ಯಾವ ಕುಟುಂಬ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಹಾಲು ಉತ್ಪಾದನೆ ಮಾಡುತ್ತಿರುತ್ತದೋ ಅಂತಹ ಕುಟುಂಬ ಸುಖೀ ಕುಟುಂಬವಾಗಿ ಆರ್ಥಿಕವಾಗಿ ಸದೃಢವಾಗಿರುತ್ತದೆ ಎಂದು ರಾಜ್ಯ ರೇಷ್ಮೆ ನಿಗಮ ಮಾಜಿ ಅಧ್ಯಕ್ಷರು ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಹೇಳಿದರು.
ಶಿರಾ : ಯಾವ ಕುಟುಂಬ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಹಾಲು ಉತ್ಪಾದನೆ ಮಾಡುತ್ತಿರುತ್ತದೋ ಅಂತಹ ಕುಟುಂಬ ಸುಖೀ ಕುಟುಂಬವಾಗಿ ಆರ್ಥಿಕವಾಗಿ ಸದೃಢವಾಗಿರುತ್ತದೆ ಎಂದು ರಾಜ್ಯ ರೇಷ್ಮೆ ನಿಗಮ ಮಾಜಿ ಅಧ್ಯಕ್ಷರು ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಹೇಳಿದರು.
ತಾಲೂಕಿನ ಹುಲಿಕುಂಟೆ ಹೋಬಳಿಯ ಯಾದಲಡಕು ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ರೈತರು ವಲಸೆ ಹೋಗದೆ ಸ್ವಗ್ರಾಮದಲ್ಲಿ ತಮ್ಮ ಜೀವನ ಅಳವಡಿಸಿಕೊಂಡು, ಹೈನುಗಾರಿಕೆಯಲ್ಲಿ ತೊಡಗಿಕೊಳ್ಳುವುದರಿಂದ ಜೀವನದ ನಿರ್ವಹಣೆ ಸಾಧ್ಯ ಎಂದರು.
ತುಮಕೂರು ಹಾಲು ಒಕ್ಕೂಟ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ಮಾತನಾಡಿ, ಪ್ರತಿ ಕುಟುಂಬಕ್ಕೂಂದು ಹಸು ಸಾಕಾಣಿಕೆ ಮಾಡುವ ಮೂಲಕ ರೈತರು ಆರ್ಥಿಕ ಸಬಲರಾಗಿ ಸುಖ ಜೀವನ ನಡೆಸಿ ಅಭಿವೃದ್ಧಿ ಕಾಣಬಹುದು. ತುಮಕೂರು ಜಿಲ್ಲೆಯಲ್ಲಿ 1300 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು ಶಿರಾದಲ್ಲಿ 130 ಸಂಘಗಳಿವೆ. ಒಕ್ಕೂಟದಲ್ಲಿ ಸರಾಸರಿ 8 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದ್ದು, ಒಕ್ಕೂಟದ ವ್ಯಾಪ್ತಿಯಲ್ಲಿ ದಿನಕ್ಕೆ 9 ಲಕ್ಷ 37 ಸಾವಿರ ಹಾಲನ್ನು ಶೇಖರಣೆ ಮಾಡಲಾಗುತ್ತಿದೆ, ಅತಿವೃಷ್ಟಿಯಿಂದ ಮೇವಿನ ಕೋರತೆ ಮತ್ತು ಗಂಟು ರೋಗದಿಂದ ಹಾಲಿನ ಶೇಖರಣೆ ಕಡಿಮೆಯಾಗಿದೆ. ಆದ್ದರಿಂದ ರೈತರು ಹಾಲಿನ ಉತ್ಪಾದನೆಗೆ ಹೆಚ್ಚು ಒತ್ತು ನೀಡಿ ಎಂದರು.
ಕಾರ್ಯಕ್ರಮದಲ್ಲಿ ಯಾದಲಡಕು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಭಾಗ್ಯಮ್ಮ ದೇವರಾಜು, ಉಪಾಧ್ಯಕ್ಷೆ ಭಾಗ್ಯಮ್ಮ ರಂಗಪ್ಪ, ತುಮಕೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಮದುಸೂದನ್, ನಿಡಗಟ್ಟೆಚಂದ್ರಶೇಖರ್, ಶಿವಣ್ಣ, ಪ್ರಕಾಶ್, ವಿಸ್ತರಣಾಧಿಕಾರಿ ದಿವಾಕರ್ ಸಿಆರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬರಗೂರು ವಲಯ ಮೇಲ್ವಚಾರಕ ಗಿರೀಶ್, ಸಮಾಲೋಚಕ ಪ್ರವೀಣ್, ಶ್ರೀನಿವಾಸ್, ರಂಗಧಾಮಯ್ಯ, ಮಹಾಲಿಂಗಪ್ಪ, ಪಿಎನ್ ಗಂಗಾಧರ್, ಕಾರ್ಯದರ್ಶಿ ಕೆ. ವೀಣಾ ಚಿದಾನಂದ್, ಜಯಮ್ಮ, ರಾಜಣ್ಣ, ಟಿ.ರಂಗನಾಥಪ್ಪ, ತಿಮ್ಮಕ್ಕ ಶಿವಣ್ಣ ಸೇರಿದಂತೆ ಹಲವರು ಹಾಜರಿದ್ದರು.
10ಶಿರಾ2: ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಯಾದಲಡಕು ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಉದ್ಟಾಟನಾ ಕಾರ್ಯಕ್ರಮವನ್ನು ರೇಷ್ಮೆ ನಿಗಮ ಮಾಜಿ ಅಧ್ಯಕ್ಷ ಎಸ್.ಆರ್.ಗೌಡ ಉದ್ಘಾಟಿಸಿದರು. ತುಮಕೂರು ಹಾಲು ಒಕ್ಕೂಟ ಅಧ್ಯಕ್ಷ ಸಿವಿ. ಮಹಾಲಿಂಗಯ್ಯ ಸೇರಿದಂತೆ ಹಲವರು ಹಾಜರಿದ್ದರು.