ವೀರಪ್ಪ ಮೊಯ್ಲಿ ಅವರ ಹೇಳಿಕೆಯಿಂದ ಹಿಂದೂ ಸಮಾಜಕ್ಕೆ ನೋವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಿಂದೂಗಳಿಗೆ ಮಾತ್ರ ಪ್ರಧಾನಿಯಲ್ಲ, ದೇಶದ ಸರ್ವ ಜನರ ಪ್ರಧಾನಿ. ಅವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು ಮಾಜಿ ಸಿಎಂಗೆ ಶೋಭೆ ತರುವಂಥದ್ದಲ್ಲ: ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಣಿಕ್
ಮಂಗಳೂರು(ಫೆ.01): ಅಯೋಧ್ಯೆ ಶ್ರೀ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉಪವಾಸದ ಕುರಿತು ಅವಹೇಳನ ಮಾಡಿ, ಜಾತಿ ನಿಂದನೆ ಮಾಡಿರುವ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರು ನಿಶ್ಯರ್ಥವಾಗಿ ಹಿಂದೂ ಸಮಾಜದ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಣಿಕ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಪ್ಪ ಮೊಯ್ಲಿ ಅವರ ಹೇಳಿಕೆಯಿಂದ ಹಿಂದೂ ಸಮಾಜಕ್ಕೆ ನೋವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಿಂದೂಗಳಿಗೆ ಮಾತ್ರ ಪ್ರಧಾನಿಯಲ್ಲ, ದೇಶದ ಸರ್ವ ಜನರ ಪ್ರಧಾನಿ. ಅವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು ಮಾಜಿ ಸಿಎಂಗೆ ಶೋಭೆ ತರುವಂಥದ್ದಲ್ಲ ಎಂದು ಹೇಳಿದರು.
ಕುಮಾರ ಪರ್ವತ ತಪ್ಪಲಲ್ಲಿ ಕಾಣಿಸಿದ ಒಂದೂವರೆ ಸಾವಿರಕ್ಕೂ ಹೆಚ್ಚು ಚಾರಣಿಗರು, ಕಂಗಾಲಾದ ಅರಣ್ಯಾಧಿಕಾರಿಗಳು!
ದೇವರ ಪೂಜೆ ಕೇವಲ ಬ್ರಾಹ್ಮಣರು ಮಾಡಬೇಕೆಂದೇನೂ ಇಲ್ಲ. ಗೋಕರ್ಣ, ಕಾಳಿಕಾಂಬ ಸಹಿತ 10 ದೇವಸ್ಥಾನಗಳಲ್ಲಿ ಇತರ ಜಾತಿಯವರು ಪೂಜೆ ಮಾಡುತ್ತಾರೆ. ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ, ತಾಯಿ ಶಬರಿ, ಬೇಡರಾಜ ಗುಹ ಮುಂತಾದವರು ಹಿಂದುಳಿದ ವರ್ಗದವರಾದರೂ ರಾಮನ ಭಕ್ತಿಯಿಂದ ಪೂಜನೀಯರು. ಧರ್ಮದಲ್ಲಿ ಜಾತಿಗಿಂತ ನೀತಿ ಮುಖ್ಯ. ಹೀಗಿದ್ದರೂ ಪ್ರಧಾನಿಯ ಜಾತಿ ಹುಡುಕಿ ಮೊಯ್ಲಿ ಅವರು ಜಾತಿ ನಿಂದನೆ ಮಾಡಿದ್ದಾರೆ. ಅವರ ವಿರುದ್ಧ ದೂರು ನೀಡಲಾಗುವುದು ಎಂದು ಎಂ.ಬಿ. ಪುರಾಣಿಕ್ ಹೇಳಿದರು.
ಹನುಮಾಧ್ವಜ ಅಭಿಯಾನ:
ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ ಮಂಡ್ಯದಲ್ಲಿ ರಾಜಕೀಯ ಕಾರಣಕ್ಕಾಗಿ ಹನುಮಾಧ್ವಜ ಇಳಿಸಿರುವುದನ್ನು ವಿಶ್ವ ಹಿಂದು ಪರಿಷತ್, ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ. ಅಲ್ಲಿ ಮತ್ತೆ ಭಗವಾಧ್ವಜ ಹಾರಿಸದಿದ್ದರೆ ರಾಜ್ಯಾದ್ಯಂತ ಬೀದಿ ಬೀದಿಯಲ್ಲಿ ಹನುಮಾಧ್ವಜ ಅಭಿಯಾನ ನಡೆಸುತ್ತೇವೆ ಎಂದು ಎಚ್ಚರಿಸಿದರು. ರಾಷ್ಟ್ರಧ್ವಜ ಹಾರಾಟಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಅದನ್ನೂ ನಿಯಮ ಮೀರಿ ಮಾಡಿದ್ದಾರೆ ಎಂದರು. ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಕಾರ್ಯದರ್ಶಿ ಶಿವಾನಂದ ಮೆಂಡನ್ ಇದ್ದರು.