ಬೈಎಲೆಕ್ಷನ್: ನಕಲಿ ಅಬಕಾರಿ ಅಧಿಕಾರಿ ಬಂಧನ

Published : Nov 30, 2019, 10:31 AM IST
ಬೈಎಲೆಕ್ಷನ್: ನಕಲಿ ಅಬಕಾರಿ ಅಧಿಕಾರಿ ಬಂಧನ

ಸಾರಾಂಶ

ಹುಣಸೂರು ಅಬಕಾರಿ ಇಲಾಖೆ ಅಧಿಕಾರಿ ಎಂದು ಹೇಳಿಕೊಂಡು ಬಾರ್‌ಗಳಲ್ಲಿ ವಸೂಲಿಗೆ ಇಳಿದಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಶಿಧರ (32) ಎಂಬಾತನನ್ನು ಹುಣಸೂರು ಪೊಲೀಸರ ವಶಕ್ಕೆ ಪಡೆದಿದ್ದಾರೆ.

ಮೈಸೂರು(ನ.30): ಹುಣಸೂರು ಅಬಕಾರಿ ಇಲಾಖೆ ಅಧಿಕಾರಿ ಎಂದು ಹೇಳಿಕೊಂಡು ಬಾರ್‌ಗಳಲ್ಲಿ ವಸೂಲಿಗೆ ಇಳಿದಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಶಿಧರ (32) ಎಂಬಾತನನ್ನು ಹುಣಸೂರು ಪೊಲೀಸರ ವಶಕ್ಕೆ ಪಡೆದಿದ್ದಾರೆ.

ಹಾಸನ ಜಿಲ್ಲೆಯ ಕಾರ್ಲೆಕೊಪ್ಲುವಿನ ಶಶಿಧರ್‌ ಅಧಿಕಾರಿ ಎಂದು ಹೇಳಿಕೊಂಡು ಬಾರ್‌ಗಳಲ್ಲಿ ವಸೂಲಿಗೆ ಇಳಿದಿದ್ದ. ನಿಮ್‌್ಮ ಬಾರ್‌ನಲ್ಲಿ ಹೆಚ್ಚು ಮಾರಾಟ ಇದೆ. ಚೆಕ್‌ ಮಾಡಬೇಕು ಎಂದು ಬೆದರಿಸಿ ವಸೂಲಿ ಮಾಡುತ್ತಿದ್ದ ಎಂದು ದೂರು ಬಂದ ಹಿನ್ನಲೆ ನಕಲಿ ಅಧಿಕಾರಿಯನ್ನು ಬಂಧಿಸಿದ ಹುಣಸೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಉಪಚುನಾವಣೆ ಸಮೀಪಿಸಿದ್ದು, ಅಬಕಾರಿ ಅಧಿಕಾರಿಗಳು, ಚುನಾವಣಾಧಿಕಾರಿಗಳು ಎಚ್ಚರಿಕೆಯಿಂದ ಅಕ್ರಮ ಮದ್ಯ ಸಾಗಣೆ ಬಗ್ಗೆ ಗಮನ ಹರಿಸಿದ್ದಾರೆ. ಈಗಾಗಲೇ ಹಲವು ಕಡೆ ಮದ್ಯ, ನಗದು ಸಾಗಾಟ ಪೊಲೀಸರಿಗೆ ಸಿಕ್ಕಿಬಿದ್ದಿದೆ.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ