ಬೆಂಗಳೂರು-ಮಂಗಳೂರು ರಾತ್ರಿ ರೈಲು ಕಣ್ಣೂರಿನಿಂದ ಕೋಝಿಕ್ಕೋಡ್‌ಗೆ ವಿಸ್ತರಣೆ

Published : Feb 01, 2024, 02:00 AM IST
ಬೆಂಗಳೂರು-ಮಂಗಳೂರು ರಾತ್ರಿ ರೈಲು ಕಣ್ಣೂರಿನಿಂದ ಕೋಝಿಕ್ಕೋಡ್‌ಗೆ ವಿಸ್ತರಣೆ

ಸಾರಾಂಶ

ನಂ.16511/512 ಬೆಂಗಳೂರು - ಕಣ್ಣೂರು - ಬೆಂಗಳೂರು ರಾತ್ರಿ ರೈಲನ್ನು ಕೋಝಿಕ್ಕೋಡ್‌ ವರೆಗೆ ವಿಸ್ತರಿಸುವ ಕುರಿತ ದಕ್ಷಿಣ ರೈಲ್ವೆಯ ಪ್ರಸ್ತಾವನೆಗೆ ರೈಲ್ವೆ ಸಚಿವಾಲಯ ಒಪ್ಪಿಗೆ ಸೂಚಿಸಿದೆ. ಈಗ ಇರುವ ವೇಳಾಪಟ್ಟಿಯಂತೆ ರೈಲು ಸಂಚರಿಸಲಿದ್ದು, ನಂ.16511 ರೈಲು ಕೋಝಿಕ್ಕೋಡ್‌ಗೆ ಮಧ್ಯಾಹ್ನ 12.40ಕ್ಕೆ ತಲುಪಲಿದೆ. ಈ ರೈಲು ತಲಶ್ಶೇರಿ, ವಡಕರ ಮತ್ತು ಕ್ವೈಲಾಂಡಿಯಲ್ಲಿ ನಿಲುಗಡೆಯಾಗಲಿದೆ. 16512 ರೈಲು ಸಂಜೆ 3.30ಕ್ಕೆ ಕೋಝಿಕ್ಕೋಡ್‌ನಿಂದ ಹೊರಡಲಿದೆ.

ಮಂಗಳೂರು(ಫೆ.01): ಯಶವಂತಪುರ - ಮಂಗಳೂರು ಸೆಂಟ್ರಲ್‌ (ಕಣ್ಣೂರು) ರಾತ್ರಿ ರೈಲು ಕೇರಳದಲ್ಲಿ ಎರಡನೇ ಬಾರಿಗೆ ವಿಸ್ತರಣೆಗೊಂಡಿದ್ದು, ಇದೀಗ ಕಣ್ಣೂರಿನಿಂದ ಕೋಝಿಕೋಡ್‌ ವರೆಗೆ ವಿಸ್ತರಣೆಯಾಗಿದೆ. ನಂ.16511/512 ಬೆಂಗಳೂರು - ಕಣ್ಣೂರು - ಬೆಂಗಳೂರು ರಾತ್ರಿ ರೈಲನ್ನು ಕೋಝಿಕ್ಕೋಡ್‌ ವರೆಗೆ ವಿಸ್ತರಿಸುವ ಕುರಿತ ದಕ್ಷಿಣ ರೈಲ್ವೆಯ ಪ್ರಸ್ತಾವನೆಗೆ ರೈಲ್ವೆ ಸಚಿವಾಲಯ ಒಪ್ಪಿಗೆ ಸೂಚಿಸಿದೆ. ಈಗ ಇರುವ ವೇಳಾಪಟ್ಟಿಯಂತೆ ರೈಲು ಸಂಚರಿಸಲಿದ್ದು, ನಂ.16511 ರೈಲು ಕೋಝಿಕ್ಕೋಡ್‌ಗೆ ಮಧ್ಯಾಹ್ನ 12.40ಕ್ಕೆ ತಲುಪಲಿದೆ. ಈ ರೈಲು ತಲಶ್ಶೇರಿ, ವಡಕರ ಮತ್ತು ಕ್ವೈಲಾಂಡಿಯಲ್ಲಿ ನಿಲುಗಡೆಯಾಗಲಿದೆ. 16512 ರೈಲು ಸಂಜೆ 3.30ಕ್ಕೆ ಕೋಝಿಕ್ಕೋಡ್‌ನಿಂದ ಹೊರಡಲಿದೆ.

ಈ ರೈಲನ್ನು ವಿಸ್ತರಿಸುವುದಿಲ್ಲ ಎಂದು ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ್‌ ಅವರು ದ.ಕ. ಸಂಸದ ನಳಿನ್‌ ಕುಮಾರ್‌ ಅವರಿಗೆ ನೀಡಿರುವ ಭರವಸೆಯ ಹೊರತಾಗಿಯೂ ಈ ವಿಸ್ತರಣೆ ಪ್ರಕ್ರಿಯೆ ನಡೆದಿದೆ. ಈ ರೈಲು 2007ರಲ್ಲಿ ಆರಂಭವಾಗಿದ್ದು, ಯಶವಂತಪುರ - ಮಂಗಳೂರು ಸೆಂಟ್ರಲ್‌ ರೈಲು ಮೊದಲ ಬಾರಿ 2009ರಲ್ಲಿ ಮಂಗಳೂರಿನಿಂದ ಕಣ್ಣೂರು ವರೆಗೆ ವಿಸ್ತರಣೆಯಾಗಿತ್ತು. ಕಾರವಾರಕ್ಕೆ ವಿಸ್ತರಿಸಬೇಕು ಎನ್ನುವ ಬೇಡಿಕೆ ಹೊರತಾಗಿಯೂ ಈ ರೈಲನ್ನು ಕಣ್ಣೂರಿಗೆ ವಿಸ್ತರಿಸಲಾಗಿತ್ತು.

ಕುಮಾರ ಪರ್ವತ ತಪ್ಪಲಲ್ಲಿ ಕಾಣಿಸಿದ ಒಂದೂವರೆ ಸಾವಿರಕ್ಕೂ ಹೆಚ್ಚು ಚಾರಣಿಗರು, ಕಂಗಾಲಾದ ಅರಣ್ಯಾಧಿಕಾರಿಗಳು!

ಮಂಗಳೂರು ಕೋಟಾ ಅಲಭ್ಯತೆ ಭೀತಿ:

ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಸಮಿತಿ ಈ ವಿಸ್ತರಣೆಯನ್ನು ವಿರೋಧಿಸಿದ್ದು, ಇದು ಕರಾವಳಿಯ ಪ್ರಯಾಣಿಕರಿಗೆ ಸೀಟು ಅಲಭ್ಯತೆಗೆ ಕಾರಣವಾಗಲಿದೆ. ಕೇರಳಿಗರು ಬೆಂಗಳೂರಿಗೆ ತೆರಳಲು ಇದೇ ರೈಲನ್ನು ಅವಲಂಬಿಸುವ ಕಾರಣ, ಕಾಯ್ದಿರಿಸದ ಸೀಟುಗಳಿರುವ ಬೋಗಿಗಳು ಮಂಗಳೂರು ತಲುಪುವಾಗಲೇ ಭರ್ತಿಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿವೆ.

PREV
Read more Articles on
click me!

Recommended Stories

ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧ: ಭಟ್ಕಳದಲ್ಲಿ ಮಧ್ಯರಾತ್ರಿಯಿಂದಲೇ ಪೆಟ್ರೋಲ್‌ ಬಂಕ್‌ನಲ್ಲಿ ಕ್ಯೂ ನಿಂತ ವಾಹನ ಸವಾರರು!
​KERC new power rates: ಬೇಸಿಗೆ ಆರಂಭದಲ್ಲೇ ಕರೆಂಟ್ ಶಾಕ್: ಯಾರಿಗೆ ವರ, ಯಾರಿಗೆ ಹೊರೆ? ಕೃಷಿ ಪಂಪ್‌ಸೆಟ್‌ಗಳಿಗೂ ದರ ಏರಿಕೆ ಬಿಸಿ?