ಹಾಸನ: 137 ಲೀಟರ್ ಮದ್ಯ ನಾಶ..!

By Kannadaprabha NewsFirst Published Jul 28, 2019, 9:40 AM IST
Highlights

ಅವಧಿ ಮೀರಿದ ಅಂದ್ರೆ ಡೇಟ್ ಬಾರ್ ಆದ ಮದ್ಯವನ್ನ ಮಾರಾಟ ಮಾಡುವಂತಿಲ್ಲ. ಇದು ಸೇವೆನೆಗೆ ಯೋಗ್ಯವಲ್ಲದ ಕಾರಣ ಇದನ್ನು ನಿಷೇಧಿಸಲಾಗಿದೆ. ನಿಯಮವನ್ನೂ ಲೆಕ್ಕಿಸದೆ ಅವಧಿ ಮೀರಿದ ಮದ್ಯ ಮಾರಾಟ ಮಾಡುತ್ತಿದ್ದಲ್ಲಿ ಅಧಿಕಾರಿಗಳೇ ಬಂದು ಮದ್ಯವನ್ನು ನಾಶ ಮಾಡಿರೋ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ(ಜು.28): ನಗರದ ಹೊಳೆನರಸೀಪುರ ರಸ್ತೆಯಲ್ಲಿ ಇರುವ ಕೆಎಸ್‌ಬಿಸಿಎಲ್‌ ಮದ್ಯ ಮಳಿಗೆಯಲ್ಲಿ ಅವಧಿ ಮೀರಿದ ಮಾನವ ಸೇವನೆಗೆ ಯೋಗ್ಯವಲ್ಲದ ಮದ್ಯವನ್ನು ನಾಶಪಡಿಸಲಾಯಿತು.

ಅವಧಿ ಮೀರಿದ ಅಂದ್ರೆ ಡೇಟ್ ಬಾರ್ ಆದ ಮದ್ಯವನ್ನ ಮಾರಾಟ ಮಾಡುವಂತಿಲ್ಲ. ಇದು ಸೇವೆನೆಗೆ ಯೋಗ್ಯವಲ್ಲದ ಕಾರಣ ಇದನ್ನು ನಿಷೇಧಿಸಲಾಗಿದೆ. ನಿಯಮವನ್ನೂ ಲೆಕ್ಕಿಸದೆ ಅವಧಿ ಮೀರಿದ ಮದ್ಯ ಮಾರಾಟ ಮಾಡುತ್ತಿದ್ದಲ್ಲಿ ಅಧಿಕಾರಿಗಳೇ ಬಂದು ಮದ್ಯವನ್ನು ನಾಶ ಮಾಡಿರೋ ಘಟನೆ ಹಾಸನದಲ್ಲಿ ನಡೆದಿದೆ.

ರಾಜ್ಯದಲ್ಲಿ ಮದ್ಯಪಾನ ನಿಷೇಧಕ್ಕೆ ಆಂದೋಲನ

ಅವಧಿ ಮೀರಿದ ಮದ್ಯ:

15 ರಟ್ಟಿನ ಪೆಟ್ಟಿಗೆ ಹಾಗೂ 93 ಪೌಚ್‌ನಲ್ಲಿ ಒಟ್ಟು 137.970 ಲೀಟ​ರ್ ಅವಧಿ ಮೀರಿದ ಮದ್ಯ ದಾಸ್ತಾನು ಇಡಲಾಗಿತ್ತು. ಇದನ್ನು ಅಧಿಕಾರಿಗಳು ವಶಪಡಿಸಿದ್ದಾರೆ.

ಜಿಲ್ಲಾ ಅಬಕಾರಿ ಉಪ ನಿರೀಕ್ಷರ ಉಸ್ತುವಾರಿಯಲ್ಲಿ ಕಾರ್ಯಾಚರಣೆ:

15 ರಟ್ಟಿನ ಪೆಟ್ಟಿಗೆ ಮತ್ತು 93 ಪೌಚ್‌ನಲ್ಲಿ ಇದ್ದ ಒಟ್ಟು 137.970 ಲೀಟ​ರ್‍ಸ್ ಮದ್ಯದ ದಾಸ್ತಾನುಗಳನ್ನು ಜಿಲ್ಲಾ ಅಬಕಾರಿ ಆಯುಕ್ತರ ಆದೇಶದಂತೆ ಅಬಕಾರಿ ಉಪ ಅಧೀಕ್ಷಕ ಜಿ.ವಿ. ವಿಜಯಕುಮಾರ್‌ ಅವರ ನೇರ ಉಸ್ತುವಾರಿಯಲ್ಲಿ ಹಾಗೂ ಅಬಕಾರಿ ನಿರೀಕ್ಷಕ ರಾಜಶೇಖರ್‌ ಆರ್‌. ಕರಡಕಲ್‌, ವ್ಯವಸ್ಥಾಪಕ ಜಗದೀಶ್‌ ಎನ್‌.ಡಿ. ಮದ್ಯ ನಾಶ ಪಡಿಸಲಾಯಿತು ಎಂದು ಅಬಕಾರಿ ಉಪ ಅಧೀಕ್ಷಕ ಜಿ.ವಿ. ವಿಜಯಕುಮಾರ್‌ ತಿಳಿಸಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!