ಪಿರಿಯಾಪಟ್ಟಣ (ಅ.11): ಕಾಂಗ್ರೆಸ್‌ನ (Congress) ತತ್ವ ಸಿದ್ಧಾಂತ ಒಪ್ಪಿ ಪಕ್ಷ ಸೇರ್ಪಡೆಯಾಗುವವರಿಗೆ ಸದಾ ಸ್ವಾಗತ ಎಂದು ಮಾಜಿ ಶಾಸಕ ಕೆ. ವೆಂಕಟೇಶ್ (K Venkatesh) ಹೇಳಿದರು.
ತಾಲೂಕಿನ ರಾವಂದೂರು ಹೋಬಳಿ ಹಂಡಿತವಳ್ಳಿ ಗ್ರಾಮದಲ್ಲಿ ನಡೆದ ಗ್ರಾಪಂ ಮಟ್ಟದ ಪ್ರಜಾಪ್ರತಿನಿಧಿಗಳ ಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
undefined
ಡಿಕೆಶಿ- ರಮೇಶ್ ಜಾರಕಿಹೊಳಿ ಆಪ್ತರ ಭೇಟಿ : ಕುತೂಹಲದ ನಡೆ
ಕೆಪಿಸಿಸಿ (KPCC) ಸೂಚನೆಯಂತೆ ತಾಲೂಕಿನ ಪ್ರತಿ ಗ್ರಾಪಂ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಕಾರ್ಯಕರ್ತರಿಗೆ ನೈತಿಕ ಬಲ ತುಂಬುವ ಮೂಲಕ ಪಕ್ಷದಲ್ಲಿ ಸಕ್ರಿಯ ಹಾಗೂ
ಕ್ರಿಯಾಶೀಲರಾಗಿರುವರನ್ನು ಗುರುತಿಸಿ ಸಮಿತಿಗಳನ್ನು ರಚಿಸಿ ಅಲ್ಲಿನ ಪದಾಧಿಕಾರಿಗಳು ಕೆಪಿಸಿಸಿಯೊಂದಿಗೆ ನೇರ ಸಂಪರ್ಕದಲ್ಲಿದ್ದು, ತಳಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ ಎಂದರು.
ಪಿರಿಯಾಪಟ್ಟಣ (Piriyapatna) ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ. ಸ್ವಾಮಿ, ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮತ್‌ಜಾನ್ ಬಾಬು ಅವರು ಪಕ್ಷ ಸಂಘಟನೆ ಕುರಿತು ಮಾತನಾಡಿದರು.
ಜೆಡಿಎಸ್ (JDS) ಪಕ್ಷ ತೊರೆದು ಮುಖಂಡರಾದ ನಂದೀಶ್, ಜವರಯ್ಯ, ಮಲ್ಲೇಶ್, ಸುಬ್ರಹ್ಮಣ್ಯ, ದಶರಥಶೆಟ್ಟಿ, ಸತೀಶ್ ಮತ್ತು ನಾಗರ ಘಟ್ಟದ ಗ್ರಾಮದ ಹಲವರು ಮಾಜಿ ಶಾಸಕ ಕೆ. ವೆಂಕಟೇಶ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಬಿಎಸ್‌ವೈ ರಾಜೀನಾಮೆ ಲಾಭ ಪಡೆಯಲು ಕಾಂಗ್ರೆಸ್ ತಂತ್ರ :ದೊಡ್ಡ ಹುದ್ದೆ ಆಫರ್
ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ಮುತ್ತುರಾಣಿ, ಎಸ್ಸಿ ಘಟಕದ ಅಧ್ಯಕ್ಷ ಪಿ. ಮಹದೇವ್, ಯೂತ್ ಕಾಂಗ್ರೆಸ್ ಅಧ್ಯಕ್ಷ ರಘುಗೌಡ, ಸಾಮಾಜಿಕ ಜಾಲತಾಣ ಜಿಲ್ಲಾ ಕಾರ್ಯದರ್ಶಿ ಜೆ. ಮೋಹನ್, ಗ್ರಾಪಂ ಅಧ್ಯಕ್ಷ ಸ್ವಾಮಿಗೌಡ, ಉಪಾಧ್ಯಕ್ಷೆ ಸರೋಜಮ್ಮ, ಮುಖಂಡರಾದ ಮಹದೇವ, ಪುಟ್ಟರಾಜು, ಪುಟ್ಟಸ್ವಾಮಿಶೆಟ್ಟಿ, ರಾಮಶೆಟ್ಟಿ, ಚೆಲುವೇಗೌಡ, ಕೆಲ್ಲೂರು ಗ್ರಾಪಂ ಸದಸ್ಯರಾದ ಮಹೇಶ್, ಚಾಮಯ್ಯ ಇದ್ದರು.
40 ಮಂದಿ ಸೇರ್ಪಡೆ ವಿಚಾರ ತಿಳಿಸಿದ್ದ ಸತೀಶ್ ಜಾರಕಿಹೊಳಿ
40 ಜನ ಬಿಜೆಪಿ (BJP) ಶಾಸಕರು ಕಾಂಗ್ರೆಸ್ (Congress) ಪಕ್ಷಕ್ಕೆ ಬರ್ತಾರೆ ಎನ್ನುವ ನಿಟ್ಟಿನಲ್ಲಿ ವರಿಷ್ಠರ ಮಟ್ಟದಲ್ಲಿ ಚರ್ಚೆ ಆಗಿರುವುದು ನಿಜ ಎಂದು ಕೆಪಿಸಿಸಿ(KPCC) ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ (Satish jarkiholi) ಹೊಸ ಬಾಂಬ್ ಸಿಡಿಸಿದ್ದಾರೆ.
ಹುಕ್ಕೇರಿ ತಾಲೂಕಿನ ಕರಗುಪ್ಪಿ ಗ್ರಾಮದಲ್ಲಿ ಅವರ ಪುತ್ರ ರಾಹುಲ್ ಜಾರಕಿಹೊಳಿ (Rahul jarkiholi) ಅವರ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು(Bengaluru) ವರಿಷ್ಠರ ಹಂತದಲ್ಲಿ ಚರ್ಚೆ ನಡೆದಿರೋದು ನಿಜ. ಯಾರು ಎಷ್ಟು ಜನ ಬರ್ತಾರೆ ಅಂತ ನನಗೆ ಮಾಹಿತಿ ಇಲ್ಲ. ಆದರೆ ಶಾಸಕರು ಕಾಂಗ್ರೆಸ್‌ಗೆ ಬರುವ ಬಗ್ಗೆ ಚರ್ಚೆ ಆಗಿದ್ದು ನಿಜ ಎಂದು ಹೇಳಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ್(Lakshmi Hebbalkar) ವಿರುದ್ದ ಮಾಜಿ ಶಾಸಕ ಸಂಜಯ್ ಪಾಟೀಲ್ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಮಾತನಾಡಿದ ಸತೀಶ, ಸಂಜಯ್ ಪಾಟೀಲ್ ಅವರ ಇಂತಹ ಹೇಳಿಕೆಗಳು ಹೊಸದೇನಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಹೇಳಿಕೆ ನೀಡೋದು ಸರಿಯಲ್ಲ ಎಂದರು. ಇನ್ನೂ ಬೆಳಗಾವಿ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಅಂತಿಮವಾಗಿ ರಾಜ್ಯ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.