕಿತನೊಂದಿಗೆ ಸಂಪರ್ಕಕ್ಕೆ ಯಾರಾರ‍ಯರು ಬಂದಿದ್ದಾರೆ ಎಂಬುದನ್ನು ಹಚ್ಚುವಲ್ಲಿ ನಿರತರವಾದ ಜಿಲ್ಲಾಡಳಿತ| 

ಧಾರವಾಡ[ಮಾ.23]: ಇಲ್ಲಿನ ಹೊಸಯಲ್ಲಾಪೂರ ವ್ಯಕ್ತಿಗೆ ಕೊರೋನಾ ವೈರಸ್‌ ಪತ್ತೆಯಾದ ಹಿನ್ನೆಲೆಯಲ್ಲಿ ಅವರೊಂದಿಗೆ ಸಂಪರ್ಕದಲ್ಲಿದ್ದ ಕುಟುಂಬದ ಸದಸ್ಯರನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಐಸೋಲೇಶನ್‌ ವಾರ್ಡ್‌ನಲ್ಲಿ ಇಡಲಾಗಿದೆ.

ಸೋಂಕಿನ ವ್ಯಕ್ತಿಯು ಕಳೆದ ಮಾ. 13ರಂದು ಧಾರವಾಡಕ್ಕೆ ಬಂದಿದ್ದು ಅಲ್ಲಿಂದ ಮಾ. 17ರ ವರೆಗೂ ಮನೆಯಲ್ಲಿದ್ದನು. ಹೀಗಾಗಿ ಆತನ ಕುಟುಂಬದವರಿಗೂ ಸೋಂಕು ತಗಲುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರನ್ನು ಸಹ ಐಸೋಲೇಶನ್‌ ವಾರ್ಡ್‌ನಲ್ಲಿ ಇರಿಸಲಾಗಿದೆ. 

ಕೊರೋನಾ ಕಾಟ: ಧಾರವಾಡದ ವ್ಯೆಕ್ತಿಗೆ ಕೋವಿಡ್ 19 ಸೋಂಕು ದೃಢ 

ಇದರೊಂದಿಗೆ ಆತನೊಂದಿಗೆ ಸಂಪರ್ಕಕ್ಕೆ ಯಾರಾರ‍ಯರು ಬಂದಿದ್ದಾರೆ ಎಂಬುದನ್ನು ಸಹ ಜಿಲ್ಲಾಡಳಿತ ಪತ್ತೆ ಹಚ್ಚುವಲ್ಲಿ ನಿರತರವಾಗಿದೆ.

PREV
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು